HEALTH TIPS

ಅಮೆರಿಕ, ಬ್ರಿಟನ್ ಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾ ವೈರಸ್ ಸೋಂಕು ಪ್ರಸರಣ ವೇಗ ಕಡಿಮೆ: ಅಧ್ಯಯನ


     ನವದೆಹಲಿ: ಭಾರತದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದ್ದರೂ, ವೈರಸ್ ನಿಯಂತ್ರಣದಲ್ಲಿದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆಯೊಂದರ ಅಧ್ಯಯನ ತಿಳಿಸಿದೆ.
     ವಿಶ್ವದ ಬಲಿಷ್ಠ ರಾಷ್ಟ್ರಗಳೇ ಮಾರಕ ಕೊರೋನಾ ವೈರಸ್ ಎದುರು ಮಂಡಿಯೂರಿದ್ದು, ಅಮೆರಿಕ, ಬ್ರಿಟನ್, ಇಟಲಿಯಂತಹ ದೇಶಗಳಲ್ಲಿ ಕೊರೋನಾ ವೈರಸ್ ನಿಯಂತ್ರಣ ಅಸಾಧ್ಯ ಎಂಬುವಷ್ಟ್ರ ಮಟ್ಟಿದೆ ಸೋಂಕಿತರ ಸಂಖ್ಯೆ ಬೆಳೆಯುತ್ತಿದೆ. ಆದರೆ 130 ಕೋಟಿಗೂ ಅಧಿಕ ಮತ್ತು  ಅಪಾರ ಜನಸಂಖ್ಯೆಯನ್ನು ಹೊಂದಿರುವ ಭಾರತ ಮಾತ್ರ ಇದಕ್ಕೆ ತದ್ವಿರುದ್ಧ ಎಂಬಂತೆ ಕೊರೋನಾ ವೈರಸ್ ಅನ್ನು ಸಮರ್ಪಕವಾಗಿ ನಿಯಂತ್ರಿಸುತ್ತಿದೆ ಎಂದು Worldometers ಹೇಳಿದೆ.
        Worldometers ನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ ತಂತ್ರಜ್ಞರು, ಸಂಶೋಧನಾಕಾರರು, ಸ್ವಯಂಸೇವಾ ಕಾರ್ಯಕರ್ತರಿದ್ದು, ವಿಶ್ವಾದ್ಯಂತ ಕೊರೋನಾ ವೈರಸ್ ದತ್ತಾಂಶಗಳ ಮೇಲೆ ಈ ತಂಡ ಅಧ್ಯಯನ ನಡೆಸುತ್ತಿದೆ. ವೈರಸ್ ಪ್ರಸರಣ, ಪ್ರಸರಣದ ವೇಗ ಮತ್ತು ಅದರ  ನಿಯಂತ್ರಕ್ಕೆ ವಿವಿಧ ಸರ್ಕಾರಗಳು ಕೈಗೊಳ್ಳುತ್ತಿರುವ ಕ್ರಮಗಳನ್ನು ಅವಲೋಕಿಸಿ ಆ ದತ್ತಾಂಶಗಳ ಕುರಿತು ಅಧ್ಯಯನ ನಡೆಸುತ್ತಿದೆ.
        ಈ ಪೈಕಿ ಭಾರತದಲ್ಲಿನ ಕೊರೋನಾ ವೈರಸ್ ಸೋಂಕು ಪ್ರಸರಣ ಕುರಿತೂ Worldometers  ಅಧ್ಯಯನ ನಡೆಸುತ್ತಿದ್ದು, ಇತರೆ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಸೋಂಕು ಪ್ರಸರಣದ ವೇಗ ಕಡಿಮೆ ಇದೆ ಎಂದು ಅಭಿಪ್ರಾಯಪಟ್ಟಿದೆ. ಭಾರತದಲ್ಲಿ ಮೊದಲ 100 ಪಾಸಿಟಿವ್  ಪ್ರಕರಣಗಳು ಪತ್ತೆಯಾದ 64 ದಿನಗಳ ಬಳಿಕ ಸೋಂಕು ಪ್ರಕರಣಗಳ ಸಂಖ್ಯೆ 1 ಲಕ್ಷ ಗಡಿ ದಾಟಿದೆ. ಇದೇ ಅಂಕಿ ಅಂಶಗಳನ್ನು ಅಮೆರಿಕ ಮತ್ತು ಸ್ಪೇನ್ ದೇಶಗಳಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಸೋಂಕು ಪ್ರಸರಣ ಸಾಕಷ್ಟು ನಿಯಂತ್ರಣದಲ್ಲಿದೆ. ಅಮೆರಿಕ ಮತ್ತು ಸ್ಪೇನ್ ನಲ್ಲಿ  ಸೋಂಕು ಪ್ರಸರಣದ ವೇಗೆ ಭಾರತಕ್ಕಿಂತ 2 ರಿಂದ ಮೂರು ಪಟ್ಟು ಅಧಿಕವಾಗಿತ್ತು ಎಂದು ಹೇಳಿದೆ.
