HEALTH TIPS

ಜಿಲ್ಲೆಯಲ್ಲಿ ಮತ್ತೆ ವಕ್ಕರಿಸಿದ ಕೋವಿಡ್-ಸರ್ಕಾರ, ಸಿಪಿಎಂ ನೇರ ಹೊಣೆ: ಬಿಜೆಪಿ ಆರೋಪ


             ಕಾಸರಗೋಡು: ಕೋವಿಡ್ ಮುಕ್ತ ಜಿಲ್ಲೆಯಾಗಿ ಬದಲಾವಣೆಹೊಂದಿದ ಕಾಸರಗೋಡನ್ನು ಮತ್ತೆ ಅಪಾಯಕಾರಿ ಸ್ಥಿತಿಯತ್ತ ತಲುಪಿಸಿರುವದಲ್ಲಿ ಸರ್ಕಾರ ಮತ್ತು ಸಿಪಿಎಂ ಪಕ್ಷ ಪ್ರಮುಖ ಪ್ರಮುಖ ಕಾರಣವಾಗಿರುವುದಾಘಿ ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ವಕೀಲ ಕೆ.ಶ್ರೀಕಾಂತ್ ನಿನ್ನೆ ನಡೆಸಿದ ಎರಡನೇ ಬಾರಿಯ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
           ಆಡಳಿತ ದುರುಪಯೋಗಪಡಿಸಿಕೊಂಡು, ಸಿಪಿಎಂ ನೇತಾರನೊಬ್ಬ ಅನಧಿಕೃತವಾಗಿ ಜನರನ್ನು ಜಿಲ್ಲೆಯೊಳಗೆ ರವಾನಿಸಿಕೊಂಡಿರುವುದು ಕೋವಿಡ್ ವಿರುದ್ಧದ ಹೋರಾಟಕ್ಕೆ ಸವಾಲಾಗಿ ಪರಿಣಮಿಸಿದೆ. ಪೊಲೀಸ್, ಆರೋಗ್ಯ ಸಹಿತ ವಿವಿಧ ಇಲಾಖೆಗಳ ಸಹಕಾರದಿಂದ ಜಿಲ್ಲೆಯನ್ನು ಕೋವಿಡ್ ಮುಕ್ತಗೊಳಿಸಿದ ಒಂದೆರಡು ದಿವಸಗಳಲ್ಲಿ ಮತ್ತೆ ವೈರಸ್ ವ್ಯಾಪಕಗೊಳ್ಳುವಂತಾಗಿದೆ. ತಲಪ್ಪಾಡಿಯಲ್ಲಿ ಕಟ್ಟುನಿಟ್ಟಿನ ನಿಯಂತ್ರಣವಿದ್ದರೂ, ಸಿಪಿಎಂನ ಕೆಲವು ಮುಖಂಡರು ತಮ್ಮ ಇಚ್ಛೆಯಂತೆ ಅಲ್ಲಿನ ಅಧಿಕಾರಿಗಳನ್ನು ಹಾಗೂ ಪೊಲೀಸರನ್ನು ನಡೆಸಿಕೊಳ್ಳುವ ಮೂಲಕ ಕೋವಿಡ್ ವಿರುದ್ಧದ ಹೋರಾಟವನ್ನು ಬುಡಮೇಲುಗೊಳಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಕಠಿಣ ಕ್ರಮಕ್ಕೆ ಮುಂದಾಗದಿದ್ದಲ್ಲಿ ಪರಿಸ್ಥಿತಿ ಮತ್ತಷ್ಟು ಜಟಿಲಗೊಳ್ಳಲು ಕಾರಣವಾಗಲಿರುವುದಾಗಿ ಅವರು ಆರೋಫಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries