ಕಾಸರಗೋಡು: ಕೇರಳ ರಾಜ್ಯದಲ್ಲಿ ಸೋಮವಾರ ಮತ್ತೆ 29 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಇವರಲ್ಲಿ 21 ಮಂದಿ ವಿದೇಶದಿಂದ ಬಂದವರು. 7 ಮಂದಿ ಇತರ ರಾಜ್ಯಗಳಿಂದ ಬಂದವರು. ಕಣ್ಣೂರಿನ ಒಬ್ಬರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಇದೇ ವೇಳೆ ಕಾಸರಗೋಡು ಜಿಲ್ಲೆಯಲ್ಲಿ ಇಬ್ಬರಿಗೆ ಕೊರೊನಾ ಸೋಂಕು ದೃಢೀಕರಿಸಲಾಗಿದೆ.
ಕೊಲ್ಲಂ-6, ತೃಶ್ಶೂರು-4, ತಿರುವನಂತಪುರ-3, ಕಣ್ಣೂರು-3, ಪತ್ತನಂತಿಟ್ಟ-2, ಆಲಪ್ಪುಳ-2, ಕೋಟ್ಟಯಂ-2, ಕಲ್ಲಿಕೋಟೆ-2, ಕಾಸರಗೋಡು-2, ಎರ್ನಾಕುಳಂ-1, ಪಾಲ್ಘಾಟ್-1, ಮಲಪ್ಪುರಂ-1 ಎಂಬಂತೆ ರೋಗ ಬಾ„ಸಿದೆ. ಈ ತನಕ ರಾಜ್ಯದಲ್ಲಿ ಒಟ್ಟು 630 ಮಂದಿಗೆ ರೋಗ ಬಾ„ಸಿದೆ. ರಾಜ್ಯದಲ್ಲಿ ಒಟ್ಟು 130 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಒಟ್ಟು 67789 ಮಂದಿ ನಿಗಾವಣೆಯಲ್ಲಿದ್ದಾರೆ. ಈ ಪೈಕಿ 67316 ಮಂದಿ ಮನೆಗಳಲ್ಲೂ, 473 ಮಂದಿ ಆಸ್ಪತ್ರೆಗಳಲ್ಲೂ ನಿಗಾವಣೆಯಲ್ಲಿದ್ದಾರೆ. ಸೋಮವಾರ ರಾಜ್ಯದಲ್ಲಿ ಶಂಕಿತ 127 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ತನಕ 45905 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು ಲಭ್ಯ 44651 ನೆಗೆಟಿವ್ ಆಗಿದೆ.
ಮೇ 31 ರ ವರೆಗೆ ಕೇಂದ್ರ ಸರಕಾರ ಲಾಕ್ ಡೌನ್ ಮುಂದುವರಿಸಿರುವುದರಿಂದ ಕೆಲವೊಂದು ನಿಯಂತ್ರಣಗಳನ್ನು ಏರ್ಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ಹೇಳಿದ್ದಾರೆ. ಶಾಲಾ ಕಾಲೇಜು, ಟ್ರೈನಿಂಗ್ ಸೆಂಟರ್‍ಗಳಿಗೆ ಅನುಮತಿಯಿಲ್ಲ. ಆನ್‍ಲೈನ್ ಶಿಕ್ಷಣವನ್ನು ಪೆÇ್ರೀತ್ಸಾಹಿಸಲಾಗುವುದು.
ನಿಬಂಧನೆಗಳೊಂದಿಗೆ ಅನುಮತಿ :
ಜಿಲ್ಲೆಯೊಳಗೆ ಸಾರ್ವಜನಿಕ ಸಾರಿಗೆಯನ್ನು ಸಿಟಿಂಗ್ ಕ್ಯಾಪಸಿಟಿಯ ಶೇ.50 ಮಂದಿ ಪ್ರಯಾಣಿಸಬಹುದು. ನಿಂತು ಪ್ರಯಾಣಿಸಲು ಅನುಮತಿಯಿಲ್ಲ. ಜಿಲ್ಲೆಯೊಳಗೆ ವಾಹನಗಳ, ಜನರ ಸಂಚಾರಕ್ಕೆ ತಡೆಯಿಲ್ಲ. ಅಂತರ್ ಜಿಲ್ಲಾ ಪ್ರಯಾಣಗಳಲ್ಲಿ ಸಾರ್ವಜನಿಕ ಸಾರಿಗೆ ಇರುವುದಿಲ್ಲ. ಇತರ ವಾಹನಗಳಲ್ಲಿ ಪ್ರಯಾಣಿಸಬಹುದು. ಬೆಳಗ್ಗೆ 7 ರಿಂದ ಸಂಜೆ 7 ರ ವರೆಗೆ ಮಾತ್ರವೇ ಅವಕಾಶ. ಇದಕ್ಕೆ ಪಾಸ್ ಅಗತ್ಯವಿಲ್ಲ. ಆದರೆ ಗುರುತು ಚೀಟಿ ಬೇಕು.
ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ ಇಬ್ಬರಿಗೆ ಕೋವಿಡ್ ಪಾಸಿಟಿವ್ :
ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ ಇಬ್ಬರಿಗೆ ಕೋವಿಡ್ ಪಾಸಿಟಿವ್ ಖಚಿತಗೊಂಡಿದೆ. ಪೈವಳಿಕೆ ನಿವಾಸಿಗಳಾದ 28 ವರ್ಷ ಪ್ರಾಯದ ಇಬ್ಬರಿಗೆ ಸೋಂಕು ಖಚಿತವಾಗಿದೆ. ಇವರು ಮುಂಬಯಿಯಿಂದ ಮೇ 15ರಂದು ಊರಿಗೆ ಬಂದವರು. ಬಂದ ಮೇಲೆ ಅವರು ಸರ್ಕಾರಿ ಕ್ವಾರೆಂಟೈನ್‍ನಲ್ಲಿ ದಾಖಲಾಗಿದ್ದರು. ಈಗ ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ರಾಮದಾಸ್ (ಆರೋಗ್ಯ) ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 2456 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2101 ಮಂದಿ, ಆಸ್ಪತ್ರೆಗಳಲ್ಲಿ 355 ಮಂದಿ ನಿಗಾದಲ್ಲಿದ್ದಾರೆ. ಸೋಮವಾರ ನೂತನವಾಗಿ ಒಬ್ಬರನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 5635 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 5137 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ.
ಪಾಸ್ ಮಂಜೂರು : ಕಾಸರಗೋಡು ಜಿಲ್ಲೆಗೆ 5ನೇ ಸ್ಥಾನ : ಜಿಲ್ಲಾಧಿಕಾರಿ
ಇತರ ರಾಜ್ಯಗಳಿಂದ ಕೇರಳ ಪ್ರವೇಶ ನಡೆಸುವಲ್ಲಿ ಪಾಸ್ ಮಂಜೂರು ಮಾಡುವ ವಿಚಾರದಲ್ಲಿ ಕಾಸರಗೋಡು ಜಿಲ್ಲೆಗೆ 5ನೇ ಸ್ಥಾನವಿದೆ ಎಂದು ಜಿಲ್ಲಾ„ಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಜಿಲ್ಲೆಯಲ್ಲಿ ಈ ವರೆಗೆ ಶೇ.80.83 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ ಎಂದವರು ಹೇಳಿದರು. ಅನೇಕ ಮಿತಿಗಳಿದ್ದರೂ, ತ್ವರಿತಗತಿಯಲ್ಲಿ ಪಾಸ್ ಒದಗಿಸಲು ಅಗತ್ಯದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸೋಮವಾರದ ವರೆಗೆ ಲಭಿಸಿದ 8179 ಅರ್ಜಿಗಳಲ್ಲಿ 6611 ಪಾಸ್ ಮಂಜೂರು ಮಾಡಲಾಗಿದೆ ಎಂದವರು ತಿಳಿಸಿರುವರು.
ನಿಬಂಧನೆ ಉಲ್ಲಂಣಘನೆ-19 ದೂರು ದಾಖಲು:
ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 19 ಕೇಸುಗಳನ್ನು ದಾಖಲಿಸಲಾಗಿದೆ. 21 ಮಂದಿಯನ್ನು ಬಂಧಿಸಲಾಗಿದ್ದು, 11 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 4 ಕೇಸು, ಕುಂಬಳೆ 1, ವಿದ್ಯಾನಗರ 1, ಬದಿಯಡ್ಕ 2, ಆದೂರು 1, ಮೇಲ್ಪರಂಬ 2, ಬೇಕಲ 1, ಅಂಬಲತ್ತರ 4, ಚಂದೇರ 2, ವೆಳ್ಳರಿಕುಂಡು 1 ಕೇಸು ದಾಖಲಿಸಲಾಗಿದೆ. ಜಿಲ್ಲೆಯಲ್ಲಿ ಈ ವರೆಗೆ 2267 ಕೇಸು ದಾಖಲಾಗಿದ್ದು, 2842 ಮಂದಿಯನ್ನು ಬಂ„ಸಲಾಗಿದೆ. 916 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.