      ಇಷ್ಟೇ ಏಕೆ ವಿಶ್ವದಲ್ಲೇ ಅತ್ಯಂತ ಸುಸಜ್ಜಿತ ವೈದ್ಯಕೀಯ ಸೌಕರ್ಯಗಳನ್ನು ಹೊಂದಿರುವ ಜರ್ಮನಿ, ಫ್ರಾನ್ಸ್, ಬ್ರಿಟನ್ ನಲ್ಲೇ ಸೋಂಕ ಪ್ರಸರಣ ಭಾರತಕ್ಕಿಂತ ಅಧಿಕವಾಗಿತ್ತು. ಭಾರತದಲ್ಲಿ 64 ದಿನಗಳಲ್ಲಿ ಸೋಂಕಿತರ ಸಂಖ್ಯೆ 1ಲಕ್ಷಕ್ಕೆ ಏರಿಕೆಯಾಗಿತ್ತು. ಆದರೆ ಇಷ್ಟೇ ಪ್ರಮಾಣದ  ಸೋಂಕಿತರ ಸಂಖ್ಯೆ ಇತರೆ ದೇಶಗಳಲ್ಲಿ ಕಡಿಮೆ ದಿನಗಳಲ್ಲಿ ಏರಿಕೆಯಾಗಿತ್ತು. ಅಮೆರಿಕ, ಸ್ಪೇನ್, ಜರ್ಮನಿಯಲ್ಲಿ 25, 30 ಮತ್ತು 35 ದಿನಗಳಲ್ಲೇ ಸೋಂಕಿತರ ಸಂಖ್ಯೆ ಲಕ್ಷ ಗಡಿ ದಾಟಿತ್ತು. ಅಂತೆಯೇ ಇಟಲಿಯಲ್ಲಿ 365 ದಿನಗಳಲ್ಲಿ, ಫ್ರಾನ್ಸ್ ನಲ್ಲಿ 39 ದಿನ, ಬ್ರಿಟನ್ ನಲ್ಲಿ 42 ದಿನಗಳಲ್ಲಿ  ಸೋಂಕಿತರ ಸಂಖ್ಯೆ 1 ಲಕ್ಷ ದಾಟಿತ್ತು. ಭಾರತದಲ್ಲಿ 64 ದಿನಗಳಿಗೆ ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದೆ. ವಿಶ್ವದ 2ನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಂತಹ ದೊಡ್ಡ ಪ್ರಮಾಣದ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ವೇಗ ಅತ್ಯಂತ ಕಡಿಮೆ ಎಂದು ಸಂಶೋಧಕರು  ಅಭಿಪ್ರಾಯಪಟ್ಟಿದ್ದಾರೆ.
      ಕೇವಲ ಸೋಂಕಿತರ ಸಂಖ್ಯೆಯಲ್ಲಿ ಮಾತ್ರವಲ್ಲ ಕೊರೋನಾ ಸಾವಿನ ವೇಗದಲ್ಲೂ ಭಾರತ ಅತ್ಯಂತ ನಿಯಂತ್ರಣದಲ್ಲಿದ್ದು, ಇಲ್ಲಿನ ಸಾವಿನ ಸರಾಸರಿ ಶೇ.3.2ರಷ್ಟಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries