ಕಾಸರಗೋಡು: ಲಾಕ್ ಡೌನ್ ಆದೇಶ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಉದ್ಯೋಗ ವಿನಿಮಯ ಕೇಂದ್ರದ ಸೇವೆಗಳು ಆನ್ ಲೈನ್ ಮೂಲಕ ಲಭಿಸಲಿವೆ ಎಂದು ಜಿಲ್ಲಾ ಉದ್ಯೋಗ ಅಧಿಕಾರಿ ತಿಳಿಸಿರುವರು.
ನೋಂದಣಿ, ನವೀಕರಣ, ಅರ್ಹತಾಪತ್ರ ಸೇರ್ಪಡೆ ಸಹಿತ ಎಲ್ಲ ಸೇವೆಗಳೂ ಆನ್ ಲೈನ್ ಮೂಲಕ ನಡೆಯಲಿವೆ. ವಿಳಾಸ: www.eemployment.kerala.gov.in
2020 ಜನವರಿ ತಿಂಗಳಿಂದ ಮೇ ತಿಂಗಳ ವರೆಗಿನ ನೋಂದಣಿ ನವೀಕರಣ ನಡೆಸುವವರಿಗೆ 2020 ಆಗಸ್ಟ್ವರೆಗಿನ ನವೀಕರಣದ ಅವಕಾಶವೂ ಲಭಿಸಲಿದೆ. ಸಂಬಂಧಪಟ್ಟ ಉದ್ಯೋಗ ವಿನಿಮಯ ಕೇಂದ್ರಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿಯೂ ನವೀಕರಣ ನಡೆಸಬಹುದಾಗಿದೆ. ಅರ್ಹತಾ ಪತ್ರ ಸೇರ್ಪಡೆ, ಅನುಭವ ಪತ್ರ ಸೇರ್ಪಡೆ ಇತ್ಯಾದಿ ನಡೆಸಲು ಬಯಸುವವರು ಅಸಲಿ ಅರ್ಹತಾಪತ್ರಗಳನ್ನು ಆಯಾ ಉದ್ಯೋಗ ವಿನಿಮಯ ಕೇಂದ್ರಗಳಲ್ಲಿ ಆ.27ರ ಮುಂಚಿತವಾಗಿ ಸಲ್ಲಿಸಬೇಕು. 2019 ಡಿ.20 ರ ನಂತರ ನೌಕರಿಯಿಂದ ಕಾನೂನು ಪ್ರಕಾರ ಬಿಡುಗಡೆಗೊಂಡು ಡಿಸ್ ಚಾರ್ಜ್ ಸರ್ಟಿಫಿಕೆಟ್ ಹಾಜರುಪಡಿಸುವ ಉದ್ಯೋಗಾರ್ಥಿಗಳಿಗೆ ಆ.27 ವರೆಗಿನ ಸೀನಿಯಾರಿಟಿ ಉಳಿಸಿಕೊಂಡು ಬಿಡುಗಡೆ ಪತ್ರ ಸೇರಿಸಿ ಸಲ್ಲಿಸಬಹುದಾಗಿದೆ. ಮಾಹಿತಿಗಾಗಿ ದೂರವಾಣಿ ಸಂಖ್ಯೆ: 04994255582.
E-EMPLOYMENT EXCHANGE