ಕಾಸರಗೋಡು: ಜಿಲ್ಲೆಯಲ್ಲಿ ನಿಗದಿಪಡಿಸಲಾದ ವ್ಯಾಪಾರ ಸಂಸ್ಥೆಗಳು ತೆರೆದು ಕಾರ್ಯಾಚರಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ವಾಹನಗಳ ಹೊಗೆ ತಪಾಸಣೆ ಕೇಂದ್ರಗಳು ಸೋಮವಾರದಿಂದ ಶನಿವಾರ ತನಕ ಬೆಳಗ್ಗೆ 9 ರಿಂದ ಸಂಜೆ 7 ಗಂಟೆ ವರೆಗೆ ಕಾರ್ಯಾಚರಿಸಬಹುದು. ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಜಿಲ್ಲೆಯಲ್ಲಿ ಶೇಂದಿ ಅಂಗಡಿಗಳು ತೆರೆದು ಕಾರ್ಯಾಚರಿಸಬಹುದು. ಬೆಳಗ್ಗೆ 9 ರಿಂದ ಸಂಜೆ 7 ಗಂಟೆ ವರೆಗೆ ಇವು ಕಾರ್ಯಾಚರಿಸಬಹುದು. ಎಲ್ಲ ಸುರಕ್ಷಾ ಕ್ರಮಗಳನ್ನು ಪಾಲಿಸಿಕೊಂಡು, ಬಾಟಲಿಗಳಲ್ಲಿ ಪಾರ್ಸೆಲ್ ಆಗಿ ಮಾತ್ರ ಶೇಂದಿ ಮಾರಾಟ ನಡೆಸಬಹುದಾಗಿದೆ ಎಂದರು.
ಜಿಲ್ಲೆಯಲ್ಲಿ ನಿಗದಿತ ದಿನಗಳಲ್ಲಿ ಮಾತ್ರ ತೆರೆದು ಕಾರ್ಯಾಚರಿಸಲು ತಿಳಿಸಲಾಗಿದ್ದ ಕೆಲವು ಅಂಗಡಿಗಳು ಎಲ್ಲ ದಿನಗಳಲ್ಲೂ ತೆರೆಯುತ್ತಿರುವುದು ಗಮನಕ್ಕೆ ಬಂದಿದೆ. ಇಂಥಾ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಾಗುವುದು ಎಂದು ಜಿಲ್ಲಾಧಿಕಾರಿ ಮುನ್ನೆಚ್ಚರಿಕೆ ನೀಡಿದ್ದಾರೆ.

