HEALTH TIPS

ಚಟ್ಟಂಚಾಲ್ ಆರೋಗ್ಯ ಕೇಂದ್ರದಲ್ಲಿ 1.73 ಕೋಟಿ ರೂ.ವೆಚ್ಚದಲ್ಲಿ ವಿಶೇಷ ಬ್ಲಾಕ್ ನಿರ್ಮಾಣಕ್ಕೆ ಮಂಜೂರಾತಿ


         ಕಾಸರಗೋಡು: ಚಟ್ಟಂಚಾಲ್ ಆರೋಗ್ಯ ಕೇಂದ್ರದಲ್ಲಿ 1.73 ಕೋಟಿ ರೂ.ವೆಚ್ಚದಲ್ಲಿ ವಿಶೇಷ ಬ್ಲಾಕ್ ನಿರ್ಮಿಸಲಾಗುವುದು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಯೋಜನೆಯಲ್ಲಿ ಅಳವಡಿಸಿ ಈ ಕಟ್ಟಡ ನಿರ್ಮಿಸಲಿದ್ದು, ಆಡಳಿತೆ ಮಂಜೂರಾತಿ ನೀಡಲಾಗಿದೆ. 
        ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಜಿಲ್ಲಾ ಮಟ್ಟದ ಸಮಿತಿ ಸಭೆ ಈ ಮಂಜೂರಾತಿ ನೀಡಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
          ಚೆಮ್ನಾಡ್ ಗ್ರಾಮ ಪಂಚಾಯತ್ ತನ್ನ ಪಾಲು ರೂಪದಲ್ಲಿ 25 ಲಕ್ಷ ರೂ., ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನಿಂದ 148 ಲಕ್ಷ ರೂ. ಒದಗಿಸಲಾಗುವುದು. ಈ ಬ್ಲಾಕ್‍ನಲ್ಲಿ 2 ಡಾಕ್ಟರ್‍ಗಳ ಕೊಠಡಿ, 2 ನಿಗಾ ಕೊಠಡಿಗಳು, ಫಾರ್ಮಸಿ, ಡ್ರೆಸ್ಸಿಂಗ್ ಕೊಠಡಿ, ಲ್ಯಾಬ್, ರ್ಯಾಂಪ್ ಇತ್ಯಾದಿ ಸೌಲಭ್ಯಗಳಿರುವುವು ಎಂದು ತಿಳಿಸಲಾಗಿದೆ.
       ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್, ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಲೋಕೋಪಯೋಗಿ ಕಟ್ಟಡ ನಿರ್ಮಾಣ ವಿಭಾಗ ಸಹಾಯಕ ಕಾರ್ಯಕಾರಿ ಎಂಜಿನಿಯರ್ ದಯಾನಂದ ಕೆ. ಸಹಿತ ಸದಸ್ಯರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries