HEALTH TIPS

ಕಾಲಿಕಡವು ಮಿನಿ ಸ್ಟೇಡಿಯಂ ನಿರ್ಮಾಣವನ್ನು ಒಂದು ವರ್ಷದ ಅವಧಿಯಲ್ಲಿ ಪೂರ್ಣ: ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್

 
    ಕಾಸರಗೋಡು:  ಪಿಲಿಕೋಡ್ ಗ್ರಾಮಪಂಚಾಯತ್ ನ ಕಾಲಿಕಡವು ಮಿನಿ ಸ್ಟೇಡಿಯಂ ನಿರ್ಮಾಣವನ್ನು ಒಂದು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್ ತಿಳಿಸಿದರು.
       ಈ ನಿರ್ಮಾಣಕ್ಕೆ ಪ್ಯಾಕೇಜ್ ಜಿಲ್ಲಾ ಮಟ್ಟದ ಸಮಿತಿ ಆಡಳಿತೆ ಮಂಜೂರಾತಿ ನೀಡಿದೆ. 2.35 ಕೋಟಿ ರೂ. ಯೋಜನೆಗಾಗಿ ಮೀಸಲಿರಿಸಲಾಗಿದೆ. ಪಿಲಿಕೋಡ್ ಗ್ರಾಮಪಂಚಾಯತ್ 35 ಲಕ್ಷ ರೂ., ಉಳಿದ 2 ಕೋಟಿ ರೂ. ಪ್ಯಾಕೇಜ್ ನೀಡಲಿದೆ.
     ಕಾಸರಗೋಡು ಅಭಿವೃಧ್ಧಿ ಪ್ಯಾಕೇಜ್ ಅಂಗವಾಗಿ ಮೊದಲ ಹಂತದ ಚಟುವಟಿಕೆಗಳಿಗೆ 2.35 ಕೋಟಿ ರೂ.ನ ಚಟುವಟಿಕೆಗಳು ಒಳಗೊಂಡಿವೆ. 8 ಮೀಟರ್ ಎತ್ತರದಲ್ಲಿ ಟ್ರಸ್ ಡ್ ರೂಫ್ ಮೇಲ್ಛಾವಣಿಯೊಂದಿಗಿನ ಸ್ಟೇಜ್, 20 ಸೆ.ಮೀ. ಮೀರದ ಮಣ್ಣು ತುಂಬಿ ಎತ್ತರಿಸಿದ ಮೈದಾನ, 2 ಅಂತಸ್ತಿನಲ್ಲಿ ಮಹಿಳೆ, ಪುರುಷ ಕ್ರೀಡಾಳುಗಳ ವಿಶ್ರಾಂತಿ ಕೊಠಡಿಗಳು, ವಸತಿ ಸೌಲಭ್ಯಗಳು, ಶೌಚಾಲಯಗಳು, ಕಚೇರಿ ಕಂ ತತ್ಸಂಬಂಧಿ ಸೌಲಭ್ಯಗಳು ಯೋಜನೆಯಲ್ಲಿ ಒಳಗೊಂಡಿವೆ. 2 ಅಂತಸ್ತಿನ ಕಟ್ಟಡದ ಎರಡೂ ಬದಿಗಳಲ್ಲಿ 6 ಸಾಲುಗಳಲ್ಲಿ ಕಾಂಗ್ರೀಟು ಗ್ಯಾಲರಿ ಸೌಲಭ್ಯ ಸಿದ್ಧಪಡಿಸಲಾಗುವುದು. ಜೊತೆಗೆ ಬೋರ್ ವೆಲ್ ಸಹಿತ ನೀರಾವರಿ ಯೋಜನೆಗಳು, ಕಟ್ಟಡದ ವಿದ್ಯದೀಕರಣ ಇತ್ಯಾಇಗಳಿಗೆ ಯೋಜನೆಯಲ್ಲಿ ಮೊಬಲಗು ಮೀಸಲಿರಿಸಲಾಗಿದೆ ಎಂದು ಜಿಲ್ಲಾಧಿಕಾರಿ  ಡಾ.ಡಿ.ಸಜಿತ್ ಬಾಬು ತಿಳಿಸಿದರು. ಸ್ಟೇಡಿಯಂ ನಿರ್ಮಾಣಕ್ಕಾಗಿ ತ್ರಿಕರಿಪುರ ಶಾಸಕ ಎಂ.ರಾಜಗೋಪಾಲನ್ ಮತ್ತು ಪಿಲಿಕೋಡ್ ಗ್ರಾಮಪಂಚಾಯತ್ ಅಧ್ಯಕ್ಷ ಟಿ.ಪಿ.ಶ್ರೀಧರನ್ ಮನವಿ ಸಲ್ಲಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries