ಕಾಸರಗೋಡು: ಜಿಲ್ಲೆಯ 14ಮಂದಿ ಒಳಗೊಂಡಂತೆ ರಾಜ್ಯದಲ್ಲಿ ಒಟ್ಟು 49 ಮಂದಿಯಲ್ಲಿ ಸೋಮವಾರ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಕಣ್ಣೂರು 10, ತಿರುವನಂತಪುರ, ಪಾಲಕ್ಕಾಡ್ ತಲಾ 5, ಕೋಯಿಕ್ಕಾಡ್ 4, ಪತ್ತನಂತಿಟ್ಟ, ಆಲಪ್ಪುಳ ತಲಾ 3, ಕೊಲ್ಲಂ, ಕೋಟ್ಟಾಯಂ ಜಿಲ್ಲೆಯಲ್ಲಿ ತಲಾ 2, ಇಡುಕ್ಕಿಯಲ್ಲಿ ಒಬ್ಬರಲ್ಲೂ ವೈರಸ್ ಪತ್ತೆಯಾಗಿದೆ.ಇವರಲ್ಲಿ 18ಮಂದಿ ವಿದೇಶದಿಂದ, 25ಮಂದಿ ಇತರ ರಾಜ್ಯಗಳಿಂದ ಹಾಗೂ 6ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ.
ಜಿಲ್ಲೆಯಲ್ಲಿ ಸೋಮವಾರ ಸೋಂಕು ಕಾಣಿಸಿಕೊಂಡವರಲ್ಲಿ 13 ಮಂದಿ ಮಹಾರಾಷ್ಟ್ರದಿಂದ, ಒಬ್ಬರು ಕೊಲ್ಲಿ ರಾಷ್ಟ್ರ ದಿಂದ ಬಂದವರು. ಕೊಲ್ಲಿರಾಷ್ಟ್ರ ದಿಂದ ಆಗಮಿಸಿದ 38 ವರ್ಷ ಪ್ರಾಯದ ಉದುಮಾ ನಿವಾಸಿಗೆ ಸೋಂಕು ಖಚಿತವಾಗಿದೆ. ಮಹಾರಾಷ್ಟ್ರದಿಂದ ಆಗಮಿಸಿವರಲ್ಲಿ 8 ಮಂದಿ ಕುಂಬಳೆ ನಿವಾಸಿಗಳು, ಇಬ್ಬರು ವರ್ಕಾಡಿ ನಿವಾಸಿಗಳು, ಮೀಂಜ, ಉದುಮಾ,ಕುಂಬ್ಡಾಜೆ ನಿವಾಸಿಗಳಾದ ತಲಾ ಒಬ್ಬರು ಒಳಗೊಂಡಿದ್ದಾರೆ. ಜಿಲ್ಲೆಯಲ್ಲಿ ಸೋಮವಾರ 6 ಮಂದಿ ರೋಗದಿಂದ ಗುಣಮುಖರಾಗಿದ್ದಾರೆ.


