HEALTH TIPS

ಕೇರಳದಲ್ಲಿ ಕೊರೊನಾ ರಣಾರ್ಭಟ-ಒಟ್ಟು 84 ಮಂದಿ ಬಾಧಿತರು ಇಂದು- ಜಿಲ್ಲೆಯಲ್ಲಿ 18

 
          ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ ಮಹಾರಾಷ್ಟ್ರದಿಂದ ಆಗಮಿಸಿದ 13 ಮಂದಿ ಸಹಿತ 18 ಮಂದಿಗೆ ರೋಗ ಖಚಿತವಾಗಿದೆ. ಒಬ್ಬ ಮಹಿಳೆ ಮತ್ತು 17 ಮಂದಿ ಪುರುಷರು ರೋಗ ಬಾ„ತರು ಎಂದು ಜಿಲ್ಲಾ ವೈದ್ಯಾ„ಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
         ಮಹಾರಾಷ್ಟ್ರವಲ್ಲದೆ ಕುವೈತ್‍ನಿಂದ ಆಗಮಿಸಿದ ಇಬ್ಬರು, ಖತಾರ್ ನಿಂದ ಬಂದ ಒಬ್ಬರು, ಷಾರ್ಜಾ ದಿಂದ ಆಗಮಿಸಿದ ಒಬ್ಬರು, ತಮಿಳುನಾಡಿನಿಂದ ಬಂದ ಒಬ್ಬರಲ್ಲಿ ಸೋಂಕು ಖಚಿತವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಮೂರನೇ ಹಂತದಲ್ಲಿ ಕೋವಿಡ್ ರೋಗ ಖಚಿತಗೊಂಡ 67 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 
                       ಮಹಾರಾಷ್ಟ್ರದಿಂದ ಆಗಮಿಸಿದವರು :
          ಮೇ 23ರಂದು ಆಗಮಿಸಿದ ಪೈವಳಿಕೆ ಗ್ರಾಮ ಪಂಚಾಯತ್‍ನ 41 ವರ್ಷದ ನಿವಾಸಿ, ಮೇ 24ರಂದು ಆಗಮಿಸಿದ 51 ವರ್ಷದ ಕಾಸರಗೋಡು ನಗರಸಭೆ ನಿವಾಸಿ, ಮೇ 17ರಂದು ಕಾರಿನಲ್ಲಿ ಆಗಮಿಸಿದ 54 ವರ್ಷದ ಕುಂಬಳೆ ಗ್ರಾಮ ಪಂಚಾಯತ್ ನಿವಾಸಿ, ಮೇ 24ರಂದು ಬಸ್‍ನಲ್ಲಿ ಬಂದಿದ್ದ 39, 48, 42 ವರ್ಷದ ಕಾಸರಗೋಡು ನಗರಸಭೆ ವ್ಯಾಪ್ತಿಯ ನಿವಾಸಿಗಳೂ, ಮೇ 23ರಂದು ಬಸ್‍ನಲ್ಲಿ ಆಗಮಿಸಿದ 38 ವರ್ಷದ ಮಧೂರು ಗ್ರಾಮ ಪಂಚಾಯತ್ ನಿವಾಸಿ, ಮೇ 22ರಂದು ಬಸ್‍ನಲ್ಲಿ ಆಗಮಿಸಿದ 45 ವರ್ಷದ ಪೈವಳಿಕೆ ನಿವಾಸಿ, ಮೇ 18ರಂದು ಬಸ್‍ನಲ್ಲಿ ಆಗಮಿಸಿದ 40 ವರ್ಷದ ಮಂಗಲ್ಪಾಡಿ ನಿವಾಸಿ, ಮೇ 17ರಂದು ಬಸ್‍ನಲ್ಲಿ ಆಗಮಿಸಿದ 37 ವರ್ಷದ ಪೈವಳಿಕೆ ನಿವಾಸಿ, ಮೇ 18ರಂದು ಬಸ್ ನಲ್ಲಿ ಆಗಮಿಸಿದ 29 ವರ್ಷದ ಮಂಗಲ್ಪಾಡಿ ಪಂಚಾಯತ್ ನಿವಾಸಿ, ಮೇ 19ರಂದು ಬಸ್‍ನಲ್ಲಿ ಆಗಮಿಸಿದ್ದ 28 ವರ್ಷದ ಮಂಗಲ್ಪಾಡಿ ನಿವಾಸಿ, ಮೇ 17ರಂದು ಬಸ್‍ನಲ್ಲಿ ಆಗಮಿಸಿದ್ದ 40 ವರ್ಷದ ಪೈವಳಿಕೆ ಪಂಚಾಯತ್ ನಿವಾಸಿಗಳಿಗೆ ಸೋಂಕು ಖಚಿತವಾಗಿದೆ.
