ಕಾಸರಗೋಡು: ಕೊÀರೊನಾ ಸೋಂಕು ಪ್ರತಿರೋಧದಲ್ಲಿ ಕಾಸರಗೋಡು ಜಿಲ್ಲಾಡಳಿತ ದೇಶಕ್ಕೇ ಮಾದರಿ ರೂಪದಲ್ಲಿ ನಡೆಸಿರುವ ವಿವಿಧ ಚಟುವಟಿಕೆಗಳ ಸಂಬಂಧ ತಯಾರಿಸಿದ 'ಅತಿಜೀವನಂ-ಕಾಸರಗೋಡು ಮಾದರಿ'ಎಂಬ ಸಾಕ್ಷ್ಯ ಚಿತ್ರದ ಬಿಡುಗಡೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದಲ್ಲಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಪಿ.ಎಸ್.ಸಾಬು ಅವರು ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ. ಅವರಿಗೆ ಸಿ.ಡಿ. ಹಸ್ತಾಂತರಿಸಿ ಸಾಕ್ಷ್ಯ ಚಿತ್ರಬಿಡುಗಡೆಗೊಳಿಸಿದರು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾಡಳಿತಕ್ಕಾಗಿ ಜಿಲ್ಲಾ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೇತೃತ್ವದಲ್ಲಿ ಸಾಕ್ಷ್ಯ ಚಿತ್ರ ತಯಾರಿಸಲಾಗಿದೆ. ಅರ್ಧತಾಸು ಅವಧಿಯ ಈ ಸಾಕ್ಷ್ಯ ಚಿತ್ರದಲ್ಲಿ ಜಿಲ್ಲೆಯಲ್ಲಿ ಪ್ರಥಮ Pಕರೊನಾ ಕೇಸ್ ವರದಿಯಾದ ಫೆ.3ರಿಂದಈ ವರೆಗಿನ ಎಲ್ಲ ಚಟುವಟಿಕೆಗಳ ವಿಚಾರ ಅಡಕವಾಗಿದೆ. ಮೊದಲ, ದ್ವಿತೀಯ ಹಂತಗಳ ಪ್ರತಿರೋಧ ಚಟುವಟಿಕೆಗಳು,ರೋಗಿಗಳ ಚಿಕಿತ್ಸೆ,ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜು ತುರ್ತು ಸಜ್ಜು, ಸಮುದಾಯ ಅಡುಗೆಮನೆ ಸಹಿತ ಎಲ್ಲ ವಿಷಯಗಳನ್ನು ಅಳವಡಿಸಲಾಗಿದೆ. ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್‍ಎಂ. ಅವರು ಸಾಕ್ಷ್ಯಚಿತ್ರದ ಆಶಯ ಏಕೀಕರಣ ನಡೆಸಿದ್ದಾರೆ. ಕಾಸರಗೋಡು ವಾರ್ತಾ ಇಲಾಖೆಯ ಸಹಾಯಕ ಸಂಪಾದಕ ಪಿ.ರಶೀದ್ ಬಾಬು ಏಕೀಕರಣದ ಸಹಾಯ ಒದಗಿಸಿದ್ದಾರೆ. ಸಹಾಯಕ ಮಾಹಿತಿ ಅಧಿಕಾರಿ ಕೆ.ಶಾನಿ ನಿರೂಪಣೆ ಮಾಡಿದ್ದಾರೆ. ಉಪ ಸಂಪಾದಕಿ ಆಖಿನ್ ಮರಿಯಾ ಮತ್ತು ಕಂಟೆಂಟ್ ಎಡಿಟರ್ ದೀಕ್ಷಿತಾಕೃಷ್ಣ ಚಿತ್ರಕಥೆ ಸಿದ್ಧಪಡಿಸಿದ್ದಾರೆ. ಸುದಿನ್ ಮುಂಡಾಣಿ ಛಾಯಾಗ್ರಹಣ ನಡೆಸಿದ್ದಾರೆ. ಶರತ್ ಕುಮಾರ್ ಸಂಕಲನ ಮತ್ತು ಅಭಿರಾಂಸುದಿಲ್ ಧ್ವನಿ ಮುದ್ರಣ ನಡೆಸಿದ್ದಾರೆ.


