ಕಾಸರಗೋಡು: ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಮಾಸ್ಕ್ ಧಾರಣೆ ಕಡ್ಡಾಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಸಿದ್ಧಪಡಿಸಿರುವ ಕಿರು ವೀಡಿಯೋ ಚಿತ್ರ "ಕವಚಂ" ಬಿಡುಗಡೆಗೊಂಡಿದೆ. ಜಿಲ್ಲಾ ಆರೋಗ್ಯ ಕೇರಳಂ ಕಾರ್ಯಕ್ರಮ ಪ್ರಬಂಧಕ ಡಾ.ರಾಮನ್ ಸ್ವಾತಿ ವಾಮನ್ ಮತ್ತು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಜಂಟಿಯಾಗಿ ವೀಡಿಯೋ ಚಿತ್ರ ಬಿಡುಗಡೆಗೊಳಿಸಿದರು.
ಜಿಲ್ಲಾ ಆಸ್ಪತ್ರೆಯ ಆರ್.ಎಂ.ಒ. ಡಾ.ರಜಿತ್ ಕೃಷ್ಣ ಅವರ ಆಶಯದೊಂದಿಗೆ ನಿರ್ಮಿಸಲಾದ ವೀಡಿಯೋ ಚಿತ್ರದ ಹಿನ್ನೆಲೆಯಲ್ಲಿ ಪಿ.ವಿ.ಮಹೇಶ್ ಕುಮಾರ್, ಎ.ಶ್ರೀಕುಮಾರ್, ಜಯಪ್ರಕಾಶ್ ಎ.ಕೆ., ಮಯನಾ ಎಸ್., ನವ್ಯಾ ನಿಕಾಲಸ್, ಕಮಲ್ ಕೆ.ಜೋಸ್ ಮೊದಲಾದವರು ದುಡಿದಿದ್ದಾರೆ. ಶ್ರೀಜಿತ್ ಕರಿವೆಳ್ಳೂರು ಕ್ಯಾಮೆರಾಮ್ಯಾನ್ ಆಗಿ ಕಾರ್ಯನಿರ್ವಹಿಸಿದ್ದಾರೆ.


