HEALTH TIPS

ಶಬರಿಮಲೆ ನಡೆ ಜೂ.14 ರಂದು ತೆರೆಯುತ್ತದೆ-ಪ್ರವೇಶವು ವರ್ಚುವಲ್ ಕ್ಯೂ ಮೂಲಕ ಮಾತ್ರ

 
*  ಇತರ ರಾಜ್ಯದಲ್ಲಿರುವವರು ಕೋವಿಡ್ ಜಾಗ್ರತಾ ಪೆÇೀರ್ಟಲ್‍ನಲ್ಲಿ ನೋಂದಾಯಿಸಿಕೊಳ್ಳಬೇಕು
* ಗುರುವಾಯೂರಿನಲ್ಲಿಯೂ ಆನ್‍ಲೈನ್ ನೋಂದಣಿ ಸೌಲಭ್ಯ
      ಪತ್ತನಂತಿಟ್ಟು:  ಶಬರಿಮಲೆಯಲ್ಲಿ ಮಿಥುನ ಮಾಸದ ಮಾಸಿಕ ಪೂಜೆಗಳಿಗಾಗಿ ಜೂನ್ 14 ರಂದು ತೆರೆಯಲಾಗುವುದು ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರು ತಿಳಿಸಿರುವರು.
    ಜೂನ್ 14 ರಿಂದ 28 ರ ವರೆಗೆ  ಮಾಸ ಪೂಜೆ ಮತ್ತು ಉತ್ಸವ ನಡೆಯಲಿದೆ. 28 ರಂದು ಆರಾಟ್ ಉತ್ಸವ ನಡೆಯಲಿದೆ.
        ಪ್ರಸ್ತುತ ಶಬರಿಮಲೆಯಲ್ಲಿನ ವರ್ಚುವಲ್ ಕ್ಯೂ ಸಿಸ್ಟಮ್ ಮೂಲಕ ಮಾತ್ರ ಪ್ರವೇಶವನ್ನು ಅನುಮತಿಸಲಾಗಿದೆ. ಒಂದು ಗಂಟೆಗೆ 200 ಜನರ ವರ್ಚುವಲ್ ಕ್ಯೂ ಅನ್ನು ಅನುಮತಿಸಲಾಗಿದೆ. ಬೆಳಗ್ಗೆ 4 ರಿಂದ ಮಧ್ಯಾಹ್ನ 1 ರ ವರೆಗೆ ಮತ್ತು ಸಂಜೆ 4 ರಿಂದ ರಾತ್ರಿ 11 ರ ವರೆಗೆ ದರ್ಶನಕ್ಕೆ ಅವಕಾಶವಿದೆ. ಪ್ರದರ್ಶನದ ಅವ„ ಒಟ್ಟು 16 ಗಂಟೆಗಳು.
ಒಂದು ಸಮಯದಲ್ಲಿ ದೇವಾಲಯದ ಅಂಗಳಕ್ಕೆ ಕೇವಲ 50 ಜನರಿಗೆ ಮಾತ್ರ ಅವಕಾಶವಿದೆ. ಮುಂದಿನ 50 ಜನರನ್ನು ಸರದಿಯಲ್ಲಿ ಸೇರಿಸಲಾಗುವುದು. ಸರದಿಯಲ್ಲಿ, ಸಾಮಾಜಿಕ ಅಂತರ ಪಾಲಿಸಲು ನಿಖರವಾದ ಕ್ರಮಗಳನ್ನು ವೃತ್ತ  ಎಳೆದು ರಚಿಸಲಾಗುವುದು. 10 ವರ್ಷದೊಳಗಿನವರಿಗೆ ಮತ್ತು 65 ವರ್ಷಕ್ಕಿಂತ ಮೇಲ್ಪಟ್ಟವರಿಗೆ ನೋಂದಣಿಯನ್ನು ಅನುಮತಿಸಲಾಗುವುದಿಲ್ಲ.
