ಕಾಸರಗೋಡು: ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳೂ ಚಟುವಟಿಕೆ ಆರಂಭಿಸಿದ್ದರೂ, ಸೇವೆಗಳಿಗಾಗಿ ಸಾರ್ವಜನಿಕರು ಈಗ ಕಚೇರಿಗಳಿಗೆ ಆಗಮಿಸುವಂತಿಲ್ಲ. ಆನ್ ಲೈನ್ಮೂಲಕ ಸೇವೆ ಒದಗಿಸಲು ಮತ್ತು ಹೆಲ್ಪ್ ಡೆಸ್ಕ್ ಮೂಲಕ ಜನತೆಗೆ ಉತ್ತರ ನೀಡಲು ತೀರ್ಮಾನಿಸಲಾಗಿದೆ. ಈ ಸಂಬಂಧ ಹುಸೂರ್ ಶಿರಸ್ತೇದಾರರಿಗೆ ಹೊಣೆ ನೀಡಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಉಪ ಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಎ.ಟಿ.ಮನೋಜ್, ಇತರ ಜಿಲ್ಲಾ ಮಟ್ಟದ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.


