HEALTH TIPS

ಆನ್ ಲೈನ್ ಸೌಲಭ್ಯಗಳೊಂದಿಗೆ ಗಮನ ಸೆಳೆಯುತ್ತಿರುವ ಮಾಯಿಪ್ಪಾಡಿ ಡಯಟ್


          ಕಾಸರಗೋಡು:  ಕೋವಿಡ್ ಸೋಂಕು ಹರಡುತ್ತಿರುವ ಪರಿಸ್ಥಿತಿಯಲ್ಲಿ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರ (ಮಾಯಿಪ್ಪಾಡಿ ಡಯಟ್) ಆನ್ ಲೈನ್ ತರಗತಿಗಳ ಮತ್ತು ವೆಬ್ ಸೌಲಭ್ಯಗಳ (ವೆಬಿನಾರ್) ಮೂಲಕ ಸಕ್ರಿಯವಾಗಿದೆ.
          ಕನ್ನಡ ಮತ್ತು ಮಲೆಯಾಳಂ ಮಾಧ್ಯಮಗಳಲ್ಲಿ ಶಿಕ್ಷಕ ತರಬೇತಿ ಪಡೆಯುತ್ತಿರುವ ಸುಮಾರು 160 ಶಿಕ್ಷಕ ವಿದ್ಯಾರ್ಥಿಗಳಿಗಾಗಿ ಇಲ್ಲಿ ಆನ್ ಲೈನ್ ತರಗತಿ ಮತ್ತು ಪರೀಕ್ಷೆಗಳನ್ನು ನಡೆಸುತ್ತಿದೆ. ಖ್ಯಾತ ಸಿನಿಮಾ ನಿರ್ದೇಶಕ ಮತ್ತು ಕಾಸರಗೋಡು ಜಿಲ್ಲೆಯ ನಿವಾಸಿ ವೈಶಾಖ್ ಅವರು ಉದ್ಘಾಟನೆ ನಡೆಸಿದ ಫಿಲಂ ಫೆಸ್ಟಿವಲ್ ಮತ್ತು ಕಿರುಚಿತ್ರ ಪ್ರದರ್ಶನ-ಸಂವಾದ ಕಾರ್ಯಕ್ರಮ ಡಯಟ್ ನಲ್ಲಿ ನಡೆಸಲಾಗಿದೆ.
       ಜಲಸಂರಕ್ಷಣೆ ಸಂಬಂಧ ವೆಬಿನಾರ್ ಇಲ್ಲಿ ಜರುಗಿದೆ. ಡಯಟ್ ಟ್ರೈನಿಗಳು ಸಿದ್ಧಪಡಿಸಿದ "ವಾಟರ್" ಎಂಬ ಕಿರು ಚಿತ್ರದ ಪ್ರದರ್ಶ ನವೂ ನಡೆದಿದೆ. ವಿದ್ಯಾರ್ಥಿಗಳಲ್ಲಿ ಇಂಗ್ಲೀಷ್ ಭಾಷಾ ಪರಿಣತಿ ಹೆಚ್ಚಿಸುವ ನಿಟ್ಟಿನಲ್ಲಿ ಇಫೆಕ್ಟಿವ್ ಕ್ಲಾಸ್ ರೂಂ ಟ್ರಾನ್ಸೇಕ್ಷನ್ ಎಂಬ ಹೆಸರಿನಲ್ಲಿ ವೆಬಿನಾರ್ ಇಂದು (ಮೇ 31) ನಡೆಯಲಿದೆ. ಎಸ್.ಎಸ್.ಕೆ., ಕೈಟ್ ರಾಜ್ಯ ಕನ್ಸ ಲ್ಟೆಂಟ್ ಡಾ.ಪಿ.ಕೆ.ಜಯರಾಜ್ ತರಗತಿ ನಡೆಸುವರು. ಡಯಟ್ ಫ್ಯಾಕ್ವೆ ಲ್ಟಿ ಗಳ ನೇತೃತ್ವದಲ್ಲಿ ವಿವಿಧ ವಿಚಾರಗಳಲ್ಲಿ ಆನ್ಲೈನ್ ತರಗತಿ, ಮಾದರಿ ಪರೀಕ್ಷೆಗಳೂ ನಡೆಸಲಾಗುತ್ತಿವೆ.   

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries