HEALTH TIPS

ಗರಿಷ್ಠ ಕೊರೋನಾ ವೈರಸ್ ಸಾವು, ಅಗ್ರ ಸ್ಥಾನದಲ್ಲಿ ಮಹಾರಾಷ್ಟ್ರ, ಗುಜರಾತ್ ಗೆ 2ನೇ ಸ್ಥಾನ

       
     ಮುಂಬೈ: ಮಾರಕ ಕೊರೋನಾ ವೈರಸ್ ಗೆ ಇಡೀ ಭಾರತವೇ ತತ್ತರಿಸಿ ಹೋಗುತ್ತಿದ್ದು, ಪ್ರಮುಖವಾಗಿ ಮಹಾರಾಷ್ಟ್ರ ರಾಜ್ಯ ವೈರಸ್ ಆರ್ಭಟಕ್ಕೆ ನೆಲಕಚ್ಚಿದೆ.
         ಕೊರೋನಾ ವೈರಸ್ ಗೆ ಭಾರತದಲ್ಲಿ ಈ ವರೆಗೂ 3,163 ಮಂದಿ ಸೋಂಕಿತರ ಬಲಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ 134 ಸೋಂಕಿತರು ಸಾವನ್ನಪ್ಪಿದ್ದಾರೆ. ಅಂತೆಯೇ 4,970 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾವು  ಸಂಭವಿಸಿದೆ. ಕೊರೋನಾ ವೈರಸ್ ಗೆ ಹೆಚ್ಚು ಸಾವು ಕಂಡ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿದೆ.
      ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಮಹಾರಾಷ್ಟ್ರದಲ್ಲಿ 51 ಸಾವು ಸಂಭವಿಸಿದ್ದು, ಗುಜರಾತ್ ನಲ್ಲಿ 35 ಮತ್ತು ಉತ್ತರ ಪ್ರದೇಶದಲ್ಲಿ 14, ದೆಹಲಿಯಲ್ಲಿ 7, ಪಶ್ಚಿಮ ಬಂಗಾಳದಲ್ಲಿ 6 ಮತ್ತು ಮಧ್ಯ ಪ್ರದೇಶದಲ್ಲಿ 4, ತಮಿಳುನಾಡಿನಲ್ಲಿ 3 ಪಂಜಾಬ್ ಮತ್ತು ಜಮ್ಮು ಮತ್ತು  ಕಾಶ್ಮೀರದಲ್ಲಿ ತಲಾ ಇಬ್ಬರು. ತೆಲಂಗಾತ ಮತ್ತು ಬಿಹಾರದಲ್ಲಿ ತಲಾ ಒಂದು ಸೋಂಕಿತರು ಸಾವನ್ನಪ್ಪಿದ್ದಾರೆ.
      ಒಟ್ಟಾರೆಯಾಗಿ ದೇಶದಲ್ಲಿ ಸಂಭವಿಸಿರುವ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ 3,163ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಮಹಾರಾಷ್ಟ್ರವೊಂದರಲ್ಲೇ ಬರೊಬ್ಬರಿ1,249 ಸೋಂಕಿತರು ಸಾವನ್ನಪ್ಪಿದ್ದಾರೆ. ಗುಜರಾತ್ ನಲ್ಲಿ ಈ ಸಂಖ್ಯೆ 694ಕ್ಕೇರಿದೆ. ಮಧ್ಯ ಪ್ರದೇಶದಲ್ಲಿ 252, ಪಶ್ಚಿಮ  ಬಂಗಾಳದಲ್ಲಿ 244, ದೆಹಲಿ 168, ರಾಜಸ್ಥಾನದಲ್ಲಿ 138, ಉತ್ತರ ಪ್ರದೇಶದಲ್ಲಿ 118, ತಮಿಳುನಾಡಿನಲ್ಲಿ 81, ಆಂಧ್ರ ಪ್ರದೇಶದಲ್ಲಿ 50 ಸಾವು ಸಂಭವಿಸಿದೆ. ಇನ್ನು ಕರ್ನಾಟಕದಲ್ಲಿ 37 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಪಂಜಾಬ್ ಮತ್ತು ತೆಲಂಗಾಣದಲ್ಲಿ 35, ಜಮ್ಮು ಮತ್ತು ಕಾಶ್ಮೀರದಲ್ಲಿ 15  ಮಂದಿ ಸಾವನ್ನಪ್ಪಿದ್ದಾರೆ. ಹರ್ಯಾಣದಲ್ಲಿ 14, ಬಿಹಾರದಲ್ಲಿ 9, ಕೇರಳ ಮತ್ತು ಒಡಿಶಾದಲ್ಲಿ ತಲಾ 4 ಸಾವು ಸಂಭವಿಸಿದೆ.
       ಜಾಖರ್ಂಡ್, ಚಂಡೀಘಡ, ಹಿಮಾಚಲ ಪ್ರದೇಶದಲ್ಲಿ ತಲಾ ಮೂರು ಸಂಭವಿಸಿದೆ. ಅಸ್ಸಾಂನಲ್ಲಿ 2, ಮೇಘಾಲಯಸ, ಉತ್ತರಾಖಂಡ, ಪುದುಚೇರಿಯಲ್ಲಿ ತಲಾ 1 ಸಾವು ಸಂಭವಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries