HEALTH TIPS

ಜಿಲ್ಲೆಯಲ್ಲಿ ನಿಬಂಧನೆಗಳೊಂದಿಗೆ ಲಾಕ್ ಡೌನ್ ವಿನಾಯಿತಿಗೆ ನಿರ್ಧಾರ : ಜಿಲ್ಲಾಧಿಕಾರಿ

   
             ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ನಿಬಂಧನೆಗಳಿಗೆ  ಅನುಸಾರವಾಗಿ ಲಾಕ್ ಡೌನ್ ಕಟ್ಟುನಿಟ್ಟುಗಳಲ್ಲಿ ಕೆಲವು ವಿನಾಯಿತಿ ನೀಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
       ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ನಡೆದ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಅಧ್ಯಕ್ಷತೆ ವಹಿಸಿದ್ದರು.
    ಸಿ.ಆರ್.ಪಿ.ಸಿ. 144 ಕಾಯಿದೆ ಪ್ರಕಾರ ಹೇರಲಾದ ನಿಷೇಧಾಜ್ಞೆ ಜಿಲ್ಲೆಯಲ್ಲಿ ಮುಂದುವರಿಯಲಿದೆ. ಈ ಪ್ರಕಾರ ಜನ ಗುಂಪುಗೂಡುವಂತಿಲ್ಲ. ಅತೀವ್ರ ಜಾಗ್ರತೆ ಪಾಲಿಸಬೇಕಾದ ಕಂಟೈನ್ ಮೆಂಟ್ ಝೋನ್ ಗಳಲ್ಲಿ ಅಗತ್ಯದ ಕಟ್ಟುನಿಟ್ಟುಗಳನ್ನು ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿರುವರು.
                ಜಿಲ್ಲೆಯಲ್ಲಿ ಮಾಸ್ಕ್ ಧಾರಣೆ ಕಡ್ಡಾಯ:
    ಜಿಲ್ಲೆಯಲ್ಲಿ ಮಾಸ್ಕ್ ಧಾರಣೆ ಕಡ್ಡಾಯಗೊಳಿಸಲಾಗಿದೆ. ಇದರ ಅಂಗಾಗಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಅವರ ನೇತೃತ್ವದಲ್ಲಿ ವಿಶೇಷ ಡ್ರೈವ್ ನಡೆಯಲಿದೆ. ವಿಶೇಷ ದಳ ರಚಿಸಿ ನಿಗಾ ಪ್ರಬಲಗೊಳಿಸಲಾಗಿದೆ. ಮಾಸ್ಕ್ ಧರಿಸದೇ ಇದ್ದವರ ವಿರುದ್ಧ ದಂಡ ಸಹಿತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸರಕಾರಿ ಕಚೇರಿಗಳು, ಸಂಸ್ಥೇಗಳು, ಸಾರ್ವಜನಿಕ ಕೇಂದ್ರಗಳು ಸಹಿತ ಎಲ್ಲ ಕಡೆಗಳಲ್ಲೂ ರಾಜ್ಯ ಸರಕಾರದ ಬ್ರೇಕ್ ದಿ ಚೈನ್ ಅಭಿಯಾನದ ಅಂಗವಾಗಿ ಎಸ್.ಎಂ.ಎಸ್.(ಸಾಬೂನು/ ಸಾನಿಟೈಸರ್, ಮಾಸ್ಕ್, ಸಾಮಾಜಿಕ ಅಂತರ.)ಕಡ್ಡಾಯವಾಗಿ ಪಾಲಿಸಬೇಕು.
               ಸರ್ಕಾರಿ ಕಚೇರಿಗಳ ಚಟುವಟಿಕೆಗಳು ಹೀಗಿರಲಿವೆ:
      ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳೂ ತೆರೆದು ಕಾರ್ಯಾಚರಿಸಬೇಕು. ಅಗತ್ಯದ ಸೇವೆಗಳಲ್ಲಿ ಶೇ 100 ಹಾಜರಾತಿ ಖಚಿತಪಡಿಸಬೇಕು. ಆದರೆ ಅನಿವಾರ್ಯ ಸೇವೆಗಳಲ್ಲದೇ ಇರುವ ಇಲಾಖೆಗಳಲ್ಲಿ ಶೇ 50 ಸಿಬ್ಬಂದಿ ಹಾಜರಾಗಬೇಕು. ಸಾರ್ವಜನಿಕರಿಗೆ ಆನ್ ಲೈನ್ ಮೂಲಕ ಗರಿಷ್ಠ ಸೇವೆಗಳು ಲಭಿಸಲಿವೆ. ಜನ ಕಚೇರಿಗಳಿಗೆ ಆಗಮಿಸುವ ಬದಲು ದೂರವಾಣಿ ಯಾ ಆನ್ ಲೈನ್ ಮೂಲಕ ಸೇವೆಗಳನ್ನು ಒದಗಿಸುವ ಖಚಿತತೆ ಏರ್ಪಡಿಸಬೇಕು ಎಂದು ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು. ತುರ್ತು ಪರಿಸ್ಥಿತಿಗಳಲ್ಲಿ ಮಾತ್ರ ಸಾರ್ವಜನಿಕರು ಸರಕಾರಿ ಕಚೇರಿಗಳಿಗೆ ಆಗಮಿಸಿದರೆ ಸಾಕು ಎಂದವರು ಹೇಳಿದರು.
          ವಿನಾಯಿತಿ ಹೀಗಿವೆ:
   ಭಾನುವಾರಗಳಲ್ಲದೇ ಇರುವ ದಿನಗಳಲ್ಲಿ ಕಂಟೈನ್ ಮೆಂಟ್ ಝೋನ್ ಗಳಲ್ಲದೇ ಇರುವ ಪ್ರದೇಶಗಳಲ್ಲಿ ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 7 ಗಂಟೆ ವರೆಗೆ ಈ ಕೆಳಗೆ ತಿಳಿಸಲಾದ ಸಂಸ್ಥೆಗಳು ಕಾರ್ಯಾಚರಿಸಬಹುದು.
     ಬಂಗಾರದ ಆಭರಣಗಳ ಅಂಗಡಿಗಳು ನಿಬಂಧನೆಗಳನ್ನು ಪಾಲಿಸಿ ಕಾರ್ಯಾಚರಿಸಬಹುದು. ಕ್ರೀಡೋಪಕರಣಗಳ ಮಾರಾಟ ಅಂಗಡಿಗಳು ಕಾರ್ಯಾಚರಿಸಬಹುದು. ಮೊಬೈಲ್ ಅಂಗಡಿಗಳು ಎಲ್ಲ ದಿನ ಕಾರ್ಯಾಚರಿಸಬಹುದು.
          ಕ್ಷೌ ರದ ಅಂಗಡಿಗಳು: 
  ಕ್ಷೌ ರದ ಅಂಗಡಿಗಳು( ಹೇರ್ ಡ್ರೈ ಯಿಂಗ್, ಎ.ಸಿ.ಯಿಲ್ಲದೆ) ಚಟುವಟಿಕೆ ನಡೆಸಬಹುದು. ಇಬ್ಬರಿಗಿಂತ ಅಧಿಕ ಮಂದಿ ತಮ್ಮಸರದಿಗಾಗಿ ಕಾದುಕುಳಿತುಕೊಳ್ಳಬಾರದು. ಇಲ್ಲಿ ಆಗಮಿಸಿದವರ ಹೆಸರು, ಮಾಹಿತಿ ದಾಖಲು ನಡೆಸಬೇಕು. ಬಾರ್ಬ ರ್ ಶಾಪ್ಗಳಿಗೆ ಆಗಮಿಸುವವರು, ಕ್ಷೌ ರ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್, ಗ್ಲೌಸ್ ಧರಿಸಬೇಕು. ಬಳಕೆಯ ನಂತರ ಉಪಕರಣಗಳನ್ನು ಸ್ಯಾನಿಟೈಸರ್ ಬಳಸಿ ರೋಗಾಣುಮುಕ್ತ ಗೊಳಿಸಬೇಕು. ಕೋವಿಡ್ ಲಕ್ಷಣಗಳಾಗಿರುವ ಜ್ವರ, ಕೆಮ್ಮು, ಶೀತ, ಉಸಿರಾಟ ತೊಂದರೆ ಸಹಿತ ಇರುವ ಸಿಬ್ಬಂದಿ ಕಾಯಕದಿಂದ ದೂರ ಉಳಿಯಬೇಕು. ಗ್ರಾಮಪಂಚಾಯತ್/ ನಗರಸಭೆ ಸಿಬ್ಬಂದಿ ಈ ವಿಚಾರಗಳ ಬಗ್ಗೆ  ಖಚಿತತೆ ಮಾಡಿಕೊಳ್ಳಬೇಕು. ನಿಬಂಧನೆಗಳನ್ನು ಪಾಲಿಸದೇ ಇದ್ದವರ ವಿರುದ್ಧ ಇನ್ ಸಿಡೆಂಟ್ ಕಮಾಂಡರ್ಸ್ ಗೆ ದೂರು ಸಲ್ಲಿಸುವರು. ಕ್ಷೌರದಂಗಡಿಗೆ ಆಗಮಿಸುವ ಮುನ್ನ ದೂರವಾಣಿ ಮೂಲಕ ಸಂದರ್ಶನದ ಸಮಯ ಖಚಿತಪಡಿಸಿಕೊಳ್ಳಬೇಕು.
             ಕನ್ನಡಕದ ಅಂಗಡಿಗಳು:
    ಕನ್ನಡಕದ ಅಂಗಡಿಗಳಲ್ಲಿ ಸಿಬ್ಬಂದಿಕಡ್ಡಾಯವಾಗಿ ಸ್ಯಾನಿಟೈಸರ್ ಬಳಸಬೇಕು. ಪ್ರತಿನಿತ್ಯ ಅಂಗಡಿ ರೋಗಾಣುಮುಕ್ಯ ಗೊಳಿಸಬೇಕು. ಕನ್ನಡಕಗಳನ್ನು ಖರೀದಿಸುವ ವೇಳೆ ಆಯ್ಕೆಗಾಗಿ ಆಗಾಗ ಬದಲಿಸಿ ನೋಡುವುದರಿಂದ ರೋಗ ಹರಡುವಿಕೆ ಸಾಧ್ಯತೆಯಿದೆ. ಈ ಬಗ್ಗೆ ಜಾಗ್ರತೆ ಬೇಕು. ಕನ್ನಡಕದ ಅಂಗಡಿ ಸಿಬ್ಬಂದಿಗೆ ಜಿಲ್ಲಾ ವೈದ್ಯಾಧಿಕಾರಿ ನೇತೃತ್ವದಲ್ಲಿ ಈ ಬಗ್ಗೆ ತರಬೇತಿ ನೀಡಲಾಗುವುದು.
            ಫೆÇಟೋ ಸ್ಟುಡಿಯೋಗಳು:
    ಸ್ಟುಡಿಯೋಗಳಲ್ಲಿ ಕೊಠಡಿಗಳನ್ನು ಮುಚ್ಚುಗಡೆ ನಡೆಸಿ ಫೆÇಟೋ ಕ್ಲಿಕ್ಕಿಸಬಾರದು. ತೆರೆದ ಕೊಠಡಿಗಳಲ್ಲಿ ಕಾಯಕ ನಡೆಸಬೇಕು. ರೋಗ ಹರಡುವಿಕೆ ಸಾಧ್ಯತೆಯ ಹಿನ್ನೆಲೆಯಲ್ಲಿ ಮೇಕ್ ಅಪ್ ಸಾಮಾಗ್ರಿಗಳನ್ನು ಬಳಸಕೂಡದು.
            ಬಟ್ಟೆ ಅಂಗಡಿಗಳು:
   ಬಹು ಅಂತಸ್ತಿನ ಕಟ್ಟಡಗಳ ಸಹಿತ ಬಟ್ಟೆ ಅಂಗಡಿಗಳು ತೆರೆದು ಕಾರ್ಯಾಚರಿಸಬಹುದು. ಎ.ಸಿ.ಬಳಸುವಂತಿಲ್ಲ. ಡ್ರೆಸ್ಸಿಂಗ್ ಟ್ರಯಲ್ ರೂಂ ತೆರೆಯಬಾರದು. ಸರಕಾರದ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
      ಚಪ್ಪಲಿ ಅಂಗಡಿಗಳು, ಫ್ಯಾನ್ಸಿ ಅಂಗಡಿಗಳು,ಕಂಪ್ಯೂಟರ್ ಅಂಗಡಿಗಳು ಎಲ್ಲ ದಿನ ಕಾರ್ಯಾಚರಿಸಬಹುದು. ಸಾಮಾಜಿಕ ಅಂತರ ಕಾಯುವಿಕೆ, ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಕೆ ಕಡ್ಡಾಯ.
