HEALTH TIPS

ನವದೆಹಲಿಯಲ್ಲಿ ನಡುಗಿದ ಭೂಮಿ; 4.6ರ ತೀವ್ರತೆ ದಾಖಲು

            ನವದೆಹಲಿ : ನವದೆಹಲಿಯ ಜನರು ಶುಕ್ರವಾರ ರಾತ್ರಿ ಕೆಲವು ಕ್ಷಣಗಳ ಕಾಲ ಆತಂಕಕ್ಕೆ ಒಳಗಾದರು. ಮಳೆ ಮತ್ತು ಗಾಳಿಯ ನಡುವೆಯೇ ರಾಷ್ಟ್ರ ರಾಜಧಾನಿಯಲ್ಲಿ ಭೂಕಂಪದ ಅನುಭವ ಆಗಿದೆ. ಶುಕ್ರವಾರ ರಾತ್ರಿ 9.08ರ ಸುಮಾರಿಗೆ ನವದೆಹಲಿಯಲ್ಲಿ ಭೂಮಿ ನಡುಗಿದ ಅನುಭವ ಆಗಿದೆ. ಭಯಭೀತರಾದ ಜನರು ಮನೆಯಿಂದ ಹೊರಗೆ ಬಂದರು. ರಿಕ್ಟರ್ ಮಾಪಕದಲ್ಲಿ 4.6ರ ತೀವ್ರತೆಯ ಕಂಪನ ದಾಖಲಾಗಿದೆ.
          ಭೂಕಂಪದ ಕೇಂದ್ರ ಬಿಂದು ಹರ್ಯಾಣದ ರೋಟಕ್‌ನಲ್ಲಿ ದಾಖಲಾಗಿದೆ. ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಭೂಮಿ ನಡುಗಿದ ಅನುಭವವಾಗಿದೆ. ಹಲವಾರು ಜನರು ಭೂಮಿ ನಡುಗಿದ ಅನುಭವವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. 3.3 ಕಿ. ಮೀ. ತನಕ ಭೂಮಿ ನಡುಗಿದ ಅನುಭವ ಉಂಟಾಗಿದೆ ಎಂದು ತಜ್ಞರು ಹೇಳಿದ್ದಾರೆ. ಭೂಕಂಪದ ಕೇಂದ್ರ ಬಿಂದು ಹರ್ಯಾಣದ ರೋಟಕ್‌ ನವದೆಹಲಿಯಿಂದ 65 ಕಿ.ಮೀ. ದೂರದಲ್ಲಿದೆ. 7 ರಿಂದ 8 ಸೆಕೆಂಡ್ ತನಕ ಭೂಮಿ ಕಂಪಿಸಿದೆ ಎಂದು ಜನರು ಟ್ವೀಟ್ ಮಾಡಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries