.
ಕಾಸರಗೋಡು: ಮಳೆಗಾಲದಲ್ಲಿ ವಿದ್ಯುತ್ ಅಪಾಯಗಳು ಸಂಭವಿಸುವ ಭೀತಿಯಿದ್ದು, ಸಾರ್ವಜನಿಕರು ಜಾಗರೂಕತೆ ಪಾಲಿಸುವಂತೆ ಕೆ.ಎಸ್.ಇ.ಬಿ. ಸಲಹೆ ಮಾಡಿದೆ.
ಕಡಿದು ಬಿದ್ದ ತಂತಿಗಳಿಂದ ಶಾಕ್ ತಗುಲುವ ಭೀತಿಗಳಿದ್ದು, ಈ ಬಗ್ಗೆ ಅತೀವ ಜಾಗರೂಕತೆ ವಹಿಸುವಂತೆ ತಿಳಿಸಲಾಗಿದೆ. ವಿದ್ಯುತ್ ಲೈನ್/ಸರ್ವೀಸ್ ವಯರ್ ಕಡಿದು ಬಿದ್ದಿದ್ದರೆ ಯಾವ ಕಾರಣಕ್ಕೂ ಸ್ಪರ್ಶಿಸಬಾರದು. ಈ ವಿಚಾರ ಗಮನಕ್ಕೆ ಬಂದ ತಕ್ಷಣ ಕೆ.ಎಸ್.ಇ.ಬಿ. ಕಚೇರಿಗೆ ಮಾಹಿತಿನೀಡಬೇಕು. ಜನರೇಟರ್, ಇನ್ ವೆರ್ಟರ್ ಇತ್ಯಾದಿ ಸ್ಥಾಪಿಸುವ ವೇಳೆಯೂ ವಿದ್ಯುತ್ ಸಂಬಂಧ ದುರಸ್ತಿ ಕಾರ್ಯ, ಕಟ್ಟಡ ನಿರ್ಮಾಣ ವೇಳೆ ವಿದ್ಯುತ್ ಸಂಪರ್ಕ ಸಂಬಂಧ ಚಟುವಟಿಕೆಗಳನ್ನು ಅಂಗೀಕಾರವಿರುವ ಇಲೆಕ್ಟ್ರೀಶಿಯನ್ ರ ಮೂಲಕವೇ ನಡೆಸಬೇಕು. ಗುಡುಗು-ಸಿಡಿಲು ಸಂಭವಿಸುವ ವೇಳೆ ವಿದ್ಯುತ್ ಸಂಬಂಧ ದುರಸ್ಥಿ ಕಾರ್ಯ ನಡೆಸಕೂಡದು. ಗಾಳಿಮಳೆ-ಸಿಡಿಲು ತಲೆದೋರಿದ ವೇಳೆ ವಿದ್ಯುತ್ ದುರಸ್ತಿಗೆ ಬಳಸುವ ಉಪಕರಣಗಳನ್ನು ಬಳಸಕೂಡದು. ಪ್ಲಗ್ ನಲ್ಲಿ ಅಳವಿಡಿಸಿದ ಎಲ್ಲ ಉಪಕರಣಗಳನ್ನು ತಕ್ಷಣ ತೆರವುಗೊಳಿಸಬೇಕು. ವಿದ್ಯುತ್ ಕಂಭಗಳಲ್ಲಿ, ಸ್ಟೇ ಗಳಲ್ಲಿ ಜಾನುವಾರುಗಳನ್ನು ಕಟ್ಟಕೂಡದು. ವಿದ್ಯುತ್ ತಂತಿಗಳ ಬಳಿ ಲೋಹದ ಏಣಿ, ದೋಟಿ ಇತ್ಯಾದಿ ಇರಿಸಕೂಡದು. ಮಳೆಗಾಲದಲ್ಲಿ ತಂತಿ ಮೇಲೆ ಬೀಳುವ ಸ್ಥಿತಿಯಲ್ಲಿ ಮರ ಯಾ ಗೆಲ್ಲುಗಳಿದ್ದರೆ ತಕ್ಷಣ ಕೆ.ಎಸ್.ಇ.ಬಿ. ಕಚೇರಿ 1912 ಅಥವಾ 9496010101(ಸುರಕ್ಷಾ ಎಮರ್ಜೆನ್ಸಿ) ಎಂಬ ದೂರವಾಣಿ ಸಂಖ್ಯೆಗೆ ಕರೆಮಾಡಿ ತಿಳಿಸಬೇಕು. ಈ ರೀತಿ ಮರ ಯಾ ಗೆಲ್ಲು ಕಡಿಯುವ ಪ್ರಕ್ರಿಯೆ ನಡೆಸುವ ವಿದ್ಯುತ್ ಮಂಡಳಿ ಸಿಬ್ಬಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.