ಬದಿಯಡ್ಕ: ಲಾಕ್ ಡೌನ್ ಸಡಿಲಗೊಂಡ ಬೆನ್ನಲ್ಲೇ ಬದಿಯಡ್ಕ ಪೇಟೆಯಲ್ಲಿ ಹೆಚ್ಚಿನ ಎಲ್ಲಾ ಅಂಗಡಿಗಳೂ ಕಳೆದ ಒಂದು ವಾರದಿಂದ ತೆರೆದು ಕಾರ್ಯಾಚರಿಸುತ್ತಿದ್ದು, ಜನಜಂಗುಳಿ ಅಧಿಕವಾಗಿದೆ. ಬುಧವಾರ ಪೆÇಲೀಸರು ಪೇಟೆಯಲ್ಲಿ ಗಸ್ತು ತಿರುಗುತ್ತಿದ್ದು, ಮಾಸ್ಕ್ ಧರಿಸದವರಿಗೆ ದಂಡ ಕಟ್ಟುವಂತೆ ಆದೇಶಿಸಿ ಪೆÇಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾರೆ. ಬೆಳಗ್ಗೆ ಈ ರೀತಿ ಅನೇಕರು ದಂಡ ತೆತ್ತು ಮಾಸ್ಕ್ ಧರಿಸಿದ್ದಾರೆ.
ಕೊನೆಗೂ ಸೆಲೂನ್, ಫೆÇೀಟೋ ಸ್ಟುಡಿಯೋಗಳು ಆರಂಭ :
ದೇಶದಲ್ಲಿ ಲಾಕ್ ಡೌನ್ ಘೋಷಣೆಯಾದಂದಿನಿಂದ ಬಂದ್ ಆಗಿದ್ದ ಫೆÇೀಟೋ ಸ್ಟುಡಿಯೋ, ಬಾರ್ಬರ್ ಶಾಪ್, ಬ್ಯೂಟಿಪಾರ್ಲರ್‍ಗಳು ಬುಧವಾರದಿಂದ ತೆರೆದು ಕಾರ್ಯಾಚರಿಸುವಂತೆ ಅಧಿಕೃತರು ಆದೇಶಿಸಿದ್ದರು. ಫೆÇೀಟೋ ಸ್ಟುಡಿಯೋಗಳ ಕುರಿತು ಯಾವುದೇ ಹೇಳಿಕೆಯನ್ನೂ ನೀಡದ ಸರ್ಕಾರದ ವಿರುದ್ಧ ಜಿಲ್ಲೆಯ ಛಾಯಾಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಶನ್ ವತಿಯಿಂದ ಜಿಲ್ಲಾಧಿಕಾರಿಗೆ ಮನವಿಯನ್ನೂ ಸಲ್ಲಿಸಲಾಗಿತ್ತು.


