ಕಾಸರಗೋಡು: ಜಿಲ್ಲೆಯಲ್ಲಿ ಪಬ್ಲಿಕ್ ಹೆಲ್ತ್ ಲ್ಯಾಬ್ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ತಿಳಿಸಿದರು.
ವಿದ್ಯಾನಗರದ ಜಿಲ್ಲಾ ವೆಕ್ಟರ್ ಕಂಟ್ರೋಲ್ ರೂಂ ಬಳಿಯಿರುವ ಆರೋಗ್ಯ ಇಲಾಖೆಯ ಜಾಗವನ್ನು ಈ ಲ್ಯಾಬ್ ಆರಂಭಕ್ಕೆ ಗುರುತುಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ನಿರ್ದೇಶಕ ತಿಳಿಸಿದರು. ಯೋಜನೆಗಾಗಿ 125 ಲಕ್ಷ ರೂ.ನ ಆಡಳಿತಾನುಮತಿ ಲಭಿಸಿದೆ. ಲಾಕ್ ಡೌನ್ ಮುಗಿದ ತಕ್ಷಣ ಲೋಕೋಪಯೋಗಿ ಇಲಾಖೆ ಕಟ್ಟಡ ನಿರ್ಮಾಣ ನಡೆಸಲಿದೆ. ಪಬ್ಲಿಕ್ ಹೆಲ್ತ್ ಲ್ಯಾಬ್ ಆರಂಭಗೊಳ್ಳುವ ಮೂಲಕ ಜಿಲ್ಲೆಯ ಸರಕಾರಿ, ಖಾಸಗಿ ಆಸ್ಪತ್ರೆಗಳಿಂದ ತಿಳಿಸಲಾಗುವ ಎಲ್ಲ ವಿಧದ ದೊಡ್ಡ ತಪಾಸಣೆಗಳನ್ನು ಸರಕಾರಿ ದರದಲ್ಲಿ ಇಲ್ಲಿ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಮುಖ್ಯಮಂತ್ರಿಗೆ ಸಲ್ಲಿಸಿದ್ದ ಮನವಿ ಹಿನ್ನೆಲೆಯಲ್ಲಿ ಲ್ಯಾಬ್ ಆರಂಭಕ್ಕೆ ಅನುಮತಿ ಲಭಿಸಿದೆ.


