ಕಾಸರಗೋಡು: ಸುಭಿಕ್ಷ ಕೇರಳಂ ಯೋಜನೆಯ ಜಾರಿ ಅಂಗವಾಗಿ ಹರಿತ ಕೇರಳಂ ಮಿಷನ್, ಉದುಮಾ ಟೆಕ್ಸ್ ಟೈಲ್ಸ್ ಮಿಲ್ಸ್, ಕೃಷಿ ಅಭಿನೃದ್ಧಿ ಕೃಷಿಕ ಕಲ್ಯಾಣ ಇಲಾಖೆ, ಉದುಮಾ ಗ್ರಾಮ ಪಂಚಾಯತ್ ಜಂಟಿ ವತಿಯಿಂದ ಜಿಲ್ಲೆಯಲ್ಲಿ ಕೃಷಿ ನಡೆಸಲಾಗುವುದು.
ರಾಜ್ಯ ಸರಕಾರದ ಸಾರ್ವಜನಿಕ ಸಂಸ್ಥೆ ಉದುಮಾ ಟೆಕ್ಸ್ ಟೈಲ್ಸ್ ಮಿಲ್ಸ್ ಆವರಣದಲ್ಲಿ ಜಂಬರಾಗಿರುವ 15 ಎಕ್ರೆ ಜಾಗದಲ್ಲಿ ಕೃಷಿ ನಡೆಸಲು ನಿರ್ಧರಿಸಲಾಗಿದೆ. ಸಹಕಾರಿ ಸಂಸ್ಥೆಗಳು, ಕುಟುಂಬಶ್ರೀ, ಸ್ವಯಂ ಸೇವಾ ಸಂಘಟನೆಗಳು ಮೊದಲಾದವುಗಳ ಸಹಕಾರದೊಂದಿಗೆ ತರಕಾರಿ, ಭತ್ತ, ಗೆಡ್ಡೆಗಳು ಇತ್ಯಾದಿ ವೈವಿಧ್ಯಮಯ ಕೃಷಿ ನಡೆಸಲಾಗುವುದು.
ಈ ನಿಟ್ಟಿನಲ್ಲಿ ತರಕಾರಿಕೃಷಿಯ ಉದ್ಘಾಟನೆ ನಾಳೆ(ಮೇ 16ರಂದು) ಉದುಮಾ ಟೆಕ್ಸ್ ಟೈಲ್ಸ್ ಮಿಲ್ಸ್ ಬಳಿ ನಡೆಯಲಿದೆ. ಅಂದು ಬೆಳಗ್ಗೆ 10 ಗಂಟೆಗೆ ಶಾಸಕ ಕೆ.ಕುಂuಟಿಜeಜಿiಟಿeಜರಾಮನ್ ಉದ್ಘಾಟಿಸುವರು. ಉದುಮಾ ಗ್ರಾಮಪಂಚಾಯತ್ ಅಧ್ಯಕ್ಷ ಮಹಮ್ಮದಾಲಿ ಅಧ್ಯಕ್ಷತೆ ವಹಿಸುವರು. ಹರಿತ ಕೇರಳಂ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಯೋಜನೆ ಬಗ್ಗೆ ಮಾಹಿತಿ ನೀಡುವರು. ಉದುಮಾ ಟೆಕ್ಸ್ ಟೈಲ್ಸ್ ಮಿಲ್ಸ್ ಘಟಕ ಪ್ರಭಾರ ಅಧಿಕಾರಿ ರಾಧಾಕೃಷ್ಣನ್, ಮಿಲ್ಸ್ ಕಾರ್ಮಿಕರ ಯೂನಿಯನ್ ಕಾರ್ಯದರ್ಶಿ ಕೆ.ರತೀಶ್, ವಾರ್ಡ್ ಸದಸ್ಯೆ ಕಮಲಾಕ್ಷಿ, ಕೃಷಿ ಅಧಿಕಾರಿ ಬಿಂದು ಉಪಸ್ಥಿತರಿರುವರು.