         ಪಂಪಾ ಮತ್ತು ಸನ್ನಿಧಾನದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಗುವುದು. ಭಕ್ತರು ನಿರ್ಬಂಧವಾಗಿ ಮಾಸ್ಕನ್ನು  ಧರಿಸಬೇಕು. ಕೈ ಸೋಪಿನಿಂದ ತೊಳೆಯಲು ಸಾನಿಟೈಸೇಶನ್  ಅನುಕೂಲವಿರುತ್ತದೆ. ವಿ.ಐ.ಪಿ. ದರ್ಶನ ಇರುವುದಿಲ್ಲ. ಬರುವ ಭಕ್ತರಿಗೆ ವಸತಿ ಸೌಕರ್ಯ ಇಲ್ಲ.
       ಕೊಡಿ ಏರುವುದು (ಧ್ವಜಾರೋಹಣ) ಮತ್ತು ಆರಾಟ್ ಉತ್ಸವ ಈ ವರ್ಷ ಆಚರಣೆಗಳಾಗಿ ಮಾತ್ರ ಇರುತ್ತವೆ. ತುಪ್ಪಾಭಿಷೇಕಕ್ಕೆ ಸೌಕರ್ಯವಿರುತ್ತದೆ. ಆದರೆ ಅವರು ತರುವ ತುಪ್ಪದ ಅಭಿಷೇಕ ಮತ್ತು ಅದರ ಅವಶೇಷಗಳು ಬೇಕೆಂದು ಅವರು ಒತ್ತಾಯಿಸಬಾರದು. ಆದರೆ ಅಭಿಷೇಕ ನಡೆಸಿದ ತುಪ್ಪ ನೀಡಲು ಸೌಕರ್ಯ ಒದಗಿಸಲಾಗುವುದು. ಹಾಳೆ ಪಾತ್ರದಲ್ಲಿ ಬಿಸಿ ಗಂಜಿ ಮಾಡಿ ಭಕ್ತರಿಗೆ ನೀಡಲಾಗುವುದು.
    ಕೆ.ಎಸ್.ಆರ್.ಟಿ.ಸಿ. ಬಸ್‍ಗಳಿಂದ ಅಥವಾ ಖಾಸಗಿ ವಾಹನಗಳ ಮೂಲಕವೂ ಬರಬಹುದು. ಈ ಪ್ರತ್ಯೇಕ ಸಂದರ್ಭದಲ್ಲಿ, ಪಂಪಾ ವರೆಗೆ ವಾಹನಗಳು ಬರಲು ಅನುಮತಿಸಲಾಗಿದೆ. ವಾಹನದ  ಪಾರ್ಕಿಂಗ್ ಸೌಲಭ್ಯವೂ ಇರುತ್ತದೆ. ಮಳೆ ಸೇರಿದಂತೆ ಪರಿಸ್ಥಿತಿಗಳನ್ನು ನೋಡಿ  ನಿರ್ಣಯಿಸುತ್ತೇವೆ ಮತ್ತು ಅಗತ್ಯವಿದ್ದರೆ ಅದನ್ನು ಬದಲಾಯಿಸುತ್ತೇವೆ ಎಂದಿದ್ದಾರೆ.
        ಐದು ವರೆಗಿನ ತಂಡಗಳನ್ನು ಅನುಮತಿಸಲಾಗುವುದು. ಇತರ ರಾಜ್ಯಗಳಿಂದ ಬರುವ ಭಕ್ತರು ಶಬರಿಮಲೆ ದರ್ಶನಕ್ಕಾಗಿ ಕೇರಳಕ್ಕೆ ಬರಲು 'ಕೋವಿಡ್ 19 ಜಾಗ್ರತಾ' ಪೆÇೀರ್ಟಲ್ ಮೂಲಕ ಪಾಸ್‍ಗಾಗಿ ನೋಂದಾಯಿಸಿಕೊಳ್ಳಬೇಕು. ಹೆಸರು ಮತ್ತು ಮಾಹಿತಿಯೊಂದಿಗೆ ಶಬರಿಮಲೆ ಆಗಮನಕ್ಕೆ ಕನಿಷ್ಠ ಎರಡು ದಿನಗಳ ಮೊದಲು  ಐ.ಸಿ.ಎಂ.ಆರ್. ಅನುಮೋದಿತ ಲ್ಯಾಬ್‍ನ ಕೋವಿಡ್ ನೆಗೆಟಿವ್ ಪ್ರಮಾಣಪತ್ರವನ್ನು ಅಪ್‍ಲೋಡ್ ಮಾಡುವುದು ಕಡ್ಡಾಯವಾಗಿದೆ. ಇತರ ರಾಜ್ಯಗಳಿಂದ ಬರುವ ಪ್ರಮಾಣ ಪತ್ರಗಳನ್ನು ಹೊಂದಿರುವವರಿಗೆ ಮಾತ್ರ ಪಾಸ್ ಪರವಾನಗಿ ನೀಡಲಾಗುವುದು ಎಂದು ಸಚಿವರು ಹೇಳಿದರು.
       ಪ್ರಯಾಣಕ್ಕೆ ಅಗತ್ಯವಾದ ಸಾಮಾನುಗಳು ಮಾತ್ರ ತರಬೇಕು. ಬರುವವರಿಗೆ ಅಗತ್ಯವಾದ ಬಿಸಿನೀರು ಮತ್ತು ವೈದ್ಯಕೀಯ ಸೌಲಭ್ಯ ಇರುತ್ತದೆ.
       ಆನ್‍ಲೈನ್‍ನಲ್ಲಿ ಮೊದಲೇ ಬುಕ್ ಮಾಡುವವರಿಗೆ ಅಪ್ಪಂ ಮತ್ತು ಅರವನವನ್ನು ವಿತರಿಸಲಾಗುವುದು. ಮೊದಲೇ ಹಣ ನೀಡಿ ಬುಕ್ ಮಾಡಿದವರಿಗೆ ಇವುಗಳನ್ನು ಸನ್ನಿಧಾನದಿಂದ ಸಂಗ್ರಹಿಸಬಹುದು.
      ಶಬರಿಮಲೆಗೆ  ವಂಡಿಪೇರಿಯಾರ್ ಬಳಿ ಬಂದು  ದರ್ಶನಕ್ಕೆ ಅವಕಾಶವಿಲ್ಲ. ಶಬರಿಮಲೆಗೆ ಶುಚೀಕರಣಕ್ಕೆ ಕೇರಳದಿಂದ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಯಾವುದೇ ಸಾರ್ವಜನಿಕ ಸ್ನಾನವನ್ನು ಬಳಸಲಾಗದ ಕಾರಣ, ಈ ಬಾರಿ ಪಂಪಾ ಸ್ನಾನವನ್ನು ಅನುಮತಿಸಲಾಗುವುದಿಲ್ಲ ಎಂದು ಸಚಿವರು ಹೇಳಿದರು.
ಗುರುವಾಯೂರ್ ದೇವಾಲಯ ದರ್ಶನಕ್ಕಾಗಿ ಆನ್‍ಲೈನ್  ನೋಂದಣಿ ಪ್ರಾರಂಭಿಸಲಾಗುವುದು ಎಂದು ಸಚಿವರು ತಿಳಿಸಿದರು. ಆನ್‍ಲೈನ್‍ನಲ್ಲಿ ನೋಂದಾಯಿಸುವವರಿಗೆ ಮಾತ್ರ ದೇವಾಲಯದ ಪ್ರವೇಶನ. ದಿನಕ್ಕೆ 600 ಜನರಿಗೆ ದರ್ಶನ ಒದಗಿಸಲು ಇದನ್ನು ವ್ಯವಸ್ಥೆ ಮಾಡಲಾಗಿದೆ. ಒಂದು ಗಂಟೆಯಲ್ಲಿ 150 ಜನರಿಗೆ ದರ್ಶನಕ್ಕೆ ಅವಕಾಶ ಇರುತ್ತದೆ. ಭೇಟಿ ಸಮಯ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30 ರ ವರೆಗೆ ದರ್ಶನ ಸಮಯ. ವಿ.ಐ.ಪಿ. ಪ್ರವೇಶ ಇರುವುದಿಲ್ಲ. ಆನ್‍ಲೈನ್‍ನಲ್ಲಿ ನೋಂದಾಯಿಸಿಕೊಳ್ಳುವವರಿಗೆ ವಿಶೇಷ ಸಮಯ ನೀಡಲಾಗುವುದು. ಬ್ಯಾಚ್ ಆಧಾರದ ಮೇಲೆ ದರ್ಶನ ಅನುಮತಿಸಲಾಗುವುದು. ಪ್ರತಿ ಬ್ಯಾಚ್‍ನಲ್ಲಿ 50 ಜನರಿದ್ದರೆ  ಗಂಟೆಗೆ ಮೂರು ಬ್ಯಾಚ್ ದರ್ಶನಗಳನ್ನು ಅನುಮತಿಸಲಾಗುವುದು.
