HEALTH TIPS

ಗಿನ್ನೀಸ್ ದಾಖಲೆಗೆ ಸೇರ್ಪಡೆಗೊಳ್ಳಲಿರುವ ಕೇರಳದ ಭಾರೀ ಗಾತ್ರದ ಹಲಸು!


       ಕೊಲ್ಲಂ: ಕೇರಳದ ಕೊಲ್ಲಂನ ಎಡಮುಲಕ್ಕಲ್ ಗ್ರಾಮದಲ್ಲಿ  51.4 ಕೆ.ಜಿ. ಭಾರದ ಹಲಸಿನ ಹಣ್ಣೊಂದು ಬೆಳೆದಿದ್ದು, ಈ ಬೃಹತ್ ಗಾತ್ರದ ಹಣ್ಣನ್ನು ಗಿನ್ನಿಸ್ ದಾಖಲೆಗೆ ಕಳುಹಿಸಲು ಸಿದ್ಧತೆ ನಡೆಸಲಾಗಿದೆ. ಈ ಹಿಂದೆ 41 ಕೆ. ಜಿ. ಗಳಷ್ಟು ಭಾರವಿರುವ ಹಲಸಿನ ಹಣ್ಣು ಗಿನ್ನಿಸ್ ದಾಖಲೆಗೆ ಸೇರಿತ್ತು.
       ಈ ಹಲಸಿನ ಹಣ್ಣು 97 ಸೆಂ. ಮೀ. ಗಳಷ್ಟು ಉದ್ದವಿದೆ ಎಂದು ತಿಳಿಸಿರುವ ಹಲಸಿನ ಹಣ್ಣಿನ ಮಾಲೀಕರಾದ ಜಾನಿ ಕುಟ್ಟಿ, ಈ ಬಗ್ಗೆ ಗೂಗಲ್­ನಲ್ಲಿ ಹುಡುಕಾಟ ನಡೆಸಿದಾಗ 41 ಕೆ.ಜಿ. ಗಳ ಹಣ್ಣು ಗಿನ್ನಿಸ್ ಸೇರಿರುವ ಬಗ್ಗೆ ತಿಳಿಯಿತು. ಅದರಂತೆ ಅದಕ್ಕಿಂತಲೂ ಹೆಚ್ಚು ತೂಕದ ಈ ಹಣ್ಣನ್ನು ಗಿನ್ನಿಸ್ ದಾಖಲೆಗೆ ಸೇರಿಸಲು ಬಯಸುತ್ತಿರುವುದಾಗಿಯೂ ಅವರು ತಿಳಿಸಿದ್ದಾರೆ. ಆ ಮೂಲಕ ಮಾನವನ ಅಮೋಘ ಅಸಾಧಾರಣ ಸಾಧನೆಗಳು ಮತ್ತು ಪ್ರಕೃತಿ ವೈಚಿತ್ರ್ಯಗಳನ್ನು ದಾಖಲಿಸಿಡುವ ಗಿನ್ನಿಸ್ ವಲ್ರ್ಡ್ ರೆಕಾರ್ಡ್­ನಲ್ಲಿ ಈ ಜಾಕ್ ಫ್ರುಟ್(ಹಲಸು) ಸ್ಥಾನ ಪಡೆದುಕೊಳ್ಳುವಂತೆ ಮಾಡಲು ಜಾನಿಕುಟ್ಟಿ ಮನಸ್ಸು ಮಾಡಿದ್ದಾರೆ.
       ಕಳೆದ ಬಾರಿ 7 ಪೌಂಡ್­ನ, 7.6 ಕಿ.ಗ್ರಾಂ. ತೂಕದ, 28.27 ಇಂಚುಗಳ ದ್ರಾಕ್ಷಿ ಹಣ್ಣನ್ನು ಬೆಳೆಯುವ ಮೂಲಕ ಸ್ಲೈಡೆಲ್­ನ ಮೇರಿ ಬೆತ್ ಮತ್ತು ಡೌಗ್ ಮೆಯೆರ್ ದಂಪತಿ ಗಿನ್ನಿಸ್ ದಾಖಲೆ ಮಾಡಿದ್ದರು. ಇದಕ್ಕೆ ಲೂಸಿಯಾನಾದ ಅರಣ್ಯ ಮತ್ತು ತೋಟಗಾರಿಕಾ ಇಲಾಖೆಯ ವತಿಯಿಂದ ಪ್ರಮಾಣ ಪತ್ರವನ್ನೂ ನೀಡಲಾಗಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries