ಕಾಸರಗೋಡು: ಕೋವಿಡ್ ಜೊತೆಗೆ ಬೇಸಿಗೆಯ ಮಳೆಯ ಪ್ರಾರಂಭದೊಂದಿಗೆ, ಹೆಚ್ಚು ಹೆಚ್ಚು ಸೊಳ್ಳೆಯಿಂದ ಹರಡುವ ರೋಗಗಳು ವರದಿಯಾಗುತ್ತಿವೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ. ಡೆಂಗ್ಯೂ ಪ್ರಕರಣಗಳು ಹೆಚ್ಚು ವರದಿಯಾಗಿರುವುದರಿಂದ ಆರೋಗ್ಯ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಿದೆ. ಜಿಲ್ಲೆಯಲ್ಲಿ ಡೆಂಗ್ಯೂ ಪ್ರತಿರೋಧ ಕ್ರಮಗಳಿಗೂ ರೂಪುನೀಡಲಾಗಿದೆ. ಇಲ್ಲಿಯವರೆಗೆ 9 ಜನರಿಗೆ ಡೆಂಗ್ಯೂ ಇರುವುದು ಪತ್ತೆಯಾಗಿದೆ.
ಜನವರಿಯಿಂದ 21 ಮಲೇರಿಯಾ ಪ್ರಕರಣಗಳು ದಾಖಲಾಗಿವೆ. ಲೆಪೆÇ್ಟಸ್ಪೈರೋಸಿಸ್ ಶಂಕಿತ 8 ಪ್ರಕರಣಗಳು ಸಹ ಪತ್ತೆಯಾಗಿದೆ. ಕಾಮಾಲೆ ರೋಗವೂ ಕೆಲವೆಡೆ ಹರಡುವ ಸಾಧ್ಯತೆ ಗುರುತಿಸಲಾಗಿದೆ. ಕೋವಿಡ್ ಜೊತೆಗೆ, ನೀರಿನಿಂದ ಹರಡುವ ಮತ್ತು ಸೊಳ್ಳೆಯಿಂದ ಹರಡುವ ರೋಗಗಳು ಜನಸಾಮಾನ್ಯರನ್ನು ಹೈರಾಣಗೊಳಿಸುವ ಸಾಧ್ಯತೆಯನ್ನು ಅಧಿಕೃತರು ದೃಢಪಡಿಸಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಮನೆಗಳಲ್ಲೇ ಉಳಕೊಂಡಿರುವ ನಾಗರಿಕರು ತಮ್ಮ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಯಾವುದೇ ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೊಳ್ಳೆಯಿಂದ ಹರಡುವ ಅಂಟುಜಾಡ್ಯಗಳಿಂದ ಪಾರಾಗಲು ಸ್ವಚ್ಚತೆ ಮತ್ತು ವಿವಿಧ ರೋಗಕಾರಕ ಸೊಳ್ಳೆ ನಿರ್ಮೂಲನೆ ಚಟುವಟಿಕೆಗಳನ್ನು ಖಚಿತಪಡಿಸಿಕೊಳ್ಳಬೇಕು. ನೀರು ಕಟ್ಟಿನಿಲ್ಲುವ ಪ್ರದೇಶಗಳಲ್ಲಿ ಕೆಲಸ ಮಾಡುವ ಜನರು ಹತ್ತಿರದ ಆರೋಗ್ಯ ಸಂಸ್ಥೆಗಳಿಂದ ಆಂಟಿರೆಟ್ರೋವೈರಲ್ ಔಷಧಿಯನ್ನು ಖರೀದಿಸಬೇಕು. ಜ್ವರ ಅಥವಾ ಇತರ ರೋಗಲಕ್ಷಣಗಳಿಗೆ ಚಿಕಿತ್ಸೆ ಪಡೆಯಲು ಸರ್ಕಾರಿ ಆಸ್ಪತ್ರೆಯಲ್ಲಿ ಅಧಿಕೃತರ ಸಮರ್ಪಕ ಸಲಹೆ-ಚಿಕಿತ್ಸೆಗೆ ಕೈಜೋಡಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.