ಕಾಸರಗೋಡು: ರಸ್ತೆ ಬದಿ ನಿಲ್ಲಿಸಿದ್ದ ಟ್ಯಾಂಕರ್ ಲಾರಿಗೆ ಆ್ಯಪಲ್ ಸಾಗಿಸುತ್ತಿದ್ದ ಲಾರಿ ಢಿಕ್ಕಿ ಹೊಡೆದು ಇಬ್ಬರು ಗಾಯಗೊಂಡ ಘಟನೆ ನಡೆದಿದೆ.
ಉದುಮ ಶಾಲೆ ಪರಿಸರದಲ್ಲಿ ಶುಕ್ರವಾರ ಮುಂಜಾನೆ ಅಪಘಾತ ಸಂಭವಿಸಿದ್ದು ತೊಡುಪುಳ ನಿವಾಸಿಗಳಾದ ಅನೂಪ್ ಮತ್ತು ಶಶಿ ಗಾಯಗೊಂಡಿದ್ದಾರೆ. ಅವರನ್ನು ಕಾಸರಗೋಡಿನ ಖಾಸಗಿ ಆ್ಪತ್ರೆಗೆ ದಾಖಲಿಸಲಾಗಿದೆ.