ಕಾಸರಗೋಡು: ಜಿಲ್ಲೆಯ ಕೋವಿಡ್ ಪ್ರತಿರೋಧ ಚಟುವಟಿಕೆ ನಡೆಸುವಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ನೀಡುತ್ತಿರುವ ಸಣ್ಣದಲ್ಲ. ದೇಶಕ್ಕೆ ಮಾದರಿಯಾಗಿರುವ ಈ ಚಿಕಿತ್ಸಾಲಯಗಳಿಗೊಂದು ಉತ್ತಮ ನಿರ್ದಶನ ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿದೆ.
ಸೋಂಕಿನ ಸಾಮಾಜಿಕ ಹರಡುವಿಕೆಯ ಭೀತಿಯಿತ್ತು:
ಜನ ನಿಭಿಡಿತೆ ಇರುವ ಪ್ರದೇಶದಲ್ಲೂ ಮಾರಕ ಸೋಂಕಿನ ಸಾಮೂಹಿಕ ಹರಡುವಿಕೆ ತಡೆಗಟ್ಟುವ ಮೂಲಕ ಕೋವಿಡ್ ಪ್ರತಿರೋಧ ನಡೆಸಬಹುದು ಎಂಬುದನ್ನು ಈ ಕೇಂದ್ರ ಕ್ರಿಯಾತ್ಮಕವಾಗಿ ತೋರಿಕೊಟ್ಟಿದೆ. ಸೌಲಭ್ಯಗಳ ಮಿತಿಯಿದ್ದರೂ, ಕೋಡಿ ಪ್ರತಿರೋಧ ಚಟುವಟಿಕೆಗ ದ್ವಿತ ಹಂತದ ವೇಳೆ 27 ಮಂದಿಯಿದ್ದ ರೋಗಿಗಳ ಸಂಖ್ಯೆಯನ್ನು ಸೊನ್ನೆಗೆ ತಂದು ನಿಲ್ಲಿಸಿದ ಶ್ರೇಯಸ್ಸು ಚೆಂಗಳ ಆರೋಗ್ಯ ಕೇಂದ್ರಕ್ಕೆ ಸಲ್ಲುತ್ತದೆ. 2011 ನೇ ಇಸವಿಯ ಜನಗಣತಿ ಪ್ರಕಾರ ಚೆಂಗಳ ಗ್ರಾಮಪಂಚಾಯತ್ನ ಜನ ಸಂಖ್ಯೆ 57,756 ಆಗಿತ್ತು. ಜಿಲ್ಲೆಯ ಅತ್ಯಧಿಕ ಜನಸಂಖ್ಯೆಯಿರುವ ಪ್ರದೇಶ ಇದಾಗಿದೆ. ಜಿಲ್ಲೆಯಲ್ಲಿ ಚೆಮ್ನಾಡ್ ಗ್ರಾಮಪಂಚಾಯತ್ ಮತ್ತು ಕಾಸರಗೋಡು ನಗರಸಭೆ ಹೊರತುಪಡಿಸಿದರೆ ಅತ್ಯಧಿಕ ಕೋವಿಡ್ ಸೋಂಕು ಖಚಿತಗೊಂಡವರಿದ್ದ ಪ್ರದೇಶವೂ ಇದಾಗಿತ್ತು.
ಕೊಲ್ಲಿರಾಷ್ಟ್ರ ಗಳಿಂದ ಊರಿಗೆ ಮರಳಿದ 15 ಮಂದಿಯಿಂದ ಸ್ಥಳೀಯ 12 ಮಂದಿಗೆ ಸೋಂಕು ಹರಡಿತ್ತು. ಇವರ ಸಂಪರ್ಕದಲ್ಲಿದ್ದವರ ಪ್ರಥಮ ಪಟ್ಟಿ ಸಿದ್ಧಪಡಿಸಿದ ವೇಳೆ 169 ಮಂದಿಯನ್ನೂ, ದ್ವಿತೀಯ ಪಟ್ಟಿಯಲ್ಲಿ 73 ಮಂದಿಯನ್ನೂ ಬಹಳ ತ್ರಾಸದೊಂದಿಗೆ ಪತ್ತೆಮಾಡಿ ದಾಖಲಿಸಲಾಗಿತ್ತು. ಇವರನ್ನೆಲ್ಲ ತಪಾಸಣೆಗೊಳಪಡಿಸಲಾಯಿತು. ನಂತರ 321 ಮಂದಿಯ ಗಂಟಲ ರಸ ತಪಾಸಣೆಗೊಳಪಡಿಸಲಾಗಿತ್ತು. ಚೆಂಗಳ ಗ್ರಾಮಪಂಚಾಯತ್ ಮಟ್ಟದಲ್ಲಿ 17ನೇ ವಾರ್ಡ್ ಆಗಿರುವ ಬೇವಿಂಜೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕೋವಿಡ್ ಸೋಂಕು ಖಚಿತವಾಗಿತ್ತು. ಇಲ್ಲಿ ಹತ್ತು ಮಂದಿಗೆ ಕೋವಿಡ್ ಖಚಿತವಾಗಿತ್ತು. ಜೊತೆಗೆ ಸಾಮಾಜಿಕ ಹರಡುವಿಕೆಯ ಭೀತಿಯೂ ತಲೆದೋರತೊಡಗಿತ್ತು.
ತಕ್ಷಣ ಜಿಲ್ಲಾಡಳಿತದ ಉಸ್ತುವಾರಿಯಲ್ಲಿ ಪೆÇಲೀಸ್ ಮತ್ತು ಚೆಂಗಳ ಗ್ರಾಮಪಂಚಾಯತ್ ನ ಬೆಂಬಲದೊಂದಿಗೆ ಕೋವಿಡ್ ನಿಯಂತ್ರಣ ಚಟುವಟಿಕೆಗಳಿಗೆ ಯೋಜನೆ ಹಮ್ಮಿಕೊಳ್ಳಲಾಯಿತು. ಕೋವಿಡ್ ವರದಿಯಾದ ವಾರ್ಡಿನ ಎಲ್ಲ ಮನೆಗಳಲ್ಲೂ ಸಮೀಕ್ಷೆ ನಡೆಸಲಾಯಿತು. ಹೈ ರಿಸ್ಕ್ ವಿಭಾಗದಲ್ಲಿರುವವರನ್ನೂ, ರೋಗಲಕ್ಷಣ ಹೊಂದಿದವರನ್ನೂ ಪತ್ತೆಮಾಡಲಾಗಿತ್ತು. ಈ ಸಮೀಕ್ಷೆಯಲ್ಲಿ 1136 ಮನೆಗಳಿಂದ 69 ಮಂದಿಯ ಗಂಟಲರಸ ಪರಿಣತ ತಪಾಸನೆಗೊಳಪಡಿಸಲಾಗಿತ್ತು. ಇವರೆಲ್ಲರ ಫಲಿತಾಂಶ ನೆಗೆಟಿವ್ ಆಗಿತ್ತು ಎಂಬುದು ಸಮಾಧಾನಕರ ವಿಚಾರವಾಗಿತ್ತು. ಸಾಮಾಜಿಕ ಹರಡುವಿಕೆಯ ಭೀತಿಯ ಹಿನ್ನೆಲೆಯಲ್ಲಿ ಸಮುದಾಯ ಅಡುಗೆಮನೆ ಕಾರ್ಯಕರ್ತರ, ವ್ಯಾಪಾರಿಗಳ, ಜನಪ್ರತಿನಿಧಿಗಳ, ಪೆÇಲೀಸರ, ಪಡಿತರ ಅಂಗಡಿಗಳ ಕಾರ್ಮಿಕರ, ಆಶಾ ಕಾರ್ಯಕರ್ತರ ಸಹಿತ ಮಂದಿಗಳ ಗಂಟಲ ಸ್ರಾವ ತಪಾಸಣೆಯನ್ನೂ ನಡೆಸಲಾಗಿತ್ತು.
ಇಂದಿನ ಸರಕಾರಿ ವ್ಯವಸ್ಥೆಗಳ ಹಿನ್ನೆಲೆಯಲ್ಲಿ ಮೊದಲ ಹಂತದಲ್ಲಿ 127 ಆನಿವಾಸಿ ಕೇರಳೀಯರು ಇಲ್ಲಿನ ತಮ್ಮ ನಿವಾಸಗಳಿಗೆ ಮರಳಿದ್ದಾರೆ. ಇತರ ರಾಜ್ಯಗಳಿಂದ 127 ಮಂದಿ ಮರಳಿದ್ದಾರೆ. ಇದೇ ವೇಳೆ ರಾಜ್ಯ ಸರಕಾರದ ಪಾಸ್ ನೊಂದಿಗೆ ಇತರ ರಾಜ್ಯಗಳಿಂದ ಆಗಮಿಸಿದ 106 ಮಂದಿಯನ್ನು ಕ್ವಾರೆಂಟೈನ್ ನಲ್ಲಿ ದಾಖಲಿಸಲಾಗಿದೆ.
ಇತರ ರಾಜ್ಯಗಳ ಕಾರಿಕರಿಗೂ ಸಂರಕ್ಷಣೆ:
ಅತ್ಯಂತ ಸೂಕ್ಷ್ಮಪರಿಸ್ಥಿತಿಯ ನಡುವೆಯೂ ರಾಜ್ಯ ಸರಕಾರದ ಘೋಷಿತ ನೀತಿಯ ಹಿನ್ನೆಲೆಯಲ್ಲಿ ಇತರ ರಾಜ್ಯಗಳ ಕಾರ್ಮಿಕರಿಗೆ ಅಗತ್ಯದ ಎಲ್ಲ ಸಂರಕ್ಷಣೆಯ ವ್ಯವಸ್ಥೆಗಳಲ್ಲೂ ಇಲ್ಲಿ ನಡೆಸಲಾಗಿದೆ. ಚೆಂಗಳ ಗ್ರಾಮಪಚಾಯತ್ ಮಟ್ಟದಲ್ಲಿ ನೋಂದಣಿನಡೆಸಿರುವ 546 ಮಂದಿಯನ್ನೂ ತಪಾಸಣೆಗೊಳಪಡಿಸಲಾಗಿದ್ದು, ಅವರ ಸಂಶಯಗಳ ನಿವಾರಣೆ ನಡೆಸಲಾಗಿದೆ. ತಪಾಸಣೆ ವೇಳೆ ಕರ್ನಾಟಕ ಮೂಲನಿವಾಸಿ ಕಾರ್ಮಿಕೆಯೊಬ್ಬರಲ್ಲಿ ರೋಗಲಕ್ಷಣ ಪತ್ತೆಯಾಗಿದ್ದು, ಅವರನ್ನು ಕಾಞಂಗಾಡಿನ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದ ಪರಿಣಾಮ ಅವರು ಗುಣಮುಖರಾಗಿದ್ದಾರೆ. ಪಂಚಾಯತ್ ನ ವಿವಿಧೆಡೆ ಇರುವ ಈ ಕಾರ್ಮಿಕರ ಕ್ಯಾಂಪ್ಗಳಿಗೆ ಸತತ ಸಂಪರ್ಕ ನಡೆಸಿ ಅವರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿದೆ ಎಂದು ಸ್ಥಳೀಯ ಆರೋಗ್ಯ ಕೇಂದ್ರದ ಆರೋಗ್ಯ ಇನ್ಸ್ ಪೆಕ್ಟರ್ ಬಿ.ಅಶ್ರಫ್ ತಿಳಿರುವರು.
ಜನಜಾಗೃತಿ ಸಮಿತಿಗಳ, ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರ ಸಹಕಾರದೊಂದಿಗೆ ಜನಜಾಗೃತಿ ಸಹಿತ ವಿಭಿನ್ನ ಚಟುವಟಿಕೆಗಳ ಮೂಲಕ ಕೋವಿಡ್ ಪ್ರತಿರೋಧ ಚಟುವಟಿಕೆಗಳನ್ನು ಇಲ್ಲಿ ನಡೆಸಲಾಗುತ್ತಿದೆ. ಪ್ರತಿರೋಧದ ಮೂರನೇ ಹಂತದ ಚಟುವಟಿಕೆಗಳಲ್ಲೂ ತೀವ್ರ ಜಾಗರೂಕತೆಯೊಂದಿಗೆ ಇಲ್ಲಿ ಪ್ರಕ್ರಿಯೆಗಳು ನಡೆಯುತ್ತಿವೆ. ಚೆಂಗಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಷಮೀಮಾ ತನ್ವೀರ್ ಮತ್ತು ಹೆಲ್ತ್ ಇನ್ಸ್ ಪೆಕ್ಟರ್ ಬಿ.ಅಶ್ರಫ್ ಅವರ ನೇತೃತ್ವದಲ್ಲಿ ಸತತ ಚಟುವಟಿಕೆಗಳು ಮುಂದುವರಿಯುತ್ತಿವೆ.