ಕೊಚ್ಚಿ: ಮನುಷ್ಯನ ಆರೋಗ್ಯ ನಿರ್ವಹಣೆಯಂತೆಯೇ ನಮ್ಮ ಸಾಕು ಪ್ರಾಣಿಗಳ ಆರೈಕೆಗಾಗಿ ರಾಷ್ಟ್ರದಲ್ಲೇ ಮೊತ್ತಮೊದಲ ಬಾರಿಗೆ ಕುಟುಂಬಶ್ರೀ ಘಟಕವೊಂದು ಹೈಟೆಕ್ ಮೊಬೈಲ್ ಪಶು ಆಸ್ಪತ್ರೆಯನ್ನು ವ್ಯವಸ್ಥೆಗೊಳಿಸಿದ್ದು ಗಮನ ಸೆಳೆದಿದೆ. ಸಾಕು ಪ್ರಾಣಿಗಳ ಪರಿಪಾಲನೆ ಮತ್ತು ಚಿಕಿತ್ಸೆಗಾಗಿ ಈ ಹೈಟೆಕ್ ಮೊಬೈಲ್ ಆಸ್ಪತ್ರೆ ಕಾರ್ಯನಿರ್ವಹಿಸಲಿದೆ.
ಎರ್ನಾಕುಳಂನ ಪರವೂರಿನ ಸಮೀಪ ಆಲಂಗಾಡ್ ಎಂಬಲ್ಲಿಯ ಕುಟುಂಬಶ್ರೀ ಘಟಕವೊಂದು ಇಂತಹ ಸಾಧನೆಗೆ ಮುಂದಾಗಿದೆ. ಕೃತಕ ಗರ್ಭಧಾರಣೆ ಮತ್ತು ಪಶುವೈದ್ಯಕೀಯ ಸೇವೆಗಳು ಮತ್ತು ಹವಾನಿಯಂತ್ರಿತ ಆಪರೇಷನ್ ಥಿಯೇಟರ್ ಸೌಲಭ್ಯ ಮತ್ತು ಪೆಟ್ ಗ್ರೂಮಿಂಗ್ ಸೌಲಭ್ಯವನ್ನು ಹೊಂದಿದೆ.
ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸುವ, ಬಡತನವನ್ನು ನಿರ್ಮೂಲನೆ ಮಾಡುವ ಮತ್ತು ಸಾಮಾನ್ಯ ಕುಟುಂಬಗಳ ಸಬಲೀಕರಣದ ಲಕ್ಷ್ಯದ ಕುಟುಂಬಶ್ರೀ ಘಟಕ ಇಂತಹ ನೂತನ ಪರಿಕಲ್ಪನೆಯ ಮೂಲಕ ಭರವಸೆ ಮೂಡಿಸಿ ಮಾದರಿಯಾಗಿದೆ. ಮೊಬೈಲ್ ಆಸ್ಪತ್ರೆಯ ವಾಹನವು ಪ್ರಾಣಿಗಳಿಗೆ ಕೃತಕ ವೀರ್ಯ, ರೋಗನಿರ್ಣಯ ಪರೀಕ್ಷೆ, ಸ್ಕ್ಯಾನಿಂಗ್ ಮತ್ತು ಇತರ ವೈಜ್ಞಾನಿಕ ಕಾರ್ಯವಿಧಾನಗಳನ್ನು ಅಳವಡಿಸಿಕೊಂಡಿದೆ. ತುರ್ತು ಚಿಕಿತ್ಸೆ ಅಗತ್ಯವಿರುವ, ಆದರೆ ಚಿಕಿತ್ಸಾ ಕೇಂದ್ರಗಳನ್ನು ತಲುಪಲು ಸಾಧ್ಯವಾಗದ ಅರೆ ಜೀವದ ಪ್ರಾಣಿಗಳಿಗೆ ಶೀಘ್ರ ಅತ್ಯುತ್ತಮ ಚಿಕಿತ್ಸೆ ನೀಡಿ ಪುನಶ್ಚೇತನಗೊಳಿಸುವ ಮೂಲ ಲಕ್ಷ್ಯವನ್ನಿರಿಸಿ ಇಂತಹ ವ್ಯವಸ್ಥೆಗೆ ರೂಪುನೀಡಲಾಯಿತೆಂದು ಕುಟುಂಬಶ್ರೀ ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉದ್ಯಮಿ ಪ್ರಿಯ ಪ್ರಕಾಶನ್ ಎಂಬವರ ಪರಿಕಲ್ಪನೆಯ ಅಡಿಯಲ್ಲಿ ಮೊಬೈಲ್ ಆಸ್ಪತ್ರೆ ನಿರ್ಮಾಣ ಸಾಕಾರಗೊಂಡಿದೆ. ಪ್ರಿಯಾ ಪ್ರಕಾಶ್ ಅವರು ಪಶು ಸಂಗೋಪನಾ ವಿಜ್ಞಾನದಲ್ಲಿ ಪ್ಲಸ್ ಟು ವರೆಗೆ ಅಧ್ಯಯನ ನಡೆಸಿದ್ದು, 2018 ರಿಂದ ಕುಟುಂಬಶ್ರೀ ಯೋಜನೆಯಾದ ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸಾ ಯೋಜನೆಯಲ್ಲಿ ಕಾರ್ಯನಿರ್ವಹಿಸುವವರಾಗಿದ್ದಾರೆ. ಕೃಷಿಯಲ್ಲಿ ಹೊಸ ಸಂಶೋಧನೆ, ವ್ಯವಸ್ಥೆಗಳನ್ನು ಉತ್ತೇಜಿಸಲು ಮತ್ತು ಪೆÇ್ರೀತ್ಸಾಹಿಸಲು ಸ್ಥಾಪಿಸಲಾದ ಅಗ್ರಿ ಕ್ಲಿನಿಕ್ ಮತ್ತು ಕೃಷಿ ವ್ಯವಹಾರ ಕೇಂದ್ರದಿಂದ ಪ್ರಿಯಾ ಅವರ ಆಲೋಚನೆಗಳು ಮೊಳಕೆಯೊಡೆದವು. ಈ ಯೋಜನೆಗೆ ನಬಾರ್ಡ್, ಹೈದರಾಬಾದ್ ಮೂಲದ ಮನಮೆ, ಕುಡುಂಬಶ್ರೀ ಜಿಲ್ಲಾ ಮಿಷನ್ ಮತ್ತು ಬ್ಯಾಂಕ್ ಆಫ್ ಇಂಡಿಯಾ ಆರ್ಥಿಕ ನೆರವು ಒದಗಿಸಿದೆ.
ಕೇರಳ ಕೃಷಿ ವಿಶ್ವ ವಿದ್ಯಾನಿಲಯವು ಕೃಷಿ ಕ್ಷೇತ್ರದ ನೂತನ ತಂತ್ರಜ್ಞಾನ ಸಂಶೋಧನೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೂಪಿಸಿದ ಅಗ್ರಿ ಕ್ಲಿನಿಕ್ ಹಾಗೂ ಅಗ್ರಿ ಬಿಸಿನೆಸ್ ಸೆಂಟರ್ ನಿಂದ ಪ್ರಿಯಾ ಅವರು ಪ್ರೇರಣೆ ಪಡೆದು ಇಂತಹ ನವೀನ ಅವಿಷ್ಕಾರಕ್ಕೆ ಕಾರಣವಾಯಿತು. ಇವರ ಇಂತಹ ಯೋಜನೆಗೆ ನಬಾರ್ಡ್, ಹೈದ್ರಾಬಾದ್ ನಲ್ಲಿ ಕೇಂದ್ರವಾಗಿಸಿ ಕಾರ್ಯಾಚರಿಸುತ್ತಿರುವ ಸಂಸ್ಥೆಯೊಂದರ ಮುಖ್ಯಸ್ಥ ಮನೋಜ್ ಮತ್ತು ಕುಟುಂಬಶ್ರೀ ಜಿಲ್ಲಾ ಮಿಷನ್ ಹಾಗೂ ಬ್ಯಾಂಕ್ ಓಫ್ ಇಂಡಿಯಾದ ಸಹಕಾರದೊಂದಿಗೆ ಮೊಬೈಲ್ ಆಸ್ಪತ್ರೆ ಸಾಕಾರಗೊಂಡಿದೆ. ಇದಕ್ಕೂ ಮೊದಲು ಪ್ರಿಯ ಅವರು ವಲ್ರ್ಡ್ ವೈಡ್ ಪಶುವೈದ್ಯಕೀಯ ಸೇವೆಗಳ ಅಂತರರಾಷ್ಟ್ರೀಯ ಮತ್ತು ತ್ರಿಶೂರ್ ಕೋಕಲ ಪಶುವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ತರಬೇತಿ ಪಡೆದಿದ್ದರು.
ಕಾರ್ಯಕ್ರಮದ ಅನುಷ್ಠಾನಕ್ಕೆ ಹೊಸ ವಾಹನವನ್ನು ಬಳಸಲಾಗುವುದು. ಕ್ಲಿನಿಕ್ ನಲ್ಲಿ ಇಬ್ಬರು ಪಶುವೈದ್ಯಕೀಯ ವೈದ್ಯರು ಮತ್ತು ಎಂಟು ಸಹಾಯಕರು ಸೇವೆಯಲ್ಲಿರುತ್ತಾರೆ. ಪ್ರಾಣಿಗಳ ಕಲ್ಯಾಣ, ಡೈರಿ ಅಭಿವೃದ್ಧಿ, ಕೃಷಿ ಸಂಶೋಧನೆಗಳ ಚಟುವಟಿಕೆಗಳಿಗೆ ಈ ವಾಹನವನ್ನು ಮೊಬೈಲ್ ಕ್ಲಿನಿಕ್ ಆಗಿ ಬಳಸಬಹುದಾಗಿದೆ. ಮೇ 21 ರಂದು ಕೃಷಿ ಸಚಿವ ವಿ.ಎಸ್.ಸುನಿಲ್ ಕುಮಾರ್ ಅವರು ಅಲಂಗಾಡ್‍ನಲ್ಲಿ ನೂತನ ಯೋಜನೆಯನ್ನು ಉದ್ಘಾಟಿಸುವರು. ಒಟ್ಟು ಒಂದು ಕೋಟಿ ವೆಚ್ಚದಲ್ಲಿ ಈ ಮೊಬೈಲ್ ಆಸ್ಪತ್ರೆ ಸಜ್ಜೀಕರಿಸಲಾಗಿದ್ದು ಆಪರೇಷನ್ ಥಿಯೇಟರ್, ಪಿಇಟಿ ಸಲೂನ್ ಮತ್ತು ಪ್ರಥಮ ಚಿಕಿತ್ಸಾ ಸೌಲಭ್ಯಗಳನ್ನು ಸಿದ್ಧಪಡಿಸಲಾಗಿದೆ. ಸ್ಕ್ಯಾನಿಂಗ್ ಮತ್ತು ಎಕ್ಸರೇ ಸೇರಿದಂತೆ ಘಟಕಗಳು ಶೀಘ್ರದಲ್ಲೇ ಕಾರ್ಯನಿರ್ವಹಿಸಲಿವೆ. ಮೊದಲ ಹಂತದಲ್ಲಿ ಕ್ಲಿನಿಕ್‍ನ ಸೇವೆ ಎರ್ನಾಕುಲಂ ಜಿಲ್ಲೆಯಲ್ಲಿ ಮಾತ್ರ ಲಭ್ಯವಿರುತ್ತದೆ.