        ಹೋಟೆಲ್ ಗಳಲ್ಲಿ ನಿಬಂಧನೆಗಳ ಪ್ರಕಾರ ಪಾರ್ಸೆಲ್ ವಿತರಣೆ, ಹೋಂ ಡೆಲಿವರಿಗೆ ಮಾತ್ರ ಅನುಮತಿಯಿದೆ. ಕುಳಿತು ಸೇವನೆ ನಡೆಸುವಂತಿಲ್ಲ. ಸ್ಥಳೀಯಾಡಳಿತ ಸಂಸ್ಥೆಗಳ ಅನುಮತಿಯೊಂದಿಗೆ ಗೂಡಂಗಡಿಗಳು ತೆರೆದು ಪಾರ್ಸೆಲ್ ವಿತರಣೆ ನಡೆಸಬಹುದು. 
       ಐಸ್ಕ್ರೀಂ ಪಾರ್ಲರ್ ಗಳು, ಜ್ಯೂಸ್ ಅಂಗಡಿಗಳು ಇತ್ಯಾದಿ ತೆರೆಯುವಂತಿಲ್ಲ. 
     ಕಾಸರಗೋಡು,ಕಾಞಂಗಾಡ್ ನಗರಸಭೆಗಳ ಮೀನು ಮಾರ್ಕೆಟ್ ಗಳ ಚಟುವಟಿಕೆಗಳು ಈಗಿನಂತೆಯೇ ಮುಂದುವರಿಯಬೇಕು. ಮಾಸ್ಕ್, ಗ್ಲೌಸ್, ಸ್ಯಾನಿಟೈಸರ್ ಬಳಕೆ ಕಡ್ಡಾಯ ಸಹಿತ ಕಟ್ಟನಿಟ್ಟುಗಳು ಅನಿವಾರ್ಯ. ಉಲ್ಲಂಘಿಸಿದವರ ವಿರುದ್ಧ ಸ್ಥಾಳಿಯಾಡಳಿತ ಸಂಸ್ಥೆಗಳು, ಪೆÇಲೀಸರು ಕ್ರಮ ಕೈಗೊಳ್ಳುವರು.
     ವಾಣಿಜ್ಯ/ ವ್ಯಾಪಾರ ಸಂಸ್ಥೆಗಳಲ್ಲಿ ಶೌಚಾಲಯ ಸಹಿತ ಎಲ್ಲ ಕಡೆಗಳನ್ನು ಪೂರ್ಣ ರೋಗಾಣುಮುಕ್ತ ನಡೆಸಬೇಕು. ಆನ್ ಲೈನ್ ಸೌಲಭ್ಯ ಗರಿಷ್ಠ ಮಟ್ಟದಲ್ಲಿ ಬಳಸಬೇಕು. ವ್ಯಾಪಾರ ಸಂಸ್ಥೆಗಳಲ್ಲಿ ಹೋಂ ಡೆಲಿವರಿಗೆ ಆದ್ಯತೆ ನಿಡಬೇಕು.
           ವಾಹನ ಸಂಚಾರ:
    ಆಟೋ- ಟ್ಯಾಕ್ಸಿ ಸೇವೆ ನಡೆಸಬಹುದು. ಆಟೋಗಳಲ್ಲಿ ಚಾಲಕನಲ್ಲದೆ, ಒಬ್ಬ ಪ್ರಯಾಣಿಕ ಮಾತ್ರ ಸಂಚಾರ ನಡೆಸಬಹುದು. ಆದರೆ ಅನಿವಾರ್ಯ ಸಂದರ್ಭಗಳಲ್ಲಿ ಒಂದೇ ಕುಟುಂಬದ ಮೂವರು ಸಂಚಾರ ನಡೆಸಲು ಅನುಮತಿಯಿದೆ. ದ್ವಿಚಕ್ರ ವಾಹನಗಳಲ್ಲಿ ಸವಾರ ಮಾತ್ರ, ಅನಿವಾರ್ಯ ಸಂದರ್ಭಗಳಲ್ಲಿ ಕುಟುಂಬದ ಸದಸ್ಯ ಹಿಂಬದಿ ಸವಾರರಾಗಬಹುದು. ಟ್ಯಾಕ್ಸಿ ಸಹಿತ ನಾಲ್ಕು ಚಕ್ರ ವಾಹನಗಳಲ್ಲಿ ಚಾಲಕನಲ್ಲದೆ ಹಿಂಬದಿ ಸೀಟಿನಲ್ಲಿ ಇಬ್ಬರು( ಕುಟುಂಬದ ಸದಸ್ಯರಾದರೆ ಮಾತ್ರ ಹಿಂಬದಿ ಸೀಟಿನಲ್ಲಿ ಮೂವರು) ಸಂಚಾರ ನಡೆಸಬಹುದು. ಎ.ಸಿ.ಬಳಕೆ ನಡೆಸಕೂಡದು. ವಾಹನವೇರುವ ಮುನ್ನ ಸ್ಯಾನಿಟೈಸರ್  ಬಳಸಬೇಕು. ಮಾಸ್ಕ್ ಕಡ್ಡಾಯ.
        ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ:
    ಕೆ.ಎಸ್.ಆರ್.ಟಿ.ಸಿ.ಬಸ್ ಗಳಲ್ಲಿ ತಲಾ 30 ಮಂದಿ ಮಾತ್ರ ಸಂಚಾರ ಬಡೆಸಬೇಕು. ಸಾಮಾಜಿಕ ಅಂತರ ಕಡ್ಡಾಯ. ಕಂಡೆಕ್ಟ ರ್ ಈ ಬಗ್ಗೆ ಖಚಿತಪಡಿಸಬೇಕು. ಈ ಆದೇಶ ಉಲ್ಲಂಘಿಸಿದಲ್ಲಿ ಕಂಡೆಕ್ಟ ರ್ ವಿರುದ್ಧ  ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿರುವರು.
         ರೈಲ್ವೇ ಸಂಚಾರ:
   ರೈಲು ಸಂಚಾರ ಸಾಧಾರಣ ಗತಿಯಲ್ಲಿ ಆರಂಭಗೊಂಡ ನಂತರ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ 19 ಜಾಗ್ರತಾ ವೆಬ್ ಪೆÇೀರ್ಟಲ್ ನಲ್ಲಿ ನೋಂದಣಿ ನಡೆಸಿ ಪಾಸ್ ಪಡೆದುಕೊಳ್ಳಬೇಕು. ಪಾಸ್ ಪಡೆಯದೇ ಇದ್ದವರನ್ನು ಪ್ರತ್ಯೇಕ ವಾಹನದಲ್ಲಿ ವಿಶೇಷ ಕೇಂದ್ರಕ್ಕೆ ದಾಖಲಿಸಿ, ಮಾಹಿತಿ ಸಂಗ್ರಹಿಸಲಾಗುವುದು. ರೋಗ ಲಕ್ಷಣ ಹೊಂದಿರುವವರನ್ನು ಕ್ವಾರೆಂಟೈನ್ ನಡೆಸಿ, ಮಾಹಿತಿ ಸಂಗ್ರಹಿಸುವ ಹೊಣೆಯನ್ನು ಬ್ಲೋಕ್ ಡೆವೆಲಪ್ ಮೆಂಟ್ ಅಧಿಕಾರಿಗೆ ನೀಡಲಾಗಿದೆ.
      ಕೋವಿಡ್ ಪ್ರತಿರೋಧ ಚಟುವಟಿಕೆಗಳಿಗಾಗಿ ವಿವಿಧ ವಲಯಗಳಲ್ಲಿ ಚಟುವಟಿಕೆ ನಡೆಸುತ್ತಿರುವ ಎಲ್ಲ ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ಶ್ಲಾಘಿಸಿದರು.
  ಸಭೆಯಲ್ಲಿ ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಹೆಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ಪೆÇಲೀಸ್ವರಿಷ್ಠಾಧಿಕಾರಿ ಪಿ.ಎಸ್.ಸಾಬು, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್,  ಸಹಾಯಕ ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ಟಿ.ಮನೋಜ್, ಇತರ ಜಿಲ್ಲಾ ಮಟ್ಟದ ಇಲಾಖೆ ಮುಖ್ಯಸ್ಥರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries