ಮಂಜೇಶ್ವರ: ಕೋವಿಡ್ ಕಟ್ಟುನಿಟ್ಟುಗಳ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಘೋಷಿಸಲಾದ ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದಲ್ಲಿ ಮಂಜೇಶ್ವರದಲ್ಲಿ ಅಂಗಡಿಯೊದರ ಮಾಲೀಕರ ವಿರುದ್ಧ ಕೇಸು ದಾಖಲಿಸಿ, ಅಂಗಡಿ ಮುಚ್ಚುಗಡೆ ನಡೆಸಲಾಗಿದೆ.
ಕಾನೂನು ಉಲ್ಲಂಘಿಸಿದ ಆರೋಪದಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನೇರವಾಗಿ ಕ್ರಮಕ್ಕೆ ಆದೇಶ ನೀಡಿದ್ದರು. ಮಂಜೇಶ್ವರ ಹತ್ತನೇ ಮೈಲಿನ ಅಂಗಡಿಯೊಂದರ ಮಾಲೀಕನ ವಿರುದ್ಧ ಐ.ಪಿ.ಸಿ. 188, 259 ಕಾಯಿದೆಗಳ, ಕೇರಳ ಎಪಿಡೆಮಿಕ್ ಡಿಸೀಸ್ ಆರ್ಡಿನೆನ್ಸ್ ಕಾಯಿದೆಗಳ ಪ್ರಕಾರ ಕೇಸು ದಾಖಲಿಸಲಾಗಿದೆ. ಗಡಿ ಚೆಕ್ ಪೆÇೀಸ್ಟ್ ಗಳ ಚಟುವಟಿಕೆಗಳ ಅವಲೋಕನ ನಡೆಸಲು ಜಿಲ್ಲಾಧಿಕಾರಿ ತೆರಳುತ್ತಿದ್ದ ವೇಳೆ ಜಿಲ್ಲಾಧಿಕಾರಿ ಅಂಗಡಿ ಬಳಿ ಕಟ್ಟುನಿಟ್ಟುಗಳಿಗೆ ವಿರುದ್ಧವಾಗಿ ಜನಸಂದಣಿ ಕಂಡುಬಂದ ಹಿನ್ನೆಲೆಯಲ್ಲಿ ನೇರವಾಗಿ ಈ ಕ್ರಮ ಕೈಗೊಂಡಿದ್ದಾರೆ. ಅಂಗಡಿಯನ್ನು ಮುಚ್ಚುಗಡೆ ನಡೆಸಿ, ಕೀಲಿಕೈ ಪೆÇಲೀಸರಿಗೆ ಹಸ್ತಾಂತರಿಸಿ, ಮುಂದಿನ ಕ್ರಮ ನಡೆಸುವಂತೆ ಆದೇಶ ನೀಡಿದ್ದಾರೆ.



