HEALTH TIPS

ಕೊವಿಡ್-19: ಭಾರತದಲ್ಲಿ ಮರಣ ಪ್ರಮಾಣ ವಿಶ್ವದಲ್ಲೇ ಅತ್ಯಂತ ಕಡಿಮೆ, ಪ್ರತಿ ಲಕ್ಷಕ್ಕೆ 0.3 ರಷ್ಟಿದೆ - ಕೇಂದ್ರ

       
          ನವದೆಹಲಿ: ದೇಶದಲ್ಲಿ ಲಾಕ್ ಡೌನ್ ಸಡಿಲಗೊಳಿಸಿದ ನಂತರ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ಆದಾಗ್ಯೂ ಭಾರತದಲ್ಲಿ ಸಾವಿನ ಪ್ರಮಾಣ ವಿಶ್ವದಲ್ಲೇ ಅತ್ಯಂತ ಕಡಿಮೆಯಿದ್ದು, ಪ್ರತಿ ಲಕ್ಷಕ್ಕೆ 0.3 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಂಗಳವಾರ ತಿಳಿಸಿದೆ.
        ಕೋರನಾದಿಂದಾಗಿ ಮೃತಪಟ್ಟವರ ಪ್ರಮಾಣ ಭಾರತದಲ್ಲಿ ಅತಿ ಕಡಿಮೆ ಇದೆ. ಜಾಗತಿಕ ಸರಾಸರಿ, ಪ್ರತಿ ಲಕ್ಷ ಜನರಿಗೆ 4.4 ಇದೆ. ಆದರೆ, ಭಾರತದಲ್ಲಿ ಈ ಪ್ರಮಾಣ 0.3 ರಷ್ಟು ಮಾತ್ರ. ಇದು ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಅವರು ಹೇಳಿದ್ದಾರೆ.
     ಲಾಕ್ ಡೌನ್, ಸರಿಯಾದ ಸಮಯಕ್ಕೆ ಸೋಂಕಿತರನ್ನು ಪತ್ತೆ ಹಚ್ಚುವುದು ಹಾಗೂ ಕೊವಿಡ್-19 ಪ್ರಕರಣಗಳ ಉತ್ತಮ ನಿರ್ವಹಣೆಯಿಂದ ಭಾರತದಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಕಟ್ಟುನಿಟ್ಟಾದ ಕ್ರಮಗಳ ಮೂಲಕ ನಾವು ಸೋಂಕು ವ್ಯಾಪಕವಾಗಿ ಹರಡುವುದನ್ನು ತಡೆದಿದ್ದೇವೆ ಎಂದು ಅಗರ್ವಾಲ್ ಅವರು ತಿಳಿಸಿದ್ದಾರೆ. ಕೊವಿಡ್-19 ನಿಂದ ಇಲ್ಲಿಯವರೆಗೆ ಒಟ್ಟು 60,490 ರೋಗಿಗಳು ಚೇತರಿಸಿಕೊಂಡಿದ್ದಾರೆ. ಚೇತರಿಕೆಯ ಪ್ರಮಾಣವು ಸುಧಾರಣೆಯಾಗುತ್ತಿದೆ ಮತ್ತು ಪ್ರಸ್ತುತ ಇದು ಶೇ.41.61 ಪ್ರತಿಶತದಷ್ಟಿದೆ. ಸಾವಿನ ಪ್ರಮಾಣವು ವಿಶ್ವದ ಅತ್ಯಂತ ಕೆಳಮಟ್ಟದಲ್ಲಿದೆ ಮತ್ತು ಇದು ಈಗ 2.87 ಪ್ರತಿಶತದಷ್ಟಿದೆ" ಎಂದು ಅಗರ್ವಾಲ್ ಹೇಳಿದರು.
      ಬೆಲ್ಜಿಯಂನಲ್ಲಿ ಕೊರೋನಾಗೆ ಅತಿ ಹೆಚ್ಚು ಜನ ಬಲಿಯಾಗುತ್ತಿದ್ದು, ಅಲ್ಲಿ ಸಾವಿನ ಪ್ರಮಾಣ ಪ್ರತಿ ಲಕ್ಷಕ್ಕೆ 81.2 ರಷ್ಟಿದೆ. ಅಮೆರಿಕದಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಸಾವಿನ ಪ್ರಮಾಣ 26.6ರಷ್ಟಿದೆ. ಬ್ರಿಟನ್‍ನಲ್ಲಿ ಇದು 52.1ರಷ್ಟು ಮತ್ತು ಇಟಲಿಯಲ್ಲಿ 52.1ರಷ್ಟು ಇದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries