HEALTH TIPS

ಮೊಬೈಲ್ ಗೇಮ್ ಖರೀದಿಗೆ ಸಂಗ್ರಹಿಸಿದ್ದ ಮೊಬಲಗು ಮುಖ್ಯಮಂತ್ರಿ ದುರಂತ ಪರಿಹಾರ ನಿಧಿಗೆ ನೀಡಿ ಮಾನವೀಯತೆ ಮೆರೆದ ಬಾಲಕ

 
            ಕಾಸರಗೋಡು: ಮೊಬೈಲ್ ಗೇಮ್ ಖರೀದಿಗಾಗಿ ಸಂಗ್ರಹಿಸಿದ್ದ ಮೊಬಲಗನ್ನು ಮುಖ್ಯಮಂತ್ರಿ ದುರಂತ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡುವ ಮೂಲಕ 5 ನೇ ತರಗತಿ ವಿದ್ಯಾರ್ಥಿ ಮಾನವೀಯತೆ ಮೆರೆದಿದ್ದಾರೆ. ಅಹಮ್ಮದ್ ಹ್ಯಾರಿಸ್ ಬೇಬಿ ಎಂಬ ಬಾಲಕ ಈ ಉದಾರತೆ ತೋರಿದವರು. ಚೆರ್ಕಳ ಬೇರ್ಕ ನಿವಾಸಿ ಮೊಹಮ್ಮದುಂಞÂ-ಬೇಬಿ ಅಸೂರ ದಂಪತಿ ಪುತ್ರ. ವಿದ್ಯಾನಗರ ಠಾಣೆಗೆ ತೆರಳಿ ಮೊಬಲಗು ನೀಡಲು ಬಯಸಿದ ಬಾಲಕನನ್ನು ಪೆÇಲೀಸರು ಜಿಲ್ಲಾಧಿಕಾರಿ ಕಚೇರಿಗೆ ಕರೆತಂದು ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಅವರಿಗೆ ಹಸ್ತಾಂತರಿಸಲು ಸಹಾಯಮಾಡಿದ್ದಾರೆ. 
        ತನ್ನ ಮನೆಯಿಂದ ಸೈಕಲ್ ತುಳಿಯುತ್ತಾ ಕುಡಿಕೆಯಲ್ಲಿದ್ದ ಹಣದೊಂದಿಗೆ ಬಂದ ಬಾಲಕನನ್ನು ಕಂಡ ವಿದ್ಯಾನಗರ ಪೆÇಲೀಸರು ಒಂದು ಕ್ಷಣ ದಂಗಾಗಿದ್ದರು. ನಂತರ ಬಾಲಕನನ್ನು ವಿಚಾರಿಸಿದ ವೇಳೆ ವಿಷಯ ಸ್ಪಷ್ಟವಾಗಿತ್ತು. ತನಗೊಂದು ಮೊಬೈಲ್ ಗೇಮ್ಖರೀದಿಸಬೇಕು ಎಂಬ ಕಾರಣಕ್ಕೆ ಬಾಲಕ ಕೆಲವು ಕಾಲಗಳಿಂದ ಕುಡಿಕೆಯಲ್ಲಿ ಹಣ ಸಂಗ್ರಹಿಸಿಕೊಂಡು ಬಂದಿದ್ದ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಈ ನಿಧಿ ಮುಖ್ಯಮಂತ್ರಿ ದುರಂತ ಪರಿಹಾರಕ್ಕೆ ಸಲ್ಲಿಸುವುದು ಸೂಕ್ತ ಎಂಬ ಮನೋಭಾವದಿಂದ ಈ ಕ್ರಮ ಕೈಗೊಂಡಿರುವುದಾಗಿ ಅಭಿಪ್ರಾಯಪಟ್ಟಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries