ಕಾಸರಗೋಡು: ಮಂಜೇಶ್ವರ ಚೆಕ್ ಪೆÇೀಸ್ಟ್ ಮೂಲಕ ಮಂಗಳವಾರ 410 ಮಂದಿ ಕೇರಳ ಪ್ರವೇಶ ನಡೆಸಿದರು. ಈ ವರೆಗೆ ಮಂಜೇಶ್ವರ ಚೆಕ್ ಪೆÇೀಸ್ಟ್ ಮೂಲಕ ಒಟ್ಟು 6336 ಮಂದಿ ರಾಜ್ಯ ಪ್ರವೇಶ ಮಾಡಿದ್ದಾರೆ. ಪಾಸ್ ಗಾಗಿ 25,314 ಮಂದಿ ಅರ್ಜಿ ಸಲ್ಲಿಸಿದ್ದು, 17,280 ಮಂದಿಗೆ ಪ್ರವೇಶಾತಿ ನೀಡಲಾಗಿದೆ.
ರಾಜ್ಯದ ವಿವಿಧ ಗಡಿಗಳ ಚೆಕ್ ಪೆÇೀಸ್ಟ್ ಗಳ ಮೂಲಕ 1730 ಮಂದಿ ಕಾಸರಗೋಡು ಜಿಲ್ಲೆಯವರು ಊರಿಗೆ ತಲಪಿದ್ದಾರೆ. ಜಿಲ್ಲೆಯಿಂದ ಒಟ್ಟು 6175 ಮಂದಿ ಪಾಸ್ ಗೆ ಅರ್ಜಿ ಸಲ್ಲಿಸಿದ್ದು, 3800 ಮಂದಿ ಪ್ರವೇಶಾತಿ ಪಡೆದಿದ್ದಾರೆ.

