HEALTH TIPS

ಚೀನಾದಲ್ಲಿ 5.2 ತೀವ್ರತೆಯ ಪ್ರಬಲ ಭೂಕಂಪ: 4 ಮಂದಿ ಸಾವು

           ಬೀಜಿಂಗ್ಮೇ: ಚೀನಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿದ್ದಾರೆ. ಚೀನಾದಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.2ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದ ತೀವ್ರತೆಗೆ ಯುನ್ನಾನ್ ಪ್ರಾಂತ್ಯದಲ್ಲಿ ಹಲವು ಕಟ್ಟಡಗಳು ಕುಸಿದಿದ್ದು, ಅವಶೇಷಗಳಡಿಯಲ್ಲಿ ಸಿಲುಕಿದ್ದವರನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗುತ್ತಿದೆ. ಭೂಕಂಪವಾದ ಸ್ಥಳಕ್ಕೆ ರಕ್ಷಣಾ ಪಡೆಗಳು ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಚೀನಾದ ಭೂಕಂಪ ಜಾಲ ಕೇಂದ್ರದ ಪ್ರಕಾರ, ಸೋಮವಾರ ರಾತ್ರಿ 9.47ಕ್ಕೆ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರ ಬಿಂದು ಎಂಟು ಕಿಲೋಮೀಟರ್ ಆಳದಲ್ಲಿತ್ತು ಮತ್ತು ಇದು ಕ್ವಿಜಿಂಗ್ ನಗರದ ಹುಯಿಜ್ ಕೌಂಟಿಯ ಜೊತೆಗೆ ಜಾಟೊಂಗ್, ಕ್ಸುವಾನ್ವೆ ಮತ್ತು ಚುಕ್ಸಿಯಾಂಗ್ ಯಿ ಅಟಾನಮಸ್ ಪ್ರಿಫೆಕ್ಚರ್ ನಗರಗಳಲ್ಲಿ ಕಂಡುಬಂದಿದೆ.
    ನೈಋತ್ಯ ಚೀನಾದ ಯುನ್ನಾನ್ ಪ್ರಾಂತ್ಯದ ಕಿಯೊಜಿಯಾ ಕೌಂಟಿಯಲ್ಲಿ ಭೂಕಂಪ ಸಂಭವಿಸಿದ್ದು, ಭೂಕಂಪದ ತೀವ್ರತೆ 5.2ರಷ್ಟು ಇತ್ತು ಎಂದು ಭೂಕಂಪನ ಮಾಪನ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭೂಕಂಪದಿಂದಾಗಿ 4 ಮಂದಿ ಮೃತಪಟ್ಟಿದ್ದು, ಕನಿಷ್ಠ 15 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
   ಕಿಯೋಜಿಯಾ ಕೌಂಟಿ ಸರ್ಕಾರವು ಭೂಕಂಪದ ರಕ್ಷಣೆ ಮತ್ತು ವಿಪತ್ತು ನಿರ್ವಹಣೆಗಾಗಿ 16 ಪಟ್ಟಣಗಳಿಗೆ ರಕ್ಷಣಾ ಪಡೆಯನ್ನು ಕಳುಹಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries