ನವದೆಹಲಿ: ಮೇ 31ಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ದೇಶಾದಾದ್ಯಂತ ಜಾರಿಗೊಳಿಸಿದ ಲಾಕ್‍ಡೌನ್ ಐದನೇ ಅವಧಿಗೂ ವಿಸ್ತರಿಸುವುದೆಂಬ ವರದಿಗಳನ್ನು ನಿರಾಕರಿಸಿರುವ ಗೃಹ ವ್ಯವಹಾರಗಳ ಸಚಿವಾಲಯ ನಿರಾಕರಿಸಿದ್ದು ಇದು ಸಂಪೂರ್ಣ ಸುಳ್ಳು ಎಂದು ಹೇಳಿದೆ.
ಸುದ್ದಿ ವರದಿಗಳನ್ನು ಉಲ್ಲೇಖಿಸಿ ಕೇಂದ್ರ ಗೃಹ ಸಚಿವಾಲಯದ ವಕ್ತಾರರು ತಮ್ಮ ಟ್ವೀಟ್ ಸಂದೇಶದಲ್ಲಿ.ಲಾಕ್ ಡೌನ್ ಕುರಿತ ವರಿಗಳೆಲ್ಲವೂ ಸುಳ್ಳು. ಇವೆಲ್ಲಾ ವರದಿ ಮಾಡುವವರ ಊಹಾಪೆÇೀಹಗಳಾಗಿವೆ ಎಂದು ಸಚಿವಾಲಯ ಹೇಳಿದೆ.
ಹಸಿರು ಮತ್ತು ಕಿತ್ತಳೆ ವಲಯಗಳಲ್ಲಿ ಯಾವುದೇ ನಿಬರ್ಂಧಗಳಿರುವುದಿಲ್ಲ ಎಂದು ಸರ್ಕಾರ ಜೂನ್ 1 ರಿಂದ ಘೋಷಿಸಿ ಲಾಕ್ ಡೌನ್ ಸಡಿಲಿಸಿದೆ ಎಂಬ ಊಹಾಪೆÇೀಹದ ನಡುವೆ ಸಚಿವಾಲಯ ಈ ಸ್ಪಷ್ಟನೆ ನೀಡಿದೆ.
ಮುಂದಿನ ಆದೇಶ ಬರುವವರೆಗೂ ಶಾಪಿಂಗ್ ಮಾಲ್‍ಗಳು, ಶಾಲಾ-ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿರುತ್ತವೆ ಎಂದು ಅವರು ಹೇಳಿದ್ದಾರೆ.
#FactCheck
The quoted story claims to have inside details about #Lockdown5, from MHA Sources.
All claims made therein are mere speculations by the reporter. To attribute them to MHA is incorrect and being irresponsible.#FakeNewsAlertindiatoday.in/india/story/pm… via @indiatoday
1,364 people are talking about this



