ನವದೆಹಲಿ: ದೇಶದಲ್ಲಿ ಉತ್ಪಾದನೆಯಾಗುವ ವೈಯಕ್ತಿಕ ಸುರಕ್ಷ ಸಾಧನಾ ಪಿಪಿಇ- ರಕ್ಷ ಕವಚಗಳ ಸಂಖ್ಯೆ 1 ಕೋಟಿಯನ್ನು ದಾಟಿದೆ ಎಂದು ಜವಳಿ ಸಚಿವಾಲಯ ಬುಧವಾರ ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶದಲ್ಲಿ 1 ಕೋಟಿ ಪಿಪಿಇ- ರಕ್ಷ ಕವಚಗಳನ್ನು ಉತ್ಪಾದಿಸಲಾಗಿದೆ. ಆತ್ಮ ನಿರ್ಭರ್ ಭಾರತ್ ಅಭಿಯಾನದ ನಿಟ್ಟಿನಲ್ಲಿ ಮಹತ್ವದ ಮೈಲುಗಲ್ಲು ಸಾಧಿಸಲಾಗಿದೆ ಎಂದು ಜವಳಿ ಸಚಿವಾಲಯ ಟ್ವೀಟ್ ಮಾಡಿದೆ.
ಎರಡು ತಿಂಗಳೊಳಗೆ ಪಿಪಿಇ ಉತ್ಪಾದನೆಯಲ್ಲಿ ಭಾರತ ವಿಶ್ವದ ಎರಡನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಕಳೆದ ವಾರವಷ್ಟೇ ಸರ್ಕಾರ ಹೇಳಿತ್ತು. ಕೋವಿಡ್-19 ಸೋಂಕಿನಿಂದ ರಕ್ಷಿಸಿಕೊಳ್ಳಲು ಆರೋಗ್ಯ ಸಿಬ್ಬಂದಿಗೆ ನೆರವಾಗುವ ಪಿಪಿಇ ಕಿಟ್ ಗಳ ತಯಾರಿಕೆಯಲ್ಲಿ ಚೀನಾ ವಿಶ್ವದಲ್ಲಿ ನಂಬರ್ 1 ಸ್ಥಾನದಲ್ಲಿದೆ.
Under the able leadership of Hon’ble Prime Minister @narendramodi Ji total number of PPE Coveralls produced in India has crossed 1 crore today. A significant landmark towards the vision of #AatmaNirbharBharat. @smritiirani #MakeInIndia #VocalForLocal
1,102 people are talking about this



