ಕಾಸರಗೋಡು: ಸುಭಿಕ್ಷ ಕೇರಳಂ ಯೋಜನೆಯ ಅಂಗವಾಗಿ ಸಹಕಾರಿ ಬ್ಯಾಂಕ್ ಗಳ ಸಹಕಾದೊಂದಿಗೆ ಕೃಷಿಯ ವಿಸ್ತರಣೆ ಮತ್ತು ಉತ್ಪಾ ದನೆ ಹೆಚ್ಚಿಸುವ ಯೋಜನೆಗಳನ್ನು ರಚಿಸಲಾಗುವುದು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ನಡೆದ ಸುಭಿಕ್ಷ ಕೇರಳಂ ಜಿಲ್ಲಾ ಕೋರ್ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕೋರ್ ಸಮಿತಿ ಸದಸ್ಯರ, ಸಹಕಾರಿ ಇಲಾಖೆ ಜತೆ ರೆಜಿಸ್ತ್ರಾರ್, ಸಹಾಯಕ ರೆಜಿಸ್ತ್ರಾರ್, ಪ್ರತಿನಿಧಿಗಳ ಸಭೆ ಇದಾಗಿತ್ತು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು.
ಗ್ರಾಮಪಂಚಾಯತ್/ ನಗರಸಭೆ ವ್ಯಾಪ್ತಿಗಳಲ್ಲಿ ಒಂದಕ್ಕಿಂತ ಅಧಿಕ ಸಂಘಗಳಿದ್ದರೆ ಅವರ ಕನ್ ಸೋರ್ ಷ್ಯಂ ರಚಿಸಲಾಗುವುದು. ಕೃಷಿ ನಡೆಸಲು ಆಗ್ರಹಿಸುವ ಸಂಘಗಳು ಸಂಪರ್ಕಿಸುವ ವೇಳೆ ಅವರಿಗೆ ಅಗತ್ಯವಿರುವ ಸಹಾಯ, ಸಾಲ ಇತ್ಯಾದಿ ಮಂಜೂರು ಮಾಡಲಾಗುವುದು. ಜೊತೆಗೆ ಪ್ರಾಥಮಿಕ ಕೃಷಿ ಸಾಲ ಸಂಘದ ಸದಸ್ಯರ ಠೇವಣಿ ವ್ಯಾಪ್ತಿ ಮತ್ತು ಸಾಲ ವ್ಯಾಪ್ತಿ ಹೆಚ್ಚಳಗೊಳಿಸಲಾಗುವುದು. ಯುವಜನ ಸ್ವಯಂ ಸೇವಾ ಸಂಘನೆಗಳ ಸಹಕಾರದೊಂದಿಗೆ ಸುಭಿಕ್ಷ ಕೇರಳಂ ಅಪ್ಲಿಕೇಷನ್ ಮೂಲಕ ಕೃಷಿಗೆ ಸೂಕ್ತವಾಗಿರುವ ಬಂಜರು ಜಾಗಗಳನ್ನು ಪತ್ತೆ ಮಾಡಿ ಅವನ್ನು ಕೃಷಿಗೆ ಅನುಯೋಜ್ಯ ಗೊಳಿಸುವ ಕ್ರಮ ಕೈಗೊಳ್ಳಲಾಗುವುದು. ಸುಭಿಕ್ಷ ಕೇರಳಂ ಜಿಲ್ಲಾ ಸಂಚಾಲನಾ ಕಚೇರಿಯನ್ನು ಜಿಲ್ಲಾ ಹರಿತ ಕೇರಳಂ ಮಿಷನ್ ಕಚೇರಿಯಲ್ಲಿ ಆರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

