HEALTH TIPS

ಕೇರಳದಲ್ಲಿ ಮತ್ತೊಂದು ಕೋವಿಡ್ ಮರಣ-ಮೃತರ ಸಂಖ್ಯೆ ಹತ್ತಕ್ಕೆ ಏರಿಕೆ



      ಕೋಝಿಕ್ಕೋಡ್: ರಾಜ್ಯದಲ್ಲಿ ಭಾನುವಾರ ರಾತ್ರಿ ಒಂದು ಕೋವಿಡ್ ಮರಣ ಸಂಭವಿಸಿದ್ದು ಕೊರೊನಾ ಕಾರಣ ಮೃತಪಟ್ಟವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ. ಕೊಝಿಕ್ಕೋಡ್ ಮಾವೂರ್ ಮೂಲದ ಸುಲೇಖಾ (55) ಮೃತ ದುರ್ದೈವಿ. ಅವರು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆಯಲ್ಲಿದ್ದರು. ಅವರಿಗೆ ಹೃದ್ರೋಗ ಮತ್ತು ಅಧಿಕ ರಕ್ತದೊತ್ತಡ ಕೂಡಾ ಇತ್ತೆಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಇವರ ಪತಿಗೂ ಕೋವಿಡ್ ಇರುವುದು ದೃಢಪಟ್ಟಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
      ಮೃತ ಸುಲೇಖಾ ಮೇ.  20 ರಂದು ರಿಯಾದ್‍ನಿಂದ ಮರಳಿದ್ದರು. ರಿಯಾದ್ ನಿಂದ ಆಗಮಿಸಿದ ಬಳಿಕ ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದರು. ಮೇ. 22 ರಂದು ದೈಹಿಕ ಅಸ್ವಸ್ಥತೆ ಕಂಡುಬಂದ ಹಿನ್ನೆಲೆಯಲ್ಲಿ  ಅವರನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಜೊತೆಗೆ ಪತಿಯೂ ಇದ್ದರು. ಮೇ.28 ರಂದು ಆರೋಗ್ಯ ಸ್ಥಿತಿ ಹದಗೆಟ್ಟಿದ್ದು ಅವರನ್ನು ಐಸಿಯುಗೆ ವರ್ಗಾಯಿಸಲಾಯಿತು. ಅವರು ಕಳೆದ ಎರಡು ದಿನಗಳಿಂದ ವೆಂಟಿಲೇಟರ್‍ನಲ್ಲಿದ್ದರು. ಈ ಮಧ್ಯೆ ಭಾನುವಾರ ಮೃತಪಟ್ಟರು.
     ಈ ಮಧ್ಯೆ ಸುಲೇಖಾ ಅವರ ಪತಿಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ಆದ್ದರಿಂದ ಕೋವಿಡ್ ಉಲ್ಬಣಗೊಳ್ಳದೆಂದು ನಿರೀಕ್ಷಿಸಲಾಗಿದೆ. ಕೋವಿಡ್‍ನಿಂದ ಸಾವನ್ನಪ್ಪಿದವರ ಸಂಖ್ಯೆ ರಾಜ್ಯದಲ್ಲಿ 10 ಕ್ಕೆ ಏರಿಕೆಯಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries