HEALTH TIPS

ಮೇ 31ರ ತನಕ ಲಾಕ್ಡೌನ್ ವಿಸ್ತರಣೆ ಮಾಡಿದ ಗೃಹ ಇಲಾಖೆ

   
         ನವದೆಹಲಿ: ಕೊರೊನಾವೈರಸ್ ಸೋಂಕು ಹರಡದಂತೆ ವಿಧಿಸಿದ್ದ ಮೂರನೇ ಲಾಕ್ಡೌನ್ ಅವಧಿ ಮೇ 17ಕ್ಕೆ ಮುಕ್ತಾಯವಾಗಿದೆ. ನಾಲ್ಕನೇ ಅವಧಿ ಲಾಕ್ಡೌನ್ ಮೇ 31ರ ತನಕ ವಿಸ್ತರಿಸಿ ಭಾನುವಾರ (ಮೇ 17)ದಂದು ವಿಸ್ತರಣೆ ಮಾಡಿ ಕೇಂದ್ರ ಗೃಹ ಸಚಿವಾಲಯ ಪ್ರಕಟಣೆ ಹೊರಡಿಸಿದೆ.
         ಆದರೆ, ಈ ಬಾರಿ ಕೆಂಪು, ಕಿತ್ತಳೆ ಹಾಗೂ ಹಸಿರು ವಲಯ, ಕಂಟೈನ್ಮೆಂಟ್ ಜೋನ್ ಬಗ್ಗೆ ನಿರ್ಧಾರವನ್ನು ಆಯಾ ರಾಜ್ಯಗಳು ತೆಗೆದುಕೊಳ್ಳುವ ಅವಕಾಶವನ್ನು ಗೃಹ ಇಲಾಖೆ ನೀಡಿದೆ. ಭಾರತದಲ್ಲಿ ಕೊರೊನಾಸೋಂಕು ಪೀಡಿತರ ಸಂಖ್ಯೆ 90, 000 ದಾಟಿದೆ.
            ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿಯಲ್ಲಿ ಏನಿದೆ? ಏನಿರಲ್ಲ:
      ಕಾಲೇಜು, ಶಿಕ್ಷಣ ಸಂಸ್ಥೆ, ಸ್ವಿಮ್ಮಿಂಗ್ ಪೂಲ್,ಶಾಪಿಂಗ್ ಮಾಲ್, ಸಾಂಸ್ಕøತಿಕ, ಧಾರ್ಮಿಕ ಸಭೆ ಸಮಾರಂಭ, ರೈಲು, ಬಸ್, ಮೇಟ್ರೋ ರೈಲು, ವಿಮಾನ ಸಂಚಾರ ಬಂದ್. ಹೋಟೆಲ್ ಮತ್ತು ರೆಸ್ಟೋರೆಂಟ್ ಬಂದ್ ಆಗಿರಲಿದೆ. ಆದರೆ, ಎಂದಿನಂತೆ ಪಾರ್ಸಲ್ ಪಡೆಯಲು ಅವಕಾಶವಿದೆ. ಓಲಾ, ಊಬರ್ ಟ್ಯಾಕ್ಸಿ ಸಂಚಾರಕ್ಕೂ ಅನುಮತಿ ಸಿಕ್ಕಿಲ್ಲ. ಮಿಕ್ಕಂತೆ ಮೇ 3ರ ಅಧಿಸೂಚನೆಯಂತೆ 8 ವರ್ಷದೊಳಗಿನ ಮಕ್ಕಳು ಹಾಗೂ 65 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಹೊರಗಡೆ ಬರಲು ಅವಕಾಶವಿಲ್ಲ ಅಂತಾರಾಜ್ಯ ಸಂಚಾರಕ್ಕೆ ನಿಬರ್ಂಧ ವಿಧಿಸಲಾಗಿದೆ. ಎರಡು ರಾಜ್ಯಗಳು ಒಪ್ಪಿದರೆ ಮಾತ್ರ ಸರ್ಕಾರಿ ಸಾರಿಗೆ ಬಸ್ ಸಂಚಾರಕ್ಕೆ ವಕಾಶ ನೀಡಬಹುದು. ಅಂತರ್ ಜಿಲ್ಲಾ ಸಂಚಾರ ಕೂಡಾ ರಾಜ್ಯ ಸರ್ಕಾರ ತೀರ್ಮಾನಿಸಬಹುದಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries