ಕಾಸರಗೋಡು: ಇತರ ರಾಜ್ಯಗಳಿಂದ ಕೇರಳ ಪ್ರವೇಶ ನಡೆಸುವಲ್ಲಿ ಪಾಸ್ ಮಂಜೂರು ಮಾಡುವ ವಿಚಾರದಲ್ಲಿ ಕಾಸರಗೋಡು ಜಿಲ್ಲೆಗೆ 5ನೇ ಸ್ಥಾನವಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಜಿಲ್ಲೆಯಲ್ಲಿ ಈ ವರೆಗೆ ಶೇ 80.83 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ ಎಂದವರು ಹೇಳಿದರು. ಅನೇಕ ಮಿತಿಗಳಿದ್ದರೂ, ತ್ವರಿಗತಗತಿಯಲ್ಲಿ ಪಾಸ್ ಒದಗಿಸಲು ಅಗತ್ಯದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸೋಮವಾರದ ವರೆಗೆ ಲಭಿಸಿದ 8179 ಅರ್ಜಿಗಳಲ್ಲಿ 6611 ಪಾಸ್ ಮಂಜೂರು ಮಾಡಲಾಗಿದೆ ಎಂದವರು ತಿಳಿಸಿರುವರು.