                         ತಮಿಳುನಾಡಿನಿಂದ ಆಗಮಿಸಿದವರು :
          ಮೇ 20ರಂದು ಕೋಡೋಂ-ಬೇಳೂರು ನಿವಾಸಿಗೆ ಸೋಂಕು ಖಚಿತವಾಗಿದೆ. ವಿದೇಶಗಳಿಂದ ಆಗಮಿಸಿದವರು : ಮೇ 20ರಂದು ಕುವೈತ್‍ನಿಂದ ಆಗಮಿಸಿದ್ದ 48 ವರ್ಷದ ಮಡಿಕೈ ಗ್ರಾಮ ಪಂಚಾಯತ್ ನಿವಾಸಿ, ಮೇ 19ರಂದ ಕುವೈತ್‍ನಿಂದ ಆಗಮಿಸಿದ್ದ 31 ವರ್ಷದ ಕುತ್ತಿಕೋಲ್ ಪಂಚಾಯತ್ ನಿವಾಸಿ, ಮೇ 24ರಂದು ಷಾರ್ಜಾದಿಂದ ಆಗಮಿಸಿದ್ದ 59 ವರ್ಷದ ಚೆಂಗಳ ಗ್ರಾಮ ಪಂಚಾಯತ್ ನಿವಾಸಿ, ಮೇ 19ರಂದು ಖತಾರ್‍ನಿಂದ ಆಗಮಿಸಿದ್ದ 24 ವರ್ಷದ ಕುಂಬಳೆ ಪಂಚಾಯತ್ ನಿವಾಸಿ ಮಹಿಳೆಗೆ ಕೋವಿಡ್ ಸೋಂಕು ಖಚಿತಗೊಂಡಿದೆ. 
            ನಿಗಾದಲ್ಲಿ 3616 ಮಂದಿ : ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 3616 ಮಂದಿ      ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3065 ಮಂದಿ, ಆಸ್ಪತ್ರೆಗಳಲ್ಲಿ 551 ಮಂದಿ ನಿಗಾದಲ್ಲಿದ್ದಾರೆ. ಬುಧವಾರ  ನೂತನವಾಗಿ 39 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ. 407 ಮಂದಿಯ ಸ್ಯಾಂಪಲ್ ತಪಾಸಣೆ ಲಭಿಸಿಲ್ಲ.
                             ಕೇರಳದಲ್ಲಿ 84 ಮಂದಿಗೆ ಸೋಂಕು :
        ಕೇರಳ ರಾಜ್ಯದಲ್ಲಿ ಬುಧವಾರ ಒಟ್ಟು 84 ಮಂದಿಗೆ ಕೊರೊನಾ ವೈರಸ್ ಸೋಂಕು ಬಾ„ಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಒಂದೇ ದಿನ ಇಷ್ಟು ಸಂಖ್ಯೆಯಲ್ಲಿ ರೋಗ ದೃಢೀಕರಿಸಿದ್ದು ಪ್ರಥಮವಾಗಿದೆ. ಇದೇ ವೇಳೆ ತೆಲಂಗಾಣ ನಿವಾಸಿಯೊಬ್ಬರು ತಿರುವನಂತಪುರದಲ್ಲಿ ಸಾವಿಗೀಡಾಗಿದ್ದಾರೆ. ಕಾಸರಗೋಡು-18, ಪಾಲ್ಘಾಟ್-16, ಕಣ್ಣೂರು-10, ಮಲಪ್ಪುರಂ-8, ತಿರುವನಂತಪುರ-7, ತೃಶ್ಶೂರು-7, ಕಲ್ಲಿಕೋಟೆ-6, ಪತ್ತನಂತಿಟ್ಟ-6, ಕೋಟ್ಟಯಂ-3, ಕೊಲ್ಲಂ-1, ಇಡುಕ್ಕಿ-1 ಮತ್ತು ಆಲಪುಳ-1 ಎಂಬಂತೆ ರೋಗ ಬಾಧಿಸಿದೆ.
             ಈ ಪೈಕಿ 31 ಮಂದಿ ವಿದೇಶದಿಂದ ಬಂದವರು. 31 ಮಂದಿ ಮಹಾರಾಷ್ಟ್ರದಿಂದ ಬಂದವರು. ತಮಿಳುನಾಡು-9, ಕರ್ನಾಟಕ-3, ಗುಜರಾತ್-2, ದೆಹಲಿ-2, ಆಂಧ್ರದಿಂದ ಬಂದವರು-1 ಹಾಗು ಸಂಪರ್ಕದಿಂದ 5 ಮಂದಿಗೆ ರೋಗ ದೃಢಗೊಳಿಸಲಾಗಿದೆ. ಇದೇ ವೇಳೆ ರಾಜ್ಯದಲ್ಲಿ 3 ಮಂದಿ ಗುಣಮುಖರಾಗಿದ್ದಾರೆ.
        ಈ ವರೆಗೆ ಕೇರಳ ರಾಜ್ಯದಲ್ಲಿ 1088 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದ್ದು, ಪ್ರಸ್ತುತ 526 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 115297 ಮಂದಿ ನಿಗಾವಣೆಯಲ್ಲಿದ್ದಾರೆ. ಇವರಲ್ಲಿ 114305 ಮಂದಿ ಮನೆಗಳಲ್ಲೂ ಹಾಗು ಇನ್‍ಸ್ಟಿಟ್ಯೂಷನಲ್ ಕ್ವಾರೆಂಟೈನ್‍ನಲ್ಲಿ ನಿಗಾವಣೆಯಲ್ಲಿದ್ದಾರೆ. 922 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ನಿಗಾವಣೆಯಲ್ಲಿದ್ದಾರೆ. ಬುಧವಾರ ಶಂಕಿತ 210 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ವರೆಗೆ 60685 ಮಂದಿಯ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಲಭ್ಯ 58460 ನೆಗೆಟಿವ್ ಆಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries