ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ನಾಲ್ವರಿಗೆ ಸಹಿತ ಕೇರಳ ರಾಜ್ಯದಲ್ಲಿ ಶನಿವಾರ ಒಂದೇ ದಿನ 62 ಕೊರೊನಾ ಪ್ರಕರಣಗಳು ದೃಢಗೊಂಡಿದೆ. ಕೇರಳದಲ್ಲಿ ಒಂದೇ ದಿನ ಇಷ್ಟು ಸಂಖ್ಯೆಯಲ್ಲಿ ಕೊರೊನಾ ವೈರಸ್ ಸೋಂಕು ದೃಢಗೊಂಡದ್ದು ಪ್ರಥಮವಾಗಿದೆ. ಶುಕ್ರವಾರ 42 ಮಂದಿಗೆ ಸೋಂಕು ದೃಢಗೊಂಡಿತ್ತು. ಸೋಂಕು ಹೆಚ್ಚಳದಿಂದ ಮತ್ತೆ ಕೇರಳದಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಗುಣಮುಖರಾಗಿದ್ದಾರೆ.
ಪಾಲ್ಘಾಟ್ ಜಿಲ್ಲೆ - 19, ಕಣ್ಣೂರು-16, ಮಲಪ್ಪುರ-8, ಆಲಪ್ಪುಳ-5, ಕಲ್ಲಿಕೋಟೆ-4, ಕಾಸರಗೋಡು-4, ಕೊಲ್ಲಂ-3, ಕೋಟ್ಟಯಂ-2, ವಯನಾಡು-1 ಎಂಬಂತೆ ಸೋಂಕು ದೃಢಗೊಂಡಿದೆ.
ಈ ಪೈಕಿ 18 ಮಂದಿ ವಿದೇಶದಿಂದ (ಯುಎಇ-9, ಸೌದಿ ಅರೇಬಿಯಾ-3, ಕುವೈಟ್-2, ಮಾಲಾದ್ವೀಪ್-1, ಸಿಂಗಪೂರ್-1, ಮಸ್ಕತ್-1, ಖತ್ತರ್-1) ಬಂದವರು. 31 ಮಂದಿ ಇತರ ರಾಜ್ಯಗಳಿಂದ(ಮಹಾರಾಷ್ಟ್ರ-13, ತಮಿಳುನಾಡು-12, ಗುಜರಾತ್-2, ಕರ್ನಾಟಕ-2, ಉತ್ತರ ಪ್ರದೇಶ-1, ದೆಹಲಿ-1) ಬಂದಿದ್ದು, 13 ಮಂದಿಗೆ ಸಂಪರ್ಕದಿಂದ ರೋಗ ಬಂದಿದೆ. ಇದರಲ್ಲಿ 7 ಮಂದಿ ಆರೋಗ್ಯ ಕಾರ್ಯಕರ್ತರಾಗಿದ್ದಾರೆ. ಈ ಪೈಕಿ ಮೂವರು ಪಾಲ್ಘಾಟ್ ಜಿಲ್ಲೆ, ತಲಾ ಇಬ್ಬರು ಕಣ್ಣೂರು ಹಾಗು ಕಲ್ಲಿಕೋಟೆ ಜಿಲ್ಲೆಯವರು.
ಇದೇ ವೇಳೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಗುಣಮುಖರಾಗಿದ್ದಾರೆ. ಕಾಸರಗೋಡು, ಕೊಲ್ಲಂ ಮತ್ತು ಕೋಟ್ಟಯಂ ತಲಾ ಒಬ್ಬರು ಗುಣಮುಖರಾದವರು. ರಾಜ್ಯದಲ್ಲಿ ಪ್ರಸ್ತುತ 275 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 515 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು 91084 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 90416 ಮಂದಿ ಮನೆಗಳಲ್ಲಿ ಮತ್ತು ಇನ್‍ಸ್ಟಿಟ್ಯೂಶನಲ್ ಕ್ವಾರೆಂಟೈನ್‍ನಲ್ಲಿದ್ದಾರೆ. 668 ಮಂದಿ ಆಸ್ಪತ್ರೆಗಳಲ್ಲಿದ್ದಾರೆ. ಶನಿವಾರ ಶಂಕಿತ 182 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇದು ವರೆಗೆ 52771 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿದ್ದು 51,045 ನೆಗೆಟಿವ್ ಆಗಿದೆ. ರಾಜ್ಯದಲ್ಲಿ ಒಟ್ಟು 37 ಹಾಟ್‍ಸ್ಪಾಟ್‍ಗಳಿವೆ.
ಕಾಸರಗೋಡು ಜಿಲ್ಲೆಯಲ್ಲಿ 4 ಮಂದಿಗೆ ಕೋವಿಡ್ ಸೋಂಕು ಖಚಿತ :
ಕಾಸರಗೋಡು ಜಿಲ್ಲೆಯಲ್ಲಿ 4 ಮಂದಿಗೆ ಕೋವಿಡ್ ಸೋಂಕು ಖಚಿತಗೊಂಡಿದೆ. ಒಬ್ಬರು ರೋಗದಿಂದ ಗುಣಮುಖರಾಗಿದ್ದಾರೆ. ಒಟ್ಟು 28 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋಡೋಂ ಬೇಳೂರು ನಿವಾಸಿಗಳಾದ 43, 32 ವರ್ಷ ಪ್ರಾಯದ ವ್ಯಕ್ತಿಗಳು, ಮಂಗಲ್ಪಾಡಿ ನಿವಾಸಿ 55 ವರ್ಷದ ವ್ಯಕ್ತಿ, ಪೈವಳಿಕೆ ನಿವಾಸಿ 35 ವರ್ಷದ ವ್ಯಕ್ತಿಗೆ ಸೋಂಕು ಖಚಿತಗೊಂಡಿದೆ. ಇವರಲ್ಲಿ 32 ವರ್ಷದ ಕೋಡೋಂ ಬೇಳೂರು ನಿವಾಸಿ ಕೊಲ್ಲಿರಾಷ್ಟ್ರದಿಂದ ಬಂದವರು. 42 ವರ್ಷದ ಕೋಡೋಂ ಬೇಳೂರು ನಿವಾಸಿ ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದಾರೆ. ಮಂಗಲ್ಪಾಡಿ ನಿವಾಸಿ ದುಬೈಯಿಂದ, ಪೈವಳಿಕೆ ನಿವಾಸಿ ಮಹಾರಾಷ್ಟ್ರದಿಂದ ಬಂದವರು.
ಕಾಸರಗೋಡು ಜಿಲ್ಲೆಯಲ್ಲಿ 2785 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2278 ಮಂದಿ, ಆಸ್ಪತ್ರೆಗಳಲ್ಲಿ 507 ಮಂದಿ ನಿಗಾದಲ್ಲಿದ್ದಾರೆ. ಶನಿವಾರ ನೂತನವಾಗಿ 20 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. 398 ಮಂದಿ ಶನಿವಾರ ನಿಗಾ ಅವ„ ಪೂರ್ಣಗೊಳಿಸಿದ್ದಾರೆ.
ಜಿಲ್ಲೆಯಲ್ಲಿ 6094 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 5434 ಮಂದಿಯ ಫಲಿತಾಂಶ ನೆಗೆಟಿವ್ ಆಗಿದೆ. 686 ಮಂದಿ ಕೇರಳ ಪ್ರವೇಶ : ಮಂಜೇಶ್ವರ ಚೆಕ್ ಪೆÇೀಸ್ಟ್ ಮೂಲಕ ಶನಿವಾರ 686 ಮಂದಿ ಕೇರಳ ಪ್ರವೇಶ ಮಾಡಿದ್ದಾರೆ. ಈ ವರೆಗೆ ಒಟ್ಟು 17490 ಮಂದಿ ಕೇರಳಕ್ಕೆ ಆಗಮಿಸಿದರು.


