HEALTH TIPS

ಎಸ್ಸೆಸ್ಸೆಲ್ಸಿ, ಹೈಯರ್ ಸೆಕೆಂಡರಿ ಪರೀಕ್ಷೆ ಮುಕ್ತಾಯ

   
        ಕಾಸರಗೋಡು: ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಎಸ್ಸೆಸ್ಸೆಲ್ಸಿ, ಹೈಯರ್ ಸೆಕೆಂಡರಿ ಪರೀಕ್ಷೆಗಳು ಮೇ 26ರಿಂದ ಆರಂಭಗೊಂಡಿದ್ದು, ಶನಿವಾರ ಕೊನೆಗೊಂಡಿದೆ. ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ನಿರ್ದೇಶನಗಳೊಂದಿಗೆ ಪರೀಕ್ಷೆ ನಡೆಸಲಾಗಿತ್ತು.
        ಜಿಲ್ಲೆಯಲ್ಲಿ ಎಸ್ಸೆಸೆಲ್ಸಿ, ಹೈಯರ್ ಸೆಕೆಂಡರಿ, ವೊಕೇಶನಲ್ ಹೈಯರ್ ಸೆಕೆಂಡರಿ ಒಳಗೊಂಡಂತೆ 53344ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದರು. ಎಸ್ಸೆಸೆಲ್ಸಿಗೆ 153ಕೇಂದ್ರಗಳಲ್ಲಿ 19630, ಒಟ್ಟು 106 ಕೇಂದ್ರಗಳಲ್ಲಿ ಪ್ಲಸ್ ವನ್ ತರಗತಿಗೆ 16677, ಪ್ಲಸ್ ಟು ತರಗತಿಗೆ 17037, ವೊಕೇಶನಲ್ ಹೈರ್ ಸೆಕೆಂಡರಿ ಶಾಲೆಗೆ 2491ಮಂದಿ ಹೆಸರು ನೋಂದಾಯಿಸಿದವರಲ್ಲಿ ಒಳಗೊಂಡಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಆಗಮಿಸಬೇಕಾಘಿದ್ದ 30ಮಂದಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ಕರ್ನಾಟಕದಲ್ಲಿ ಕ್ವಾರಂಟೈನ್ ಹೊಂದಿದ ಮನೆಗಳಿಂದ ಆಗಮಿಸಿದವರನ್ನು ಕೊಠಡಿಯೊಳಗೆ ಪ್ರತ್ಯೇಕವಾಗಿರಿಸಿ ಪರೀಕ್ಷೆ ನಡೆಸಲಾಗಿzದ್ದರೆ,  ಉಳಿದವರನ್ನು ಸಾಮಾಜಿಕ ಅಂತರ ಪಾಲನೆಯೊಂದಿಗೆ ಪರೀಕ್ಷಾ ಕೊಠಡಿಗಳಲ್ಲಿರಿಸಲಾಗಿತ್ತು. ನಂತರ ಇವರನ್ನು ಅವರ ಮನೆ, ಹಾಸ್ಟೆಲ್ ಅಥವಾ ಶಾಲೆಗಳಲ್ಲಿ ಪ್ರತ್ಯೇಕ ಕ್ವಾರಂಟೈನ್ನಲ್ಲಿರಿಸುವ ವ್ಯವಸ್ಥೆ ಮಾಡಲಾಗಿತ್ತು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries