HEALTH TIPS

ಕೊರೊನಾ ನಿಯಂತ್ರಣ ಸಾಧನೆಯ ರಹಸ್ಯ ಏನು-ಬಿಬಿಸಿಯಿಂದ ಆರೋಗ್ಯ ಸಚಿವೆಯ ಸಂದರ್ಶನ


       ಕೊಚ್ಚಿ: ರಾಜ್ಯದಲ್ಲಿ ಕೋವಿಡ್ -19 ನಿಯಂತ್ರಣದ ಕುರಿತು ಆರೋಗ್ಯ ಸಚಿವ ಕೆ.ಕೆ.ಶೈಲಜಾ ಬಿಬಿಸಿ ನ್ಯೂಸ್‍ಗೆ ಅತಿಥಿಯಾಗಿ ಭಾಗವಹಿಸಿದ್ದಾರೆ. ಕೋವಿಡ್ -19 ವೈರಸ್ ಅನ್ನು ನಿಯಂತ್ರಿಸಿದ ವಿಶ್ವದ ಕೆಲವೇ ಪ್ರದೇಶಗಳಲ್ಲಿ ಕೇರಳ ಕೂಡ ಒಂದು ಎಂಬ ಕಾರಣದಿಂದ ಆರೋಗ್ಯ ಸಚಿವರನ್ನು ಬಿಬಿಸಿ ಅತಿಥಿಯಾಗಿ ಆಹ್ವಾನಿಸಿದೆ.
        ಬ್ರಿಟಿಷ್ ಪತ್ರಿಕೆ ಗಾರ್ಡಿಯನ್ ಸೇರಿದಂತೆ ಕೇರಳದಲ್ಲಿ ಕೋವಿಡ್ ವಿರುದ್ದ ಚಟುವಟಿಕೆಗಳಿಗಾಗಿ ಶ್ಲಾಘಿಸಿದ ಸುದ್ದಿಯನ್ನು ಅನುಸರಿಸಿ ಆರೋಗ್ಯ ಸಚಿವರು ಬಿಬಿಸಿ ವಲ್ಡ್ರ್ನಲ್ಲಿ ಅತಿಥಿಯಾಗಿ ಆಯ್ಕೆಗೊಂಡರು. ರೋಗ ತಡೆಗಟ್ಟುವ ಕ್ರಮಗಳು ಮತ್ತು ರಾಜ್ಯದ ಸಿದ್ಧತೆಗಳ ಕುರಿತು ಸಚಿವರು ನಿರೂಪಕರಿಗೆ ವಿವರಿಸಿದರು. ಚೀನಾದಲ್ಲಿ ವೈರಸ್ ಹರಡುವ ಹಿನ್ನೆಲೆಯಲ್ಲಿ ಚೀನಾದಲ್ಲಿ ವೈರಸ್ ಹರಡುವಿಕೆಗೆ ಕಾರಣವಾದ ಅಂಶಗಳನ್ನು ಗುರುತಿಸಿ ಆ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಸಮರ್ಥವಾಗಿ ನಿಭಾಯಿಸಲಾಯಿತೆಂದು ಸಚಿವೆ ತಿಳಿಸಿದರು.
    ರಾಷ್ಟ್ರವ್ಯಾಪಿ ಲಾಕ್ ಡೌನ್ ನಿಂದ ಭಾರತದಲ್ಲಿ ವೈರಸ್ ಹರಡುವಿಕೆಯು ತುಲನಾತ್ಮಕವಾಗಿ ಕಡಿಮೆ ಇದೆ. ಆದರೆ ದಕ್ಷಿಣ ಭಾರತದ ಕೇರಳದಲ್ಲಿ ಕೇವಲ 601 ಜನರು ಮಾತ್ರ ರೋಗ ದೃಢೀಕರಿಸಲ್ಪಟ್ಟಿರುವುದು ವಿಶೇಷ ಅಂಶವಾಗಿ ಗಮನಾರ್ಹವಾಗಿದೆ ಎಂದು ಬಿಬಿಸಿ ಆಂಕರ್ ಹೇಳಿದ್ದಾರೆ. ಕೋವಿಡ್‍ನಿಂದ ರಾಜ್ಯದಲ್ಲಿ ಕೇವಲ 4 ಜನರು ಮಾತ್ರ ಸಾವನ್ನಪ್ಪಿದ್ದಾರೆ. ಇದಕ್ಕಾಗಿ ಅವರನ್ನು ಶ್ಲಾಘಿಸಲಾಗಿದೆ ಎಂದು ಆರೋಗ್ಯ ಸಚಿವ ಕೆ.ಕೆ.ಶೈಲಜಾ ಅವರನ್ನು ಸಂದರ್ಶನ ಸುದ್ದಿಗೆ ಕರೆಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries