HEALTH TIPS

ಸುಭಿಕ್ಷ ಕೇರಳಂ-ತರಕಾರಿ ಕೃಷಿ ಯೋಜನೆ ಉದ್ಘಾಟನೆ

 
     ಕಾಸರಗೋಡು: ಕೋವಿಡ್-19 ವೈರಸ್ ಸಂಕಷ್ಟದ ನಡುವೆ ಕೇರಳ ಸರ್ಕಾರ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಯೋಜನೆ ಹಮ್ಮಿಕೊಂಡಿದೆ. 'ಸುಭಿಕ್ಷ ಕೇರಳಂ' ಯೋಜನೆಯ ಜಾರಿ ಅಂಗವಾಗಿ ಹಸಿರು ಕೇರಳ ಮಿಷನ್, ಉದುಮಾ ಟೆಕ್ಸ್‍ಟೈಲ್ಸ್ ಮಿಲ್ಸ್, ಕೃಷಿ ಅಭಿವೃದ್ಧಿ ಕೃಷಿಕ ಕಲ್ಯಾಣ ಇಲಾಖೆ, ಉದುಮಾ ಗ್ರಾಮ ಪಂಚಾಯಿತಿ ಜಂಟಿ ವತಿಯಿಂದ ಜಿಲ್ಲೆಯಲ್ಲಿ ಕೃಷಿ ನಡೆಸಲಾಗುವುದು.
     ರಾಜ್ಯ ಸರ್ಕಾರದ ಸಾರ್ವಜನಿಕ ಸಂಸ್ಥೆ ಉದುಮಾ ಟೆಕ್ಸ್ ಟೈಲ್ಸ್ ಮಿಲ್ಸ್ ಆವರಣದಲ್ಲಿ ಬಂಜರಾಗಿರುವ 15 ಎಕ್ರೆ ಜಾಗದಲ್ಲಿ ಕೃಷಿ ನಡೆಸಲು ನಿರ್ಧರಿಸಲಾಗಿದೆ. ಸಹಕಾರಿ ಸಂಸ್ಥೆಗಳು, ಕುಟುಂಬಶ್ರೀ, ಸ್ವಯಂ ಸೇವಾ ಸಂಘಟನೆ ಮುಂತಾದುವುದಗಳ ಸಹಕಾರದೊಂದಿಗೆ ತರಕಾರಿ, ಭತ್ತ, ಗೆಡ್ಡೆಗಳು ಇತ್ಯಾದಿ ವೈವಿಧ್ಯಮಯ ಕೃಷಿ ನಡೆಯಲಿದೆ. ಈ ನಿಟ್ಟಿನಲ್ಲಿ ತರಕಾರಿ ಕೃಷಿಯ ಬೀಜ ಬಿತ್ತುವ ಕಾರ್ಯಕ್ರಮದ ಉದ್ಘಾಟನೆ ಉದುಮಾ ಟೆಕ್ಸ್ ಟೈಲ್ಸ್ ಮಿಲ್ಸ್ ಬಳಿ ನಡೆಯಿತು.  ಶಾಸಕ ಕೆ. ಕುಞÂರಾಮನ್ ಉದ್ಘಾಟಿಸಿದರು. ಉದುವi ಗ್ರಾಮಪಂಚಾಯಿತಿ ಅಧ್ಯಕ್ಷ ಮಹಮ್ಮದಾಲಿ ಅಧ್ಯಕ್ಷತೆ ವಹಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries