HEALTH TIPS

ತಲಪಾಡಿ ಗಡಿ ತೆರೆಯುವಂತೆ ಮಾಡಲು ಕೇರಳ ಜನಪ್ರತಿನಿಧಿಗಳ ಗಾಢ ಮೌನ ಸಂಶಯಾಸ್ಪದ-ಬಿಜೆಪಿ

 
      ಮಂಜೇಶ್ವರ: ಕೊರೊನ ವಿಚಾರವಾಗಿ ಲೋಕ್ಡೌನ್ ನಿಯಮದ ಭಾಗವಾಗಿ ತಲಪಾಡಿ ಗಡಿ ಹಾಗೂ ಕೇರಳ ಕರ್ನಾಟಕದ ಗಡಿ ನಿಬರ್ಂಧವನ್ನು ಪ್ರಶ್ನಿಸಿ ಸಂಸದ ಉನ್ನಿತನ್ ತೋರಿದ ಆತುರದ ನಿರ್ಧಾರಗಳು ನಂತರ ಸುಪ್ರೀಂಕೋರ್ಟ್ ಕದ ತಟ್ಟಿದ ಆತುರದ ನಿರ್ಧಾರಗಳು ಕೇರಳ ಕರ್ನಾಟಕದ ಮದ್ಯೆ ಗಡಿ ತೆರೆವಲ್ಲಿ ತಡೆಯಾಗಿವೆ,
      ಕರ್ನಾಟಕ ಸರ್ಕಾಕರದೊಂದಿಗೆ ಅಧಿಕೃತ ಮಾತುಕತೆಗೆ ತಯಾರಗದ ಪಿನರಾಯಿ ಸರಕಾರ, ಜಿಲ್ಲಾಡಳಿತ, ಹಫು ಸ್ಥಳೀಯ ಶಾಸಕರ ಸಂಸದರ ಗಾಢ ಮೌನ ಸಂಸದಸ್ಪದ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಆರೋಪಿಸಿದೆ.
      ಕಾಸರಗೋಡು ಜಿಲ್ಲೆಯ ಶೇ.80 ಕ್ಕೂ ಅಧಿಕ ಗಡಿನಾಡ ಕನ್ನಡಿಗರು ವಿದ್ಯಾಭ್ಯಾಸ, ಉದ್ಯೋಗ,ಆಸ್ಪತ್ರೆ, ಆರೋಗ್ಯ, ವ್ಯಾಪರಕ್ಕೂ ಸ್ಥಳೀಯ ದಕ್ಷಿಣ ಕನ್ನಡ ಜಿಲ್ಲೆಯನ್ನು ಅವಲಂಬಿಸಿ ಇರುವಾಗ ಕರ್ನಾಟಕದ ದೊಂದಿಗೆ ಯುದ್ಧಕ್ಕೆ ನಿಂತಂತೆ ವರ್ತಿಸಿದ ಸಂಸದರು, ಶಾಸಕರು ಸಮಸ್ಯೆ ಪರಿಹಾರಕ್ಕೆ ವೇದಿಕೆ ಸಿದ್ಧಪಡಿಸದೆ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇದರಿಂದಾಗಿ ಶೇ.80 ಉದ್ಯೋಗಿಗಳು ಉದ್ಯೋಗ  ಕಳೆದುಕೊಳ್ಳುವ ಭೀತಿ ಯಲ್ಲಿದರೆ ಈಗಾಗಲೇ ಕೆಲವರಿಗೆ ಈ ವಿಚಾರವಾಗಿ ನೋಟಿಸ್ ಜಾರಿಯಾಗಿದೆ. ಬಿಜೆಪಿ ಕಾಸರಗೋಡು ಜಿಲ್ಲೆಯ ಎಲ್ಲ ಬಿಜೆಪಿ ನೇತಾರರು ಗಡಿ ತೆರವಿಗೆ ಶತ ಪ್ರಯತ್ನ ದಲ್ಲಿರುವಾಗ ಶಾಸಕರ ಸಂಸದರ ಮೌನ ಯಾಕೆ ಎಂದು ಬಿಜೆಪಿ ಪ್ರಶ್ನಿಸಿದೆ. ಸರ್ಕಾರದ ಕಾರ್ಯದರ್ಶಿ ಗಳ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ನೇತೃತ್ವದ ನೀಡಿ ಈ ವಿಚಾರದಲ್ಲಿ ಶೀಘ್ರವಾಗಿ ತೀರ್ಮಾನ ಮಾಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.
     ಮಂಜೇಶ್ವರ ತಾಲೂಕಿನ ಜನತೆ ಸ್ಥಳೀಯ ಶಾಸಕರನ್ನು ಸಂಸದರನ್ನು ಪ್ರಶ್ನಿಸಬೇಕಿದೆ ಇದಕ್ಕಾಗಿ ಆಂದೋಲನ ಆಗಬೇಕು ಇಲ್ಲವಾದಲ್ಲಿ ಇಲ್ಲಿನ ಜನಪ್ರತಿನಿಧಿಗಳು ಮೌನ ಮುರಿಯಲಾರರು ಎಂದು ಬಿಜೆಪಿ ದೂರಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries