HEALTH TIPS

ಚೀನಾವನ್ನೇ ಹಿಂದಿಕ್ಕಿದ ಭಾರತ: ಅಲ್ಲಿ 70, ಇಲ್ಲಿ 89,755 ಮಂದಿಗೆ ಸೋಂಕು!

          ನವದೆಹಲಿ: ಇಡೀ ಜಗತ್ತಿಗೆ ನೊವೆಲ್ ಕೊರೊನಾ ವೈರಸ್ ಎಂಬ ವಿಷವನ್ನು ಹಂಚಿಕೆ ಮಾಡಿದ್ದೇ ಡ್ರ್ಯಾಗನ್ ರಾಷ್ಟ್ರ ಚೀನಾ. ವಿಶ್ವದಾದ್ಯಂತ ಕೊವಿಡ್-19 ಸೋಂಕಿಗೆ 3,64,024ಕ್ಕೂ ಅಧಿಕ ಮಂದಿ ಪ್ರಾಣ ತೆತ್ತಿದ್ದಾರೆ. 59,05,415ಕ್ಕೂ ಹೆಚ್ಚೂ ಜನರಿಗೆ ಕೊರೊನಾ ವೈರಸ್ ಅಂಟಿಕೊಂಡಿದೆ. ವಿಶ್ವಕ್ಕೆ ಮಹಾಮಾರಿಯನ್ನು ಕೊಡುಗೆಯಾಗಿ ನೀಡಿದ ಚೀನಾದಲ್ಲಿ ಇದೀಗ ಎಲ್ಲವೂ ತಣ್ಣಗಾಗಿದೆ. ಕೊವಿಡ್-19 ಮಹಾಮಾರಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತವು ಸೋಂಕಿತರ ಸಂಖ್ಯೆಯಲ್ಲಿ ಚೀನಾ ರಾಷ್ಟ್ರವನ್ನೇ ಹಿಂದಿಕ್ಕಿದೆ. ಅಮೆರಿಕಾದ ಜಾನ್ಸ್ ಹಾಪ್ ಕಿನ್ಸ್ ವಿಶ್ವವಿದ್ಯಾಲಯದ ಅಂಕಿ-ಅಂಶಗಳ ಪ್ರಕಾರ ಭಾರತದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು 1.6 ಲಕ್ಷದ ಗಡಿ ದಾಟಿದೆ.
    ಭಾರತದಲ್ಲಿ ಶುಕ್ರವಾರದ ಅಂಕಿ-ಅಂಶಗಳ ಪ್ರಕಾರ 1,65,386 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿದ್ದು, ಇದುವರೆಗೂ 4,711ಕ್ಕೂ ಅಧಿಕ ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ದೇಶದಾದ್ಯಂತ 70,920ಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ.
           ಕೊವಿಡ್-19 ನಿಂದ ಸುಧಾರಿಸಿಕೊಂಡಿತಾ ಡ್ರ್ಯಾಗನ್ ರಾಷ್ಟ್ರ?:
    ವಿಶ್ವಕ್ಕೆ ನೊವೆವ್ ಕೊರೊನಾ ವೈರಸ್ ಸೋಂಕನ್ನು ಹಂಚಿದ ಚೀನಾದಲ್ಲಿ ಪರಿಸ್ಥಿತಿ ಮೊದಲಿನಂತಿಲ್ಲ. ಪ್ರತಿನಿತ್ಯ ಸಾವಿರಾರು ಸೋಂಕಿತ ಪ್ರಕರಣಗಳು ಪತ್ತೆಯಾಗುತ್ತಿದ್ದ ದೇಶದಲ್ಲಿಂದು ಬಹುತೇಕ ಎಲ್ಲವೂ ಸಹಜ ಸ್ಥಿತಿಯತ್ತ ಮರಳುತ್ತಿದೆ. ಕಳೆದ 15 ದಿನಗಳಿಂದಲೂ ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಒಂದು ಹಂತದಲ್ಲಿ ಸೋಂಕಿತ ಪ್ರಕರಣಗಳೇ ಪತ್ತೆಯಾಗುತ್ತಿಲ್ಲ. ಶುಕ್ರವಾರದ ಅಂಕಿ-ಅಂಶಗಳ ಪ್ರಕಾರ ಚೀನಾದಲ್ಲಿ ಕೊರೊನಾ ವೈರಸ್ ನಿಂದ 4,634 ಮಂದಿ ಪ್ರಾಣ ಬಿಟ್ಟಿದ್ದರೆ, 82,995 ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಇದುವರೆಗೂ 78,291 ಸೋಂಕಿತರು ಗುಣಮುಖರಾಗಿದ್ದಾರೆ.
              ಭಾರತದಲ್ಲಿ ಚೀನಾಗಿಂತ ಸೋಂಕಿತರು ಡಬಲ್ :
     ಚೀನಾ ಪರಿಸ್ಥಿತಿ ಮತ್ತು ಜನಜೀವನ ಸುಧಾರಿಸಿಕೊಳ್ಳುತ್ತಿದ್ದರೆ ಇನ್ನೊಂದು ಕಡೆಯಲ್ಲಿ ಭಾರತದಲ್ಲಿ ಕೊರೊನಾ ವೈರಸ್ ನಿಂದ ಜನರು ತತ್ತರಿಸಿ ಹೋಗಿದ್ದಾರೆ. ಚೀನಾಗಿಂತಲೂ ಡಬಲ್ ಸೋಂಕಿತರು ಭಾರತದಲ್ಲಿ ಪತ್ತೆಯಾಗಿದ್ದಾರೆ. ಪ್ರತಿನಿತ್ಯ ಸಾವಿರಾರು ಮಂದಿಗೆ ಸೋಂಕು ತಗಲಿರುವ ಪ್ರಕರಣಗಳು ಪತ್ತೆಯಾಗುತ್ತಲೇ ಇವೆ. ನಂಬರ್.01 ಸ್ಥಾನದಲ್ಲಿದ್ದ ಚೀನಾ ಇದೀಗ 15ನೇ ಸ್ಥಾನಕ್ಕೆ ಕುಸಿದಿದೆ. ಭಾರತವು ಟಾಪ್-10 ರಾಷ್ಟ್ರಗಳ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಭಾರತದಲ್ಲಿ 1,65,386 ಮಂದಿ ಸೋಂಕಿತರಿದ್ದರೆ, ಚೀನಾದಲ್ಲಿ ಈವರೆಗೂ 82,995 ಮಂದಿಗಷ್ಟೇ ಸೋಂಕು ಕಾಣಿಸಿಕೊಂಡಿದೆ.

      70 ಕೊರೊನಾ ವೈರಸ್ ಸೋಂಕಿತರು :
   ಗುಣಮುಖರಾದರೆ ಫಿನಿಶ್! ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಚೀನಾದಲ್ಲಿ 82,995ರಷ್ಟಿದ್ದರೂ ಈ ಪೈಕಿ 78,2,91 ಸೋಂಕಿತರು ಗುಣಮುಖರಾಗಿದ್ದಾರೆ. ಉಳಿದಂತೆ 4,634 ಜನರು ಮೃತಪಟ್ಟಿದ್ದಾರೆ. ಇನ್ನು ಬಾಕಿ ಉಳಿದಿರುವ 70 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ 70 ಸೋಂಕಿತರು ಕೊರೊನಾ ವೈರಸ್ ನಿಂದ ಗುಣಮುಖರಾದರೆ ಚೀನಾದಲ್ಲಿ ಕೊರೊನಾ ವೈರಸ್ ಸೋಂಕಿತರೇ ಇರುವುದಿಲ್ಲ ಎಂದು ಅಂಕಿ-ಅಂಶಗಳು ಹೇಳುತ್ತಿವೆ.

ಕೊವಿಡ್-19 ನಿಂದ ತತ್ತರಿಸಿದ ವಿಶ್ವದ ಟಾಪ್-10 ರಾಷ್ಟಗಳು ಕ್ರ.ಸ ರಾಷ್ಟ್ರ ಸೋಂಕಿತರು ಸಾವು (ಮೇ.28ರ ಅಂಕಿ-ಅಂಶ) 1 ಯುಎಸ್ಎ 1,768,461 103,330 2 ಬ್ರೆಜಿಲ್ 438,812 26,764 3 ರಷ್ಯಾ 379,051 4,142 4 ಸ್ಪೇನ್ 284,986 27,119 5 ಇಂಗ್ಲೆಂಡ್ 269,127 37,837 6 ಇಟಲಿ 231,732 33,142 7 ಫ್ರಾನ್ಸ್ 186,238 28,662 8 ಜರ್ಮನಿ 182,452 8,570 9 ಭಾರತ 165,386 4,711 10 ಟರ್ಕಿ 160,979 4,461

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries