ಜಿನಿವಾ: ವಿಶ್ವದ 213ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 3, ಲಕ್ಷದ 42 ಸಾವಿರ ಗಡಿ ದಾಟಿದ್ದು, ಸೋಂಕಿತರ ಸಂಖ್ಯೆ 5.3 ಮಿಲಿಯನ್ ಗಡಿ ದಾಟಿದೆ.
ಈ ಬಗ್ಗೆ ಜಾನ್ ಹಾಪ್ಕಿನ್ಸ್ ವಿಶ್ವ ವಿದ್ಯಾಲಯ ಮಾಹಿತಿ ನೀಡಿದ್ದು, ಜಾಗತಿಕವಾಗಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ 5,307,298ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ಜಗತ್ತಿನಾದ್ಯಂತ 102,790 ಹೊಸ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.
ಜಗತ್ತಿನಾದ್ಯಂತ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 342,070ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.