       ಸಾಮಾಜಿಕ ದೂರವನ್ನು ಸರಿಯಾಗಿ ಪಾಲಿಸುವ ರೀತಿಯಲ್ಲಿ ವ್ಯವಸ್ಥೆ ಇರುತ್ತದೆ. ಪ್ರತಿ ಬ್ಯಾಚ್ ದರ್ಶನ ಮಾಡಿ ಮುಂದುವರೆದಂತೆ ಸಾನಿಟೈಸ್ ಮಾಡಲಾಗುವುದು. ಹ್ಯಾಂಡ್‍ವಾಶ್ ಮತ್ತು ಸಾನಿಟೈಸ್ ಲಭ್ಯವಿರುತ್ತದೆ. ನೌಕರರು ಮತ್ತು ದಾರ್ಶನಿಕರು ಮಾಸ್ಕ ಧರಿಸಬೇಕು. ಪ್ರಸಾದ, ತೀರ್ಥ ಮತ್ತು ನೈವೇದ್ಯ ಮುಂತಾದವು ನೀಡಲಾಗುವುದಿಲ್ಲ.
ಗುರುವಾಯೂರಿನಲ್ಲಿ ವಿವಾಹಗಳು ಪ್ರಾರಂಭವಾಗಿವೆ. ಒಂದು ದಿನಕ್ಕೆ ಗರಿಷ್ಠ 60 ಮದುವೆಗಳಿಗೆ ಅವಕಾಶ ನೀಡಲಾಗಿದೆ. ಮದುವೆಯಾಗಲು ಸಮಯ ಬೆಳಗ್ಗೆ 5 ರಿಂದ ಮಧ್ಯಾಹ್ನ 1.30 ರ ವರೆಗೆ. ನೋಂದಣಿ ಪ್ರಕಾರ ಮದುವೆಯ ಸಮಯವನ್ನು ವ್ಯವಸ್ಥೆಗೊಳಿಸಲಾಗುವುದು. ಮದುವೆಗೆ 10 ನಿಮಿಷಗಳನ್ನು ನಿಗದಿಪಡಿಸಲಾಗುತ್ತದೆ. ವಧು-ವರರು ಸೇರಿದಂತೆ ಗರಿಷ್ಠ 10 ಜನರು ಭಾಗವಹಿಸಬಹುದು. ಮದುವೆ ತಂಡ ಅರ್ಧ ಗಂಟೆ ಮುಂಚಿತವಾಗಿ ಆಗಮಿಸಿ ಮೆಲ್ಪಾಥೂರ್ ಸಭಾಂಗಣದಲ್ಲಿ ಕಾಯಬೇಕು. ಅಲ್ಲಿ ಸಾಮಾಜಿಕ ಅಂತರ ಪಾಲಿಸಿ ಕಾಯಲು ಅನುಕೂಲಕರವಾಗಿದೆ. ಅಲ್ಲಿ ದಾಖಲೆಗಳು ಮತ್ತು ಗುರುತಿನ ಚೀಟಿಗಳ ಪರಿಶೋಧನೆ, ವೈದ್ಯಕೀಯ ತಪಾಸಣೆ ನಡೆಸಲು ವ್ಯವಸ್ಥೆ  ಮಾಡಲಾಗಿದೆ ಅವರು ತಿಳಿಸಿದರು.
ಕೇರಳದ ಉಳಿದ ಎಲ್ಲಾ ದೇವಾಲಯಗಳಲ್ಲೂ ಸಾರ್ವಜನಿಕರು  ನಿಗದಿಪಡಿಸಿದ ಮಾನದಂಡಗಳನ್ನು ಪಾಲಿಸಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries