HEALTH TIPS

ಕೋವಿಡ್-19: ಕಾಸರಗೋಡಿನ ಒಬ್ಬರ ಸಹಿತ 14ಮಂದಿಗೆ ಸೋಂಕು

 
        ಕಾಸರಗೋಡು: ಜಿಲ್ಲೆಯಲ್ಲಿ ಒಬ್ಬರು ಒಳಗೊಂಡಂತೆ ಕೇರಳದಲ್ಲಿ ಭಾನುವಾರ ಕೋವಿಡ್-19 ವೈರಸ್‍ನ 14ಪ್ರಕರಣ ದಾಖಲಾಗಿದೆ. ಮಲಪ್ಪುರಂ ಜಿಲ್ಲೆಯ ನಾಲ್ವರು, ಕಣ್ಣೂರು, ಕೋಯಿಕ್ಕೋಡ್, ಪಾಲಕ್ಕಾಡ್‍ನಲ್ಲಿ ತಲಾ ಇಬ್ಬರು, ತೃಶ್ಯೂರ್, ಎರ್ನಾಕುಳಂ ಹಾಗೂ ಕೊಲ್ಲಂನ ತಲಾ ಒಬ್ಬರು ಇತರ ಸೋಂಕಿತರು.
      ಸೋಂಕಿತರಲ್ಲಿ ಇಬ್ಬರು ವಿದೇಶದಿಂದ ಆಗಮಿಸಿದ್ದರೆ, ಏಳುಮಂದಿ ತಮಿಳ್ನಾಡಿನಿಂದ, ಇಬ್ಬರು ಮಹಾರಾಷ್ಟ್ರದಿಂದ ಆಗಮಿಸಿದ್ದರೆ, ಒಬ್ಬರು ಮಾಲ್ದೀವ್ಸ್‍ನಿಂದ ಆಗಮಿಸಿದ ಉತ್ತರಪ್ರದೇಶ ನಿವಾಸಿ ಹಾಗೂ ಇನ್ನೊಬ್ಬರು ಕೊಲ್ಲಂ ಜಿಲ್ಲೆಯ ಆರೋಗ್ಯ ಇಲಾಖೆ ಸಇಬ್ಬಂದಿ ಒಳಗೊಂಡಿದ್ದಾರೆ. ರಾಜ್ಯದಲ್ಲಿ ಚಿಕಿತ್ಸೆಯಲ್ಲಿರುವವರಲ್ಲಿ ಭಾನುವಾರ ಯಾರೂ ಗುಣಮುಖರಾಗಿಲ್ಲ. ರಾಜ್ಯದಲ್ಲಿ ಕೋವಿಡ್-19 ಬಾಧಿಸಿ ಚಿಕಿತ್ಸೆಯಲ್ಲಿದ್ದವರಲ್ಲಿ 497ಮಂದಿ  ಗುಣಮುಖರಾಗಿದ್ದರೆ, ಪ್ರಸಕ್ತ 101ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 2162ಮಂದಿ ನಿಗಾದಲ್ಲಿದ್ದಾರೆ.ಇವರಲ್ಲಿ 1887ಮಂದಿ ಮನೆಗಳಲ್ಲಿ ಹಾಗೂ 275ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಭಾನುವಾರ ಹೊಸದಾಗಿ 20ಮಂದಿಯನ್ನು ಐಸೊಲೇಶನ್ ವಾರ್ಡಿಗೆ ದಾಖಲಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries