HEALTH TIPS

ಆಯುರ್ ರಕ್ಷಾ ಟಾಸ್ಕ್ ಫೆÇೀರ್ಸ್ ಚಟುವಟಿಕೆ ಆರಂಭ

       
          ಕಾಸರಗೋಡು: ಭಾರತೀಯ ಚಿಕಿತ್ಸಾ ಇಲಾಖೆ, ಕೋವಿಡ್ 19 ರೆಸ್ಪಾನ್ಸ್ ಸೆಲ್ ಜಂಟಿ ವತಿಯಿಂದ ಕಾಸರಗೋಡು ಜಿಲ್ಲೆಯಲ್ಲಿ ಆಯುರ್ ರಕ್ಷಾ ಟಾಸ್ಕ್ ಫೆÇೀರ್ಸ್ ಗಳು ಚಟುವಟಿಕೆ ಆರಂಭಿಸಿವೆ.
          ಸಾರ್ವಜನಿಕರಿಗೆ ಆಯುರ್ ರಕ್ಷಾ ಸಮಿತಿ ಮೂಲಕ ಆಯುರ್ ರಕ್ಷಾ ಕ್ಲಿನಿಕ್ ಗಳ ಜನಪರ ಪ್ರಯೋಜನ ಒದಗಿಸುವುದು ಇಲ್ಲಿನ ಉದ್ದೇಶ. ಪ್ರತಿ ಸ್ಥಳೀಯಾಡಳಿತ ಸಂಸ್ಥೆಗಳ ಮುಖ್ಯಸ್ಥ ಅಧ್ಯಕ್ಷರಾಗಿರುವ, ಆಯುರ್ವೇದ ಸಂಸ್ಥೆಗಳ ವೈದ್ಯಾಧಿಕಾರಿ ಸಂಚಾಲಕರಾಗಿರುವ ಸಮಿತಿಗಳಲ್ಲಿ ಸ್ಥಳೀಯ ಖಾಸಗಿ ಆಯುರ್ವೇದ ವೈದ್ಯರು, ಆಯುರ್ವೇದ ವಿದ್ಯಾರ್ಥಿ, ಗ್ರಾಮಪಂಚಾಯತ್ ಗಳ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ, ವಾರ್ಡ್ ಸದಸ್ಯರು, ಅಂಗನವಾಡಿ ಪ್ರತಿನಿಧಿ, ಆಶಾ ಕಾರ್ಯಕರ್ತೆ, ಐ.ಸಿ.ಡಿ.ಸಿ. ಪ್ರತಿನಿಧಿ, ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು ಮೊದಲಾದವರು ಸದಸ್ಯರಾಗಿದ್ದಾರೆ.
        60 ವರ್ಷಕ್ಕಿಂತ ಅಧಿಕ ವಯೋಮಾನದವರಿಗೆ ವಿಶೇಷ ಕಾಳಜಿ ಒದಗಿಸುವ ಸುಖಾಯುಷ್ಯಂ, ಕೋವಿಡ್ ರೋಗದಿಂದ ಗುಣಮುಖರಾದವರಿಗೆ ಆರೋಗ್ಯ ಸಂರಕ್ಷ ಪ್ಯಾಕೇಜ್ ಆಗಿರುವ ಪುನರ್ಜನಿ ಯೋಜನೆ ಅಲ್ಲದೆ ಕ್ವಾರೆಂಟೈನ್ ನಲ್ಲಿರುವ ಮಂದಿಗೆ ರೋಗ ಪ್ರತಿರೋಧಕ್ಕಾಗಿ, ಆರೋಗ್ಯ ಸಂರಕ್ಷಣೆಯ ಔಷಧ ವಿತರಣೆ, ಜೀವನಶೈಲಿಯಲ್ಲಿ ನಡೆಸಬೇಕಾದ ಬದಲಾವಣೆ, ಆರೋಗ್ಯ ಪೂರ್ಣ ಆಹಾರ ಕ್ರಮ ಸಂಬಂಧ ಸಲಹೆಗಳು ಇತ್ಯಾದಿ ಜಿಲ್ಲೆಯ ಆಯುರ್ವೇದ ಸಂಸ್ಥೆಗಳಲ್ಲಿ ಲಭಿಸಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries