HEALTH TIPS

ಕೋವಿಡ್ ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸಲು ನಿರ್ಧಾರ

 
         ಕಾಸರಗೋಡು: ಕೊವಿಡ್ ಪ್ರತಿರೋಧ ಚಟುವಟಿಕೆಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ ನೀಲೇಶ್ವರದಲ್ಲಿ ಆರೋಗ್ಯ ಜಾಗೃತಿ ಮತ್ತು ನಿಗಾ ಬಿಗಿಗೊಳಿಸಲು ತೀರ್ಮಾನಿಸಲಾಗಿದೆ.
         ನೀಲೇಶ್ವರ ನಗರಸಭೆ, ವ್ಯಾಪಾರಿ ವ್ಯವಸಾಯಿ ಸಂಘಟನೆ, ಪೆÇಲೀಸ್ ಇಲಾಖೆ, ಜನಪ್ರತಿನಿಧಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.   
             ವಿದೇಶಗಳಿಂದ, ಇತರ ರಾಜ್ಯಗಳಿಂದ ಆಗಮಿಸಿದವರು, ನಿಗಾದಲ್ಲಿರುವವರು ಕೋವಿಡ್ ಕಟ್ಟುನಿಟ್ಟು ಉಲ್ಲಂಘಿಸಿದರೆ ತಕ್ಷಣ ಸರಕಾರಿ ಕ್ವಾರೆಂಟೈನ್ ಕೇಂದ್ರಗಳಿಗೆ ದಾಖಲಿಸಲಾಗುವುದು. ಈ ಸಂಬಂಧ ವಾರ್ಡ್ ಜಾಗೃತಾ ಸಮಿತಿಗಳನಿಗಾ ಚುರುಕುಗೊಳಿಸಲಾಗುವುದು. ನಗರಸಭೆ ವ್ಯಾಪ್ತಿಯ ವ್ಯಾಪಾರ ಸಂಸ್ಥೆಗಳಲ್ಲಿ ಏಕಕಾಲಕ್ಕೆ 5ಕ್ಕಿಂತ ಅಧಿಕ ಮಂದಿ ಗುಂಪುಸೇರುವಂತಿಲ್ಲ. ಅಂಗಡಿ ಮಾಲೀಕರು, ಸಿಬ್ಬಂದಿ, ಗ್ರಾಹಕರು ಮಾಸ್ಕ್ಧರಿಸಿಯೃ ಸಾಮಾಗ್ರಿ ಮಾರಾಟ, ಖರೀದಿ ನಡೆಸುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಮೀನು, ತರಕಾರಿ ಇತ್ಯಾದಿಗಳನ್ನು ಗ್ರಾಮೀಣ ಪ್ರದೇಶಗಳಿಂದ ತಂದು ಮಾರಾಟ ನಡೆಸುವವರು, ಗ್ರಾಹಕರು ಮಾಸ್ಕ್ಧರಿಸಿಯೇ ವ್ಯವಹಾರ ಮಾಡಬೇಕು. ಸಾಮಾಜಿಕ ಅಂತರ ಪಾಲಿಸಬೇಕು. ಸಾಮಾಗ್ರಿ ಏರಿಕೆ, ಇಳಿಕೆಯ ಸಂಬಂಧ ಮಾರ್ಕೆಟ್ ಜಂಕ್ಷನ್ ನಿಂದ ಕಾನ್ವೆಂಟ್ ಜಂಕ್ಷನ್ವರೆಗೆ ಹಾದಿಬದಿಯಲ್ಲಿ ಎಲ್ಲೆಂದರಲ್ಲಿ ಲಾರಿಗಳನ್ನು ನಿಲುಗಡೆ ಮಾಡುವಂತಿಲ್ಲ ಇತ್ಯಾದಿ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. 
         ನಿಗಾದಲ್ಲಿರುವವರಿಗೆ ನಗರಸಭೆ ವತಿಯಿಂದ ಈಗಾಗಲೇ ಭೋಜನ, ಔಷಧ ವಿತರಣೆ ಉಚಿತವಾಗಿ ತಲಪಿಸುತ್ತಿದೆ. ರಂಝಾನ್ ವ್ರತಧಾರಿಗಳಿಗೆ ವಿಶೇಷ ಆಹಾರ ಪೂರೈಕೆ ನಡೆಸಲಾಗುತ್ತಿದೆ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್ ತಿಳಿಸಿದರು.
        ಉಪಾಧ್ಯಕ್ಷೆ ವಿ.ಗೌರಿ, ಸ್ಥಾಯೀ ಸಮಿತಿ ಸದಸ್ಯರಾದ ಪಿ.ಎಂ.ಸಂಧ್ಯಾ, ಪಿ.ಪಿ.ಮುಹಮ್ಮದ್ ರಫಿ, ಪಿ.ರಾಧಾ, ಸದಸ್ಯರಾದ ಎರುವಾಡ್ ಮೋಹನನ್, ಎ.ವಿ.ಸುರೇಂದ್ರನ್, ಪಿ.ಕೆ.ರತೀಶ್, ಭಾರ್ಗವಿ,ಪಿ.ವಿ.ರಾಧಾಕೃಷ್ಣಣ್, ಸಿ.ಐ. ಎಂ.ಎ.ಮ್ಯಾಥ್ಯೂ, ವ್ಯಾಪಾರಿ ಸಂಘಟನೆಗಳ ಪ್ರತಿನಿಧಿಗಳಾದ ಕೆ.ವಿ.ಸುರೇಶ್ ಕುಮಾರ್, ಕೆ.ಮೋಹನ್ ಮೊದಲಾವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries