HEALTH TIPS

ಕೆಲವು ಸಿಬ್ಬಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾದ್ರೆ ಇಡೀ ಕಚೇರಿ ಮುಚ್ಚಬೇಕಿಲ್ಲ: ಕೇಂದ್ರ ಸರ್ಕಾರ

 
      ನವದೆಹಲಿ: ರಾಷ್ಟ್ರವ್ಯಾಪಿ ಲಾಕ್ ಡೌನ್‍ನ ನಾಲ್ಕನೇ ಹಂತಕ್ಕೆ ಸಡಿಕೆ ನೀಡಿದ್ದು ಸರ್ಕಾರಿ ಕಚೇರಿಗಳು ಮತ್ತು ಕೆಲಸದ ಸ್ಥಳಗಳನ್ನು ತೆರೆಯುವುದಕ್ಕೆ ಅವಕಾಶ ನೀಡಿದ್ದು ಇದರೊಂದಿಗೆ ಕೇಂದ್ರ ಸರ್ಕಾರವೂ ಹೊಸದೊಂದು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
        ಕೋವಿಡ್-19 ಹರಡುವುದನ್ನು ತಡೆಗಟ್ಟುವ ಮತ್ತು ಪ್ರತಿಕ್ರಿಯೆ ನೀಡುವ ಕ್ರಮಗಳ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾರ್ಗಸೂಚಿಗಳನ್ನು ಹೊರಡಿಸಿದೆ.
      ಮಾರ್ಗಸೂಚಿಗಳ ಪ್ರಕಾರ, ಕಚೇರಿಯಲ್ಲಿ ಒಂದೆರೆಡು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಬಂದರೆ ಅದರಿಂದ ಸಂಪೂರ್ಣ ಕಚೇರಿ ಕಟ್ಟಡವನ್ನು ಮುಚ್ಚುವ ಅಗತ್ಯವಿಲ್ಲ ಮತ್ತು ಕಚೇರಿಯ ಇತರ ಪ್ರದೇಶಗಳಲ್ಲಿ ಕೆಲಸ ಸ್ಥಗಿತಗೊಳಿಸಬೇಕಾಗಿಲ್ಲ.  ಸೋಂಕು ಪ್ರಕ್ರಿಯೆಯು ಕಳೆದ 48 ಗಂಟೆಗಳಲ್ಲಿ ರೋಗಿಯು ಭೇಟಿ ನೀಡಿದ ಪ್ರದೇಶಗಳಿಗೆ ಸೀಮಿತವಾಗಿರುತ್ತದೆ ಎಂದು ಹೇಳಿದೆ. ವೈರಸ್ ವಿಮುಕ್ತಿಗೊಳಿಸಲು ಇಡೀ ಕಟ್ಟಡವನ್ನು 48 ಗಂಟೆಗಳ ಕಾಲ ಮೊಹರು ಮಾಡಬೇಕಾಗುತ್ತದೆ ಎಂದು ಸಚಿವಾಲಯ ಹೇಳಿದೆ. ಕಟ್ಟಡವು ಸಮರ್ಪಕವಾಗಿ ಸೋಂಕುರಹಿತವಾಗುವವರೆಗೆ ಮತ್ತು ಮರು ಉದ್ಯೋಗಕ್ಕೆ ಸೂಕ್ತವೆಂದು ಘೋಷಿಸುವವರೆಗೆ ಎಲ್ಲಾ ಸಿಬ್ಬಂದಿ ಮನೆಯಿಂದ ಕೆಲಸ ಮಾಡಬಹುದು.
       ಯಾವುದೇ ವ್ಯಕ್ತಿಯು ಕೊರೋನಾ ವೈರಸ್ ಸೋಂಕು ಅನ್ನು ಸೂಚಿಸುವ ರೋಗಲಕ್ಷಣಗಳಿಂದ ಬಳಲುತ್ತಿದ್ದರೆ, ಆ ವಿಚಾರವನ್ನು ತಕ್ಷಣವೇ ಸಂಬಂಧಪಟ್ಟ ಕೇಂದ್ರ ಅಥವಾ ರಾಜ್ಯ ಆರೋಗ್ಯ ಅಧಿಕಾರಿಗಳಿಗೆ 1075 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ವರದಿ ಮಾಡಬೇಕು ಎಂದು ಸಚಿವಾಲಯ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries