ಕಾಸರಗೋಡು: ಕೇರಳ ರಾಜ್ಯದಲ್ಲಿ ಬುಧವಾರ ಹೊಸದಾಗಿ 24 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಅದೇ ವೇಳೆ ಐದು ಮಂದಿ ರೋಗ ಮುಕ್ತರಾಗಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಒಬ್ಬರಿಗೆ ರೋಗ ಬಾಧಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಒಬ್ಬರು ರೋಗ ಮುಕ್ತರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಪಾಲ್ಘಾಟ್ ಜಿಲ್ಲೆಯಲ್ಲಿ 7, ಮಲಪ್ಪುರಂ-4, ಕಣ್ಣೂರು-3, ತಿರುವನಂತಪುರ-2, ಪತ್ತನಂತಿಟ್ಟ-2, ತೃಶ್ಶೂರು-2, ಆಲಪ್ಪುಳ-1, ಎರ್ನಾಕುಳಂ-1, ಕಲ್ಲಿಕೋಟೆ-1, ಕಾಸರಗೋಡು-1 ಎಂಬಂತೆ ರೋಗ ಬಾಧಿಸಿದೆ.
ತೃಶ್ಶೂರು-2, ಕಣ್ಣೂರು, ವಯನಾಡು ಮತ್ತು ಕಾಸರಗೋಡು ಜಿಲ್ಲೆಯಲ್ಲಿ ತಲಾ ಒಬ್ಬರು ಗುಣಮುಖರಾಗಿದ್ದಾರೆ. ರೋಗ ಬಾಧಿತರಲಿ 12 ವಿದೇಶದಿಂದ ಬಂದವರು. ಮಹಾರಾಷ್ಟ್ರದಿಂದ ಬಂದ 12 ಮಂದಿ, ತಮಿಳುನಾಡಿನಿಂದ ಬಂದ 3 ಮಂದಿಗೆ ರೋಗ ದೃಢೀಕರಿಸಲಾಗಿದೆ. ಕಣ್ಣೂರಿನಲ್ಲಿ ಒಬ್ಬರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಈ ತನಕ ರಾಜ್ಯದಲ್ಲಿ ಒಟ್ಟು 666 ಮಂದಿಗೆ ಕೊರೊನಾ ವೈರಸ್ ಸೋಂಕು ಬಾಧಿಸಿದೆ. ಪ್ರಸ್ತುತ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 161 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಒಟ್ಟು 74398 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 73865 ಮಂದಿ ಮನೆಗಳಲ್ಲೂ, 533 ಮಂದಿ ಆಸ್ಪತ್ರೆಗಳಲ್ಲೂ ನಿಗಾವಣೆಯಲ್ಲಿದ್ದಾರೆ. ಬುಧವಾರ ಶಂಕಿತ 156 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ತನಕ 48543 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಿದ್ದು, ಲಭ್ಯ 46961 ನೆಗೆಟಿವ್ ಆಗಿದೆ. ರಾಜ್ಯದಲ್ಲಿ ಹೊಸದಾಗಿ ಹಾಟ್ ಸ್ಪಾಟ್‍ಗಳಿಲ್ಲ.
ಎಸ್ ಎಸ್ ಎಲ್ ಸಿ, ಪ್ಲಸ್ ಟು ಪರೀಕ್ಷೆಗಳು ತೀರ್ಮಾನದಂತೆ ಮೇ 26 ರಿಂದ 30 ರ ವರೆಗೆ ನಡೆಯಲಿದೆ. ಎಲ್ಲಾ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಸೌಕರ್ಯ ಕಲ್ಪಿಸಲಾಗುವುದು. ವಿದ್ಯಾರ್ಥಿಗಳ ಸಾರಿಗೆ ವ್ಯವಸ್ಥೆ ಮಾಡಲಾಗುವುದು. ಕೊರೊನಾ ಪ್ರತಿರೋಧಕ್ಕಾಗಿ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಬಾಲಕನಿಗೆ ಕೊರೊನಾ ಸೋಂಕು :
ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ಒಬ್ಬರಿಗೆ ಕೋವಿಡ್ ಸೋಂಕು ಖಚಿತಗೊಂಡಿದೆ. ತ್ರಿಕರಿಪುರ ನಿವಾಸಿ 15 ವರ್ಷದ ಬಾಲಕನಿಗೆ ಸೋಂಕು ಬಾಧಿಸಿದೆ. ಇವರು ಕೊಲ್ಲಿರಾಷ್ಟ್ರದಿಂದ ಊರಿಗೆ ಬಂದಿದ್ದರು.
ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ ಒಬ್ಬರು ರೋಗದಿಂದ ಗುಣಮುಖರಾಗಿದ್ದಾರೆ. ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತರಾಗಿ ದುಡಿಯುತ್ತಿರುವ ವ್ಯಕ್ತಿ ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 18 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ 2498 ಮಂದಿ ನಿಗಾದಲ್ಲಿದ್ದಾರೆ. 2078 ಮಂದಿ ಮನೆಗಳಲ್ಲಿ, 420 ಮಂದಿ ಆಸ್ಪತ್ರೆಗಳಲ್ಲಿ ನಿಗಾದಲ್ಲಿದ್ದಾರೆ. ಬುಧವಾರ ನೂತನವಾಗಿ 32 ಮಂದಿ ಐಸೊಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. 101 ಮಂದಿ ಬುಧವಾರ ತಮ್ಮ ನಿಗಾ ಅವ„ ಪೂರ್ಣಗೊಳಿಸಿದ್ದಾರೆ. ಜಿಲ್ಲೆಯಲ್ಲಿ 5844 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 5234 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ.
ಮಾಸ್ಕ್ ಧರಿಸದೇ ಇದ್ದವರಿಗೆ 508500 ರೂ. ದಂಡ :
ಕಾಸರಗೋಡು ಜಿಲ್ಲೆಯಲ್ಲಿ ಎ.30ರಿಂದ ಮೇ 19 ವರೆಗೆ ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ 1017 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಇವರಿಂದ ತಲಾ 500 ರೂ.ನಂತೆ ಒಟ್ಟು 508500 ರೂ. ದಂಡ ಈಡು ಮಾಡಲಾಗಿದೆ.
ಮೇ 19 ಒಂದೇ ದಿನ 125 ಮಂದಿ ವಿರುದ್ದ : 6 ಕೇಸು ದಾಖಲು :
ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 6 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. 17 ಮಂದಿಯನ್ನು ಬಂಧಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 2 ಕೇಸು, ವಿದ್ಯಾನಗರ 2, ಬೇಡಗಂ 1, ರಾಜಪುರಂ 1 ಕೇಸು ದಾಖಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 2352 ಕೇಸು ದಾಖಲಿಸಲಾಗಿದ್ದು, 3000 ಮಂದಿಯನ್ನು ಬಂಧಿಸಲಾಗಿದೆ. 953 ವಾಹನಗಳನ್ನು ವಶಪಡಿಸಲಾಗಿದೆ.