ಕಾಸರಗೋಡು: ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದ ಸಾಮಾಜಿಕ ಕಾರ್ಯಕರ್ತ, ಸಿಪಿಎಂ ನಾಯಕನ ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ. ಕೋವಿಡ್ ಭೀತಿಯ ಮಧ್ಯೆ ತಾನು ಕೋವಿಡ್ ಬಾಧಿಸಿದ ಸಂಬಂಧಿಕನನ್ನು ಕರೆ ತಂದಿರುವುದು ಮತ್ತು ಬಳಿಕ ಕಾಡಿದ ಅನಾರೋಗ್ಯವನ್ನು ಮುಚ್ಚಿಟ್ಟಿರುವ ಹಿನ್ನೆಲೆಯಲ್ಲಿ ಮಂಜೇಶ್ವರ ಪೆÇಲೀಸರು ಆತನ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಜಿಲ್ಲಾ ವೈದ್ಯಾಧಿಕಾರಿ ಪ್ರಕರಣ ದಾಖಲಿಸುವಂತೆ ಪೋಲೀಸರಿಗೆ ನೀಡಿದ ಆದೇಶದನ್ವಯ ಕ್ರಮ ಕೈಗೊಳ್ಳಲಾಗಿದೆ.
ಪ್ರಸ್ತುತ ರೋಗ ದೃಢಗೊಂಡಿರುವ ರಾಜಕೀಯ ನೇತಾರ ಮತ್ತವನ ಕುಟುಂಬವನ್ನು ಉಕ್ಕಿನಡ್ಕ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಮಹಾರಾಷ್ಟ್ರದಿಂದ ಊರಿಗೆ ಮರಳಲು ದಾಖಲಾತಿ ನಡೆಸದೆ ತಲಪಾಡಿ ತಲುಪಿದ್ದ ಸಂಬಂಧಿಕನನ್ನು ಕರೆದೊಯ್ಯಲು ಪತ್ನಿ ಮತ್ತು ಮಕ್ಕಳ ಸಹಿತ ತನ್ನ ಕಾರಲ್ಲಿ ಆಗಮಿಸಿದ ರಾಜಕೀಯ ನೇತಾರ ಬಳಿಕ ಅಧಿಕೃತರಿಂದ ವಿಷಯವನ್ನು ಮರೆಮಾಚಲು ಯತ್ನಿಸಿದ್ದನು ಎಂದು ದೂರಲಾಗಿದೆ.
ಕೋವಿಡ್ ನಿಯಮಾವಳಿಗಳ ಭಾಗವಾಗಿ ಜಿಲ್ಲಾಡಳಿತ ಹೊರಡಿಸಿರುವ ಅಧಿಸೂಚನೆಯನ್ನು ರಾಜಕೀಯ ನೇತಾರನು ಉಲ್ಲಂಘಿಸಿದ್ದಾನೆ ಎಂಬ ಆರೋಪ ಹೊರಿಸಲಾಗಿದೆ. ಜಿಲ್ಲಾಧಿಕಾರಿ ಡಾ. ಡಿ ಸಜಿತ್ ಬಾಬು ಅವರು ಹೆಚ್ಚಿನ ವಿಚಾರಣೆಗೆ ನಿರ್ದೇಶಿಸಿದ್ದರು.


